ಬೆಂಗಳೂರಿನಲ್ಲಿ ಸಾವಿಗೀಡಾದ ಭಿಕ್ಷುಕನ ಬಳಿ ಸಿಕ್ತು ಕಂತೆ ಕಂತೆ ನೋಟು..
ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿ ಕಳೆದ 15 ವರ್ಷಗಳಿಂದ ಭಿಕ್ಷೆ ಬೇಡುತ್ತಿದ್ದ 75 ವರ್ಷದ ವ್ಯಕ್ತಿ ಷರೀಫ್ ಸಾಬ್ ಎಬ್ಬುವರು ಇಂದು ಬೆಳಗ್ಗೆ 10 ಗಂಟೆಗೆ ಸುಮಾರಿಗೆ ಮೂತ್ರ ವಿಸರ್ಜನೆಗೆ ತೆರಳಿದ್ದ ಸಂದರ್ಭದಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ.. ಮೃತದೇಹವನ್ನ ಕಂಡ ಸ್ಥಳೀಯರು ತಕ್ಷಣವೆ ವಿಚಾರವನ್ನ ಪೊಲೀಸರಿಗೆ ಮುಟ್ಟಿಸಿದ್ದಾರೆ.. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಈ ಭಿಕ್ಷುನ ಬಳಿ ಇತುವ ಕತೆ ಕತೆ ಹಣ ಸಹ ಪತ್ತೆಯಾಗಿದೆ..
15 ವರ್ಷಗಳಿಂದ ಇದೇ ಜಾಗದಲ್ಲಿ ಭಿಕ್ಷೆ ಬೇಡಿಕೊಂಡಿದ್ದ ಷರೀಷ್ ಅವರಿಗೆ ಕಳೆದ 5 ವರ್ಷಗಳ ಹಿಂದೆ ಗ್ಯಾಗ್ರೀನ್ ನಿಂದ ಕಾಲು ತೆಗೆಯಲಾಗಿತ್ತು.. ಬಳಿಕ ಕೃತಕ ಕಾಲು ಅಳವಡಿಸಿಲಾಗಿತ್ತು.. ಸದ್ಯ ಅಳವಡಿಸಲಾಗಿದ್ದ ಕೃತಕ ಕಾಲಿನಲ್ಲಿ ಹಣ ಪತ್ತೆಯಾಗಿದೆ.. ಈ ಹಣವನ್ನ ಲೆಕ್ಕ ಹಾಕಲಾಗಿ 96 ಸಾವಿರ ರೂ ಪತ್ತೆಯಾಗಿದೆ.. ಸದ್ಯ ಘಟನೆ ಕುರಿತು ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..