ಬೆಂಗಳೂರಿನಲ್ಲಿ ಉಗ್ರನ ಸೆರೆ

Date:

ಐಸಿಸ್ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಆರೋಪದ ಮೇಲೆ ಶಂಕಿತ ಉಗ್ರನನ್ನು ಎನ್.ಐ.ಎ. ಅಧಿಕಾರಿಗಳು ಬಂಧಿಸಿದ್ದಾರೆ.

ಫ್ರೇಜರ್ ಟೌನ್ ನಿವಾಸಿ ಮೊಹಮ್ಮದ್ ತೌಕಿರ್(33) ಬಂಧಿತ ಆರೋಪಿ ಎಂದು ಹೇಳಲಾಗಿದೆ. ನಿಷೇಧಿತ ಐಸಿಸ್ ಸೇರಿದಂತೆ ವಿವಿಧ ಸಂಘಟನೆಗಳೊಂದಿಗೆ ಈತ ನಂಟು ಹೊಂದಿದ್ದ.

ಉಗ್ರ ಕೃತ್ಯಕ್ಕೆ ಫಂಡಿಂಗ್ ಮಾಡುತ್ತಿದ್ದ ತೌಕಿರ್ ಸ್ಥಳೀಯ ಯುವಕರಿಗೆ ಪ್ರಚೋದನೆ ನೀಡುತ್ತಿದ್ದ ಆರೋಪ ಕೇಳಿಬಂದಿದೆ.

ಈ ಹಿಂದೆ ಅಬ್ದುಲ್ ಖಾದರ್ ಮತ್ತು ಇರ್ಫಾನ್ ನಾಸಿರ್ ಎಂಬುವರನ್ನು ಎನ್.ಐ.ಎ. ಬಂಧಿಸಿದ್ದು, ಕಳೆದ ಏಪ್ರಿಲ್ ನಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ. ಈ ಪ್ರಕರಣದ ತನಿಖೆ ವೇಳೆ ತೌಕಿರ್ ಸುಳಿವು ಸಿಕ್ಕಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕಿ ಆತನನ್ನು ಬಂಧಿಸಲಾಗಿದೆ. ಈತ ಸ್ಥಳೀಯ ಯುವಕರನ್ನು ಐಸಿಸ್ ಸೇರಲು ಪ್ರೇರೇಪಿಸುತ್ತಿದ್ದ ಸಿರಿಯಾಗೆ ಭೇಟಿ ನೀಡಿದ್ದ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.

Share post:

Subscribe

spot_imgspot_img

Popular

More like this
Related

Mantri Mall: ಮತ್ತೆ ಮಲ್ಲೇಶ್ವರಂ ಮಂತ್ರಿ ಮಾಲ್ʼ​ಗೆ ಬಿತ್ತು ಬೀಗ!

Mantri Mall: ಮತ್ತೆ ಮಲ್ಲೇಶ್ವರಂ ಮಂತ್ರಿ ಮಾಲ್ʼ​ಗೆ ಬಿತ್ತು ಬೀಗ! ಬೆಂಗಳೂರು: ಕೋಟಿ...

ಭ್ರಷ್ಟ-ಜನವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಹೋರಾಟಕ್ಕೆ ನಿರ್ಧಾರ: ವಿಜಯೇಂದ್ರ

ಭ್ರಷ್ಟ-ಜನವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಹೋರಾಟಕ್ಕೆ ನಿರ್ಧಾರ: ವಿಜಯೇಂದ್ರ ದಕ್ಷಿಣ ಕನ್ನಡ:...

ಮಧುಮೇಹದ ಮುನ್ನ ಬರುವ ಲಕ್ಷಣಗಳು: ನಿರ್ಲಕ್ಷ್ಯ ಮಾಡಿದರೆ ಅಪಾಯ ಗಂಭೀರ

ಮಧುಮೇಹದ ಮುನ್ನ ಬರುವ ಲಕ್ಷಣಗಳು: ನಿರ್ಲಕ್ಷ್ಯ ಮಾಡಿದರೆ ಅಪಾಯ ಗಂಭೀರ ಇತ್ತೀಚಿನ ದಿನಗಳಲ್ಲಿ...

ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರು ಅರೆಸ್ಟ್.!‌

‌ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರು ಅರೆಸ್ಟ್.!‌ ಬೆಂಗಳೂರು: ಸಿಲಿಕಾನ್‌...