ಬೆಂಗಳೂರಿನಲ್ಲಿ ನಾಲ್ಕನೇ ವ್ಯಕ್ತಿಗೆ ಒಮಿಕ್ರಾನ್ ವೈರಸ್ ಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.ಹೈರಿಸ್ಕ್ ದೇಶದಿಂದ ಬಂದಂತಹ ವ್ಯಕ್ತಿಗೆ ಸೋಂಕು ಇರುವ ಶಂಕೆ ವ್ಯಕ್ತವಾಗಿದೆ.ಇನ್ನೂ ಕೂಡ ಹೊಸವೈರಸ್ ಎಂದು ದೃಢಪಟ್ಟಿಲ್ಲ.
ಮಾದರಿಯನ್ನು ಜಿನೋಮಿಕ್ ಸ್ವೀಕ್ವೆನ್ಸ್ ಟೆಸ್ಟ್ ಗೆ ರವಾನಿಸಲಾಗಿದೆ.ಪಾಸಿಟಿವ್ ಬಂದಂತಹ ವ್ಯಕ್ತಿಯನ್ನು ಬೌರಿಂಗ್ ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿದೆ.ಈಗಾಗಲೇ ಮೂರು ಮಂದಿ ವೈರಸ್ ನಿಂದ ಚಿಕಿತ್ಸೆ ಪಡೆಯುತ್ತಿದ್ದು ಅವರಿಗೆ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲ.
ಈ ಹಿಂದೆಯೂ ದಕ್ಷಿಣ ಆಫ್ರಿಕಾದಿಂದ ಬಂದಂತಹ ಇಬ್ಬರು ವ್ಯಕ್ತಿಗಳಿಗೆ ಸೊಂಕು ತಗುಲಿಲ್ಲ ಎಂದೇ ಹೇಳಲಾಗುತ್ತಿತ್ತು.ಆದರೆ ನಿನ್ನೆ ಬಂದಂತಹ ರಿಪೋರ್ಟ್ ಅವರಿಬ್ಬರಿಗೆ omicron virus ತಗುಲಿದ್ದು ದೇಶದಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಎಂದು ದಾಖಲಾಯಿತು.