ಬೆಂಗಳೂರಿನಲ್ಲಿ ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ- ಭಾರತದಾದ್ಯಂತ ಇಂದಿನ ದರ ಎಷ್ಟಿದೆ?
ಬಂಗಾರ ಕೊಳ್ಳಲು ಹಬ್ಬಗಳು, ಮದುವೆಗಳು ನೆಪವಷ್ಟೆ. ಅಂತಿಮವಾಗಿ ಇದು ಉಳಿತಾಯ, ನಮ್ಮಲ್ಲೂ ಒಂದಿಷ್ಟು ಆಭರಣಗಳಿವೆ ಎಂಬ ಸಂತೃಪ್ತಿ. ಹೌದು, ಭಾರತದಲ್ಲಿ ಮೌಲ್ಯಯುತ ವಸ್ತುಗಳಲ್ಲಿ ಮುಂಚೂಣಿಯಲ್ಲಿರುವುದೇ ಚಿನ್ನ.ಆರ್ಥಿಕವಾಗಿ ಕಷ್ಟಕ್ಕಾಗುವ ವಸ್ತು ಎಂಬುವುದು ಒಂದು ಲೆಕ್ಕಾಚಾರವಾದರೆ,
ನಮ್ಮಲ್ಲೂ ಸ್ವಲ್ಪ ಚಿನ್ನ ಇರಲಿ ಎಂಬ ಭಾವನಾತ್ಮಕ ನಂಟು ಮತ್ತೊಂದೆಡೆ. ನಗದು ಹಣ ಇಲ್ಲವಾದರೆ, ಚಿನ್ನ ಮಾರಿಯಾದರೂ ಹಣದ ಅಡಚಣೆಗಳನ್ನು ಕಮ್ಮಿ ಮಾಡಿಕೊಳ್ಳಬಹುದು. ಇದೇ ಕಾರಣಕ್ಕೆ ಬಂಗಾರವನ್ನು ಎಲ್ಲರೂ ಖರೀದಿಸಲು ತಮ್ಮ ಆದಾಯವನ್ನು ವಿನಿಯೋಗಿಸುತ್ತಾರೆ.
ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಇಂದು 6 ರೂಪಾಯಿ ಇಳಿಕೆ ಆಗಿದೆ. ಇಂದಿನ ಚಿನ್ನದ ದರ 24 ಕ್ಯಾರೆಟ್ 1 ಗ್ರಾಂ ಗೆ 10,069 ರೂ ಆಗಿದೆ, 22 ಕ್ಯಾರೆಟ್ 1 ಗ್ರಾಂ ಬೆಲೆ ಕೂಡಾ 5 ರೂ ಇಳಿಕೆ ಆಗಿ, 9,230 ರೂಪಾಯಿಗೆ ಇಳಿಕೆ ಆಗಿದೆ.
24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯಲ್ಲಿ ಇಂದು 60 ರೂ ಕಡಿಮೆ ಆಗಿದೆ. ಇಂದಿನ ಬೆಲೆ 1,00,690 ರೂ ಆಗಿದೆ. 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 50 ರೂ ಕಡಿಮೆ ಆಗಿ, ಇಂದಿನ ಬೆಲೆ 92,300 ರೂ ಆಗಿದೆ. ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 10,069 ರೂ ಇದೆ. ಬೆಳ್ಳಿಯ ಬೆಲೆಯೂ 10 ಪೈಸೆ ಇಳಿಕೆ ಆಗಿ 109.90 ರೂ ಆಗಿದ್ದು, 1,09,900 ರೂ ಆಗಿದೆ,