ಬೆಂಗಳೂರಿನಲ್ಲಿ ಶೀಲ ಶಂಕಿಸಿ ಹೆಂಡತಿಯ ಕತ್ತು ಹಿಸುಕಿ ಕೊಲೆ!

Date:

ಬೆಂಗಳೂರಿನಲ್ಲಿ ಶೀಲ ಶಂಕಿಸಿ ಹೆಂಡತಿಯ ಕತ್ತು ಹಿಸುಕಿ ಕೊಲೆ!

ಬೆಂಗಳೂರು: ಹೆಂಡತಿ ಅನೈತಿಕ ಸಂಬಂಧ ಹೊಂದಿದ್ದಾಳೆಂಬ ಅನುಮಾನದಿಂದ ಆಕೆಯನ್ನು ಗಂಡ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಹೆಗ್ಗಡೆ ನಗರದ 1 ನೇ ಕ್ರಾಸ್ ನಲ್ಲಿ ನಿನ್ನೆ ಬೆಳಗ್ಗೆ 10 ಗಂಟೆ ಸುಮಾರಿಗೆ ಜರುಗಿದೆ. ವೇಲಾರಮಣಿ (35) ಮೃತ ದುರ್ಧೈವಿಯಾಗಿದ್ದು, ಗಂಡ ಚಂದ್ರಶೇಖರ್ ನಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ.
ಕೊಲೆ ಆರೋಪಿ ಪತಿ ಚಂದ್ರಶೇಖರ್, ಕ್ಯಾಬ್ ಡ್ರೈವರ್ ಆಗಿದ್ದ. ಅಲ್ಲದೇ 11 ವರ್ಷದ ಹಿಂದೆ ವೇಲಾರಮಣಿ ಜೊತೆ ಮದುವೆಯಾಗಿದ್ದ. ಇವರ ಮದುವೆಗೆ ಸಾಕ್ಷಿ ಎಂಬಂತೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಮೃತ ಮೇಲಾರಮಣಿ, ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿದ್ದಳು ಎನ್ನಲಾಗಿದೆ. ಇನ್ನೂ ಫೋನ್ ನಲ್ಲೇ ಹೆಚ್ಚು ಮಾತನಾಡುತ್ತಿದ್ದ ಪತ್ನಿ ಮೇಲೆ ಗಂಡನಿಗೆ ಅನುಮಾನ ಮೂಡಿದೆ.
ಇದೆ ವಿಚಾರಕ್ಕೆ ನಿನ್ನೆ ಇಬ್ಬರು ಮಕ್ಕಳು ಸ್ಕೂಲಿಗೆ ಹೋದ ಮೇಲೆ ದಂಪತಿಗಳಿಬ್ಬರ ನಡುವೆ ಗಲಾಟೆ ಆಗಿದೆ. ಗಲಾಟೆ ವಿಕೋಪಕ್ಕೆ ಹೋಗಿ ಹೆಂಡ್ತಿ ಕತ್ತು ಹಿಸುಕಿ ಪತಿ ಚಂದ್ರಶೇಖರ್ ಕೊಲೆ ಮಾಡಿದ್ದಾನೆ. ಬಳಿಕ ತಾನೇ ಸಂಪಿಗೆಹಳ್ಳಿ ಠಾಣೆಗೆ ಹೋಗಿ ಆರೋಪಿ ಗಂಡ ಶರಣಾಗಿದ್ದಾನೆ. ನಂತ್ರ ಸ್ಥಳಕ್ಕೆ ತೆರಳಿದ್ದ ಸಂಪಿಗೆಹಳ್ಳಿ ಪೊಲೀಸರು, ಕೊಲೆ ಮಾಡಿದ ಸ್ಥಳ ಪರಿಶೀಲನೆ ನಡೆಸಿ ಮೃತ ದೇಹ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.

Share post:

Subscribe

spot_imgspot_img

Popular

More like this
Related

ಶ್ರೀರಾಮನವಮಿ ಅಂಗವಾಗಿ ಮಾಂಸ ಮಾರಾಟ ನಿಷೇಧ: ಮಾರ್ಚ್ 27ರಂದು ಕಟ್ಟುನಿಟ್ಟಿನ ಆದೇಶ

ಶ್ರೀರಾಮನವಮಿ ಅಂಗವಾಗಿ ಮಾಂಸ ಮಾರಾಟ ನಿಷೇಧ: ಮಾರ್ಚ್ 27ರಂದು ಕಟ್ಟುನಿಟ್ಟಿನ ಆದೇಶ ಬೆಂಗಳೂರು:...

ಕಾಂಗ್ರೆಸ್ ಮುಖಂಡನ ಮೇಲೆ ಕೊಲೆ ಯತ್ನ: ಚಾಕು ಇರಿದು ದುಷ್ಕರ್ಮಿಗಳು ಪರಾರಿ

ಕಾಂಗ್ರೆಸ್ ಮುಖಂಡನ ಮೇಲೆ ಕೊಲೆ ಯತ್ನ: ಚಾಕು ಇರಿದು ದುಷ್ಕರ್ಮಿಗಳು ಪರಾರಿ ಕಾರವಾರ:...

ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಏರಿಕೆ; ಇಂದಿನ ರೇಟ್ ಇಷ್ಟಿದೆ ನೋಡಿ!

ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಏರಿಕೆ; ಇಂದಿನ ರೇಟ್ ಇಷ್ಟಿದೆ ನೋಡಿ! ಬೆಂಗಳೂರು:...

ಇರಾನ್–ಇಸ್ರೇಲ್ ಯುದ್ಧ: ಬೆಳಗಾವಿಯಲ್ಲಿ ಪೆಟ್ರೋಲ್ ಪಂಪ್ʼಗಳ ಮುಂದೆ ಜನಸಾಗರ

ಇರಾನ್–ಇಸ್ರೇಲ್ ಯುದ್ಧ: ಬೆಳಗಾವಿಯಲ್ಲಿ ಪೆಟ್ರೋಲ್ ಪಂಪ್ʼಗಳ ಮುಂದೆ ಜನಸಾಗರಬೆಳಗಾವಿ: ಇರಾನ್ ಮತ್ತು...