ಬೆಂಗಳೂರಿನಲ್ಲಿ ಡೆಂಗ್ಯೂಗೆ ಮತ್ತೊಂದು ಬಲಿ!

tnit editors
0 Min Read

ಬೆಂಗಳೂರು: ಬೆಂಗಳೂರಿನಲ್ಲಿ ಡೆಂಘೀ ಸದ್ದಿಲ್ಲದೆ ಸವಾರಿ ಹೊರಟಿದೆ. ಬೆಂಗಳೂರಿನಲ್ಲಿ ಡೆಂಗ್ಯೂಗೆ ಮತ್ತೊಂದು ಬಲಿಯಾಗಿದೆ. ಕಗ್ಗದಾಸಪುರದ 27 ವರ್ಷದ ಯುವಕ ಡೆಂಗ್ಯೂ ಸೋಂಕಿನಿಂದ ಸಾವನ್ನಪ್ಪಿರುವುದಾಗಿ ಬಿಬಿಎಂಪಿ ಹೆಲ್ತ್ ಆಡಿಟ್ದೃಢಪಡಿಸಿದೆ. ಕಳೆದ ಶುಕ್ರವಾರ ಎರಡು ಡೆಂಗ್ಯೂ ಶಂಕಿತ ಸಾವು ಪ್ರಕರಣಗಳು ಸಂಭವಿಸಿತ್ತು.
ಆ ಪೈಕಿ ಕಗ್ಗದಾಸಪುರದ ಯುವಕನ ಸಾವಿಗೆ ಡೆಂಗ್ಯೂ ಕಾರಣ. ಆದರೆ 80 ವರ್ಷದ ವೃದ್ಧೆಯ ಸಾವಿಗೆ ಡೆಂಗ್ಯೂ ಕಾರಣವಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ. 80ರ ವೃದ್ಧೆಯ ಸಾವಿಗೆ ಕಾರಣ ಕ್ಯಾನ್ಸರ್ ಎಂದೂ ಬಿಬಿಎಂಪಿ ಹೆಲ್ತ್ ಆಡಿಟ್ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ

Share This Article