ತಮಿಳು ನಟ ವಿಜಯ್ ಅಭಿನಯದ ಮಾಸ್ಟರ್ ಚಿತ್ರ ಇದೇ ಬುಧವಾರ ಬಿಡುಗಡೆಯಾಗುತ್ತಿದೆ. ಇನ್ನೂ ಮಾಸ್ಟರ್ ಚಿತ್ರದ ಮುಂಗಡ ಟಿಕೆಟ್ ಬುಕ್ಕಿಂಗ್ ಈಗಾಗಲೇ ಆರಂಭವಾಗಿದ್ದು ಎಲ್ಲೆಡೆ ಬುಕಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ವಿಜಯ್ ಸಿನಿಮಾ ಎಂದ ಮೇಲೆ ನಿರೀಕ್ಷೆ ದೊಡ್ಡ ಮಟ್ಟದಲ್ಲಿಯೇ ಇರುತ್ತದೆ ಅಭಿಮಾನಿಗಳು ಸಹ ಚಿತ್ರವನ್ನು ವೀಕ್ಷಿಸಬೇಕು ಎಂದು ಕಾಯುತ್ತಿರುತ್ತಾರೆ.
ತಮಿಳುನಾಡು ಮಾತ್ರವಲ್ಲದೇ ಕರ್ನಾಟಕದಲ್ಲಿಯೂ ಸಹ ಮಾಸ್ಟರ್ ಚಿತ್ರದ ಮುಂಗಡ ಬುಕ್ಕಿಂಗ್ ಆರಂಭವಾಗಿದೆ. ಬೆಂಗಳೂರು ನಗರದಲ್ಲಿಯೂ ಸಹ ಭರ್ಜರಿಯಾಗಿ ಬುಕಿಂಗ್ ನಡೆಯುತ್ತಿದೆ. ಆದರೆ ಈ ವಿಷಯದಲ್ಲಿ ಬೇಸರ ಪಡುವಂತಹ ಒಂದು ಅಂಶ ಕೂಡ ಇದೆ. ಹೌದು ಮಾಸ್ಟರ್ ಚಿತ್ರ ತಮಿಳು, ತೆಲುಗು ಹಾಗೂ ಕನ್ನಡದಲ್ಲಿಯೂ ಸಹ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ.
ಬುಕ್ ಮೈ ಶೋ ಅಪ್ಲಿಕೇಶನ್ ನಲ್ಲಿಯೂ ಸಹ ತಮಿಳು ಮತ್ತು ಕನ್ನಡ ಎರಡೂ ಭಾಷೆಯಲ್ಲಿ ಸಿನಿಮಾ ಬುಕ್ ಮಾಡುವ ಅವಕಾಶವಿದೆ. ವಿಪರ್ಯಾಸವೇನೆಂದರೆ ಈವರೆಗೆ ಆಯೋಜಿಸಲಾಗಿರುವ ಮಾಸ್ಟರ್ ಕನ್ನಡ ಅವತರಣಿಕೆಯ ಶೋಗಳ ಸಂಖ್ಯೆ ಕೇವಲ 13. ಹೌದು ಇದುವರೆಗೆ ಕೇವಲ 13 ಪ್ರದರ್ಶನಗಳನ್ನು ಮಾತ್ರ ಬೆಂಗಳೂರಿನಲ್ಲಿ ಮಾಸ್ಟರ್ ಕನ್ನಡಕ್ಕೆ ನೀಡಲಾಗಿದೆ.. ಇನ್ನು ಇದೇ ಸಮಯದಲ್ಲಿ ಇದುವರೆಗೆ ಮಾಸ್ಟರ್ ತಮಿಳು ವರ್ಷನ್ ಗೆ ಬೆಂಗಳೂರಿನಲ್ಲಿ ನೀಡಲಾಗಿರುವ ಶೋಗಳ ಸಂಖ್ಯೆ ಬರೋಬ್ಬರಿ 503!!!

ಹೌದು ಇದುವರೆಗೆ ಬೆಂಗಳೂರಿನಲ್ಲಿ ಒಟ್ಟು 503 ಪ್ರದರ್ಶನಗಳನ್ನು ಮಾಸ್ಟರ್ ತಮಿಳು ವರ್ಷನ್ ಗಾಗಿ ತೆರೆಯಲಾಗಿದೆ. ಇನ್ನು ಬಿಡುಗಡೆಗೆ ಮೂರು ದಿನ ಬಾಕಿ ಇರುವಾಗಲೇ 503 ಶೋಗಳನ್ನು ನೀಡಲಾಗಿದ್ದು, ಬುಧವಾರದವರೆಗೆ ಈ ಸಂಖ್ಯೆ ಯಾವ ಮಟ್ಟಕ್ಕೆ ತಲುಪಲಿದೆ ಎಂಬುದನ್ನ ಕಾದುನೋಡಬೇಕು. ಕೇವಲ 13 ಪ್ರದರ್ಶನಗಳನ್ನು ಕನ್ನಡಕ್ಕೆ ನೀಡಿ ತಮಿಳು ವರ್ಷನ್ ಗೆ 503 ಪ್ರದರ್ಶನವನ್ನು ಕರ್ನಾಟಕದ ಬೆಂಗಳೂರಿನಲ್ಲಿ ಆಯೋಜಿಸಿರುವುದು ಪರೋಕ್ಷವಾಗಿ ಕನ್ನಡದ ಕೊಲೆ ಅಲ್ಲದೆ ಮತ್ತೇನು? ಡಬ್ಬಿಂಗ್ ಬಂದ ಮೇಲೂ ಸಹ ಕನ್ನಡವನ್ನು ಕಡೆಗಣಿಸಿ ಬೇರೆ ಭಾಷೆಯ ಚಿತ್ರಗಳಿಗೆ ಎಷ್ಟು ದೊಡ್ಡ ಮಟ್ಟದ ಬಿಡುಗಡೆಯ ಅಗತ್ಯವಿದೆಯೇ??

ಬೆಂಗಳೂರು ಮಾತ್ರವಲ್ಲದೆ ಮೈಸೂರಿನಲ್ಲಿಯೂ ಸಹ ಇದೆ ಕಥೆ. ತಮಿಳು ಅವತರಣಿಕೆಗೆ ಮಲ್ಟಿಪ್ಲೆಕ್ಸ್ ಮತ್ತು ಸಿಂಗಲ್ ಸ್ಕ್ರೀನ್ ಗಳು ಸಹ ಅತಿ ಹೆಚ್ಚು ಸ್ಕ್ರೀನ್ಗಳನ್ನು ಬಿಟ್ಟುಕೊಟ್ಟಿದ್ದು, ಕನ್ನಡ ಅವತರಣಿಕೆಗೆ ಯಾರು ಸಹ ಮಣೆಯನ್ನು ಹಾಕುತ್ತಿಲ್ಲ.






