No menu items!
10.6 C
Munich
Friday, July 24, 2026

ರಾಜ್ಯದಲ್ಲಿ ಮುಂದಿನ 6 ದಿನಗಳ ಕಾಲ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ

Must read

ರಾಜ್ಯದಲ್ಲಿ ಮುಂದಿನ 6 ದಿನಗಳ ಕಾಲ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ 6 ದಿನಗಳ ಕಾಲ ಭಾರೀ ಮಳೆಯಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಮಳೆಯ ಅಲರ್ಟ್ ನೀಡಿ ಎಚ್ಚರಿಕೆ ನೀಡಲಾಗಿದೆ. ಕರಾವಳಿ, ಮಲೆನಾಡಿನ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಿದ್ರೆ, ಇತ್ತ ಬೆಂಗಳೂರಿಗೆ ಇಂದು ಯೆಲ್ಲೋ ಅಲರ್ಟ್ ನೀಡಲಾಗಿದೆ.
ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಹಾಸನ, ದಾವಣಗೆರೆ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರದಲ್ಲಿ ಸಾಧಾರಣ ಮಳೆಯಾಗಲಿದೆ. ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್ನಲ್ಲಿ ಒಣಹವೆ
ಮುಂದುವರೆಯಲಿದೆ. ಹಾವೇರಿ, ಗದಗ, ಧಾರವಾಡ, ಬೆಳಗಾವಿಯಲ್ಲಿ ಸಣ್ಣ ಪ್ರಮಾಣದ ಮಳೆಯಾಗಲಿದೆ. ಕದ್ರಾ, ಆಗುಂಬೆ, ಕ್ಯಾಸಲ್ರಾಕ್, ಖಾನಾಪುರ್, ಮಂಕಿ, ಯಲ್ಲಾಪುರ, ಸಿದ್ದಾಪುರ, ಭಾಗಮಂಡಲ, ಕಮ್ಮರಡಿ, ಶೃಂಗೇರಿ, ಕೊಪ್ಪ, ಸೋಮವಾರಪೇಟೆ, ಮಾಣಿ, ಪುತ್ತೂರು, ಬೆಳ್ತಂಗಡಿ, ಗೇರುಸೊಪ್ಪ, ಅಂಕೋಲಾ, ಜೋಯ್ಡಾ, ಹಿರೇಕೆರೂರು, ಸಂಕೇಶ್ವರ, ಲೋಂಡಾ, ನಿಪ್ಪಾಣಿ, ಧಾರವಾಡ, ಆನವಟ್ಟಿ, ದಾವಣಗೆರೆ, ಹುಣಸೂರಿನಲ್ಲಿ ಮಳೆಯಾಗಿದೆ.

- Advertisement -spot_img

More articles

- Advertisement -spot_img

Latest article