ಬೆಂಗಳೂರಿನ ಕೆಆರ್ ಮಾರ್ಕೆಟ್ ಸ್ಥಳಾಂತರ

Date:

ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೆ.ಆರ್.ಮಾರುಕಟ್ಟೆಯಲ್ಲಿ ಸಗಟು ಮಾರುಕಟ್ಟೆಯನ್ನು ಸ್ಥಳಾಂತರಿಸುವ ಬಗ್ಗೆ ಬಿಬಿಎಂಪಿ ಚಿಂತನೆ ನಡೆಸಿದೆ.

ವೀಕೆಂಡ್ ಕರ್ಫ್ಯೂ ಜಾರಿ ಹಾಗೂ ಶೇ. 50- 50 ನಿಯಮ ಜಾರಿಗೆ ಬಂದಿದೆ.

ಆದರೆ, ಮಾರ್ಕೆಟ್ ನಲ್ಲಿ ಜನ ಜಂಗುಳಿ ಹೆಚ್ಚಾಗಿದೆ. ಸಾಮಾನ್ಯ ದಿನದಂತೆ ಖರೀದಿ ಜೋರಾಗಿದ್ದು, ಸಂಕ್ರಾಂತಿ, ವೈಕುಂಠ ಏಕಾದಶಿ ಹಬ್ಬಕ್ಕಾಗಿ ವ್ಯಾಪಾರ ವಹಿವಾಟು ಹೆಚ್ಚಿದೆ.

ಈ ಎಲ್ಲ ಕಾರಣಗಳಿಂದ ಮಾರುಕಟ್ಟೆಯನ್ನು ಬಸವನಗುಡಿ ನ್ಯಾಷನಲ್ ಕಾಲೇಜು ಗ್ರೌಂಡ್ ಗೆ ಸ್ಥಳಾಂತರಿಸುವ ಬಗ್ಗೆ ಪಾಲಿಕೆ ಚರ್ಚೆಯಲ್ಲಿ ತೊಡಗಿದೆ. ಜನರ ನಿರ್ಲಕ್ಷ್ಯದ ಬಗ್ಗೆ ಮಾಧ್ಯಮಗಳು ಸವಿವರ ವರದಿ ಪ್ರಕಟಿಸಿ ಸರಕಾರ ಹಾಗೂ ಅಧಿಕಾರಿಗಳ ಗಮನ ಸೆಳೆದಿದೆ.

ಈ ಹಿನ್ನೆಲೆಯಲ್ಲಿ ಹೂ- ಹಣ್ಣು, ತರಕಾರಿ ವ್ಯಾಪಾರ ಸ್ಥಳವನ್ನು ನ್ಯಾಷನಲ್ ಕಾಲೇಜು ಗ್ರೌಂಡ್ ಗೆ ಸ್ಥಳಾಂತರಿಸುವ ಸಾಧ್ಯತೆಯಿದೆ. ಈ ಬಗ್ಗೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸುಳಿವು ನೀಡಿದ್ದಾರೆ.

Share post:

Subscribe

spot_imgspot_img

Popular

More like this
Related

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ ಬೆಂಗಳೂರು:...

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ ಬಳಕೆ – ರಾಹುಲ್ ಆರೋಪ

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ...

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ ಬೆಂಗಳೂರು :...

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ!

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ! ತರಕಾರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯೆಂದು...