ಬೆಂಗಳೂರು: ಬೆಂಗಳೂರಿನಲ್ಲಿ ದಿನೇ ದಿನೇ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತಿದೆ. ಹೌದು ಬಿಸಿಲು-ಮಳೆ ಮಧ್ಯೆ ಬೆಂಗಳೂರಿನಲ್ಲಿ ಡೆಂಘಿ ಪ್ರಕರಣಗಳು ಶುರುವಾಗಿವೆ. ಒಂದು ತಿಂಗಳಿನಲ್ಲಿ ಸಾವಿರಾರು ಡೆಂಘಿ ಪ್ರಕರಣಗಳು ಈಗಾಗಲೇ ದಾಖಲಾಗಿವೆ. ಮಳೆಯಿಂದಲೂ ಡೆಂಘಿ ಪ್ರಕರಣ ಹೆಚ್ಚಾಗುತ್ತಿದೆಯಂತೆ. ಪ್ರತಿನಿತ್ಯ 50-60 ಪ್ರಕರಣಗಳು ನಗರದ ನಾನಾ ಭಾಗಗಳಲ್ಲಿ ದಾಖಲಾಗುತ್ತಿವೆ. . ಏಪ್ರಿಲ್ ನಿಂದ ಮೇ 10ರವೆಗೆ ಪಾಲಿಕೆ ವ್ಯಾಪ್ತಿಯಲ್ಲಿ 930 ಪ್ರಕರಣ ದಾಖಲಾಗಿವೆ ಒಟ್ಟು 1974 ಟೆಸ್ಟ್ ಗಳಲ್ಲಿ 930 ಜನರಿಗೆ ಡೆಂಘಿ ಪಾಸಿಟಿವ್ ಬಂದಿದೆ.
ಇನ್ನು ರಾಜ್ಯದಲ್ಲಿ ಒಟ್ಟು 2,500 ಡೆಂಘಿ ಪ್ರಕರಣಗಳು ಪತ್ತೆಯಾಗಿವೆ. ಮಳೆಯ ಹಿನ್ನೆಲೆ ಡೆಂಘಿ ನಿರ್ಲಕ್ಷ್ಯ ಮಾಡಿದ್ರೆ ಇನ್ನೂ ಹೆಚ್ಚಳ ಸಾಧ್ಯತೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಗಮನಾರ್ಹವೆಂದರೆ ನಗರದ ಸೌತ್ ಝೋನ್ ನಲ್ಲಿ ಅತಿಹೆಚ್ಚು 453 ಪ್ರಕರಣಗಳು ದಾಖಲುಗೊಂಡಿವೆ. ಡೆಂಘಿ ಪ್ರಕರಣ ತಾಂಡವವಾಡುತ್ತಿರುವುದು ಆರೋಗ್ಯ ಇಲಾಖೆಗೆ ಇದೀಗ ತಲೆ ಬಿಸಿಯಾಗಿದೆ. ಡೆಂಘಿ ತಡೆಗೆ ಬಿಬಿಎಂಪಿ ಪಾಲಿಕೆ ಮುಂದಾಗಿದೆ. ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.
ಹಾಗಿದ್ರೆ ಆರೋಗ್ಯ ಇಲಾಖೆಯಿಂದ ಯಾವೆಲ್ಲಾ ಕ್ರಮಗಳು…?
ಈಡಿಸ್ ಸೊಳ್ಳೆಯ ಉತ್ಪತ್ತಿಯನ್ನು ತಡೆಗಟ್ಟಲು ಉತ್ಪತ್ತಿ ತಾಣ ನಾಶ ಚಟುವಟಿಕೆ ನಡೆಸುವುದು
ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ನಿಗದಿತ ಸಂಖ್ಯೆಯ ಮನೆಗಳಿಗೆ ಪ್ರತಿದಿನ ಭೇಟಿ ನೀಡುವುದು
ಜಿಲ್ಲಾಸ್ಪತ್ರೆಗಳಿಗೆ ದಾಖಲಾಗುವ ಖಚಿತ ಡೆಂಗಿ ಪ್ರಕರಣಗಳ ಮಾಹಿತಿಯನ್ನು ಪಡೆಯಲು ಸೂಚನೆ
ಶಂಕಿತ ಪ್ರಕರಣಗಳಿದ್ದಲ್ಲಿ ಮುಂದಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ
ನೀರು ಸಂಗ್ರಹವಾದ ಜಾಗವನ್ನು ಒಣಗಲು ವಾರದಲ್ಲಿ ಒಂದು ದಿನ ಮೀಸಲಿಡುವುದು
ಶಂಕಿತ ಡೆಂಗ್ಯೂ ಜ್ವರ ಪ್ರಕರಣಗಳ ಪರೀಕ್ಷೆಗಾಗಿ ಎಲ್ಲಾ ಟೆಸ್ಟಿಂಗ್ ಕಿಟ್ ಗಳ ಲಭ್ಯವಾಗಿಸುವುದು
ಡೆಂಗಿ ಪ್ರಕರಣಗಳ ಚಿಕಿತ್ಸೆ ಹಾಗೂ ನಿರ್ವಹಣೆಗೆ ಅಗತ್ಯ ಔಷಧಿಗಳು ಬಗ್ಗೆ ಗಮನಹರಿಸುವುದು