ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಇಡೀ ಕನ್ನಡ ಚಿತ್ರರಂಗವೇ ಮರುಕವನ್ನು ವ್ಯಕ್ತಪಡಿಸುತ್ತಿದೆ, ದರ್ಶನ್, ಭುವನ್, ಹರ್ಷಿಕಾ ಪೂಣಚ್ಚ, ರಕ್ಷಿತಾ ಸೇರಿ ಇನ್ನು ಹಲವು ನಟರು ಈ ಘಟನೆಯನ್ನು ಖಂಡಿಸಿದ್ದಾರೆ. ಇದೀಗ ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವನ್ನ ಖಂಡಿಸಿರುವ ನಿರ್ದೇಶಕ ಯೋಗರಾಜ್ ಭಟ್ ಮೃತಳ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಜೊತೆಗೆ ನಿರ್ಭಯಾ ಪ್ರಕರಣಕ್ಕೆ ಈ ಘಟನೆಯನ್ನು ಹೋಲಿಸಿ ನಿರ್ಭಯಾ ಪ್ರಕರಣದಲ್ಲಿ ಇಡೀ ದೇಶವೇ ಎದ್ದು ನಿಂತಿತ್ತು. ಆದ್ರೆ ಮಧು ಪ್ರಕರಣದಲ್ಲೀಗ ಬೆಂಗಳೂರು ಮಲಗಿದೆ ಅಂತ ಕಿಡಿಕಾರಿದ್ದಾರೆ.
ಜೊತೆ ಮೊನ್ನೆ ಬೆಂಗಳೂರಿನಲ್ಲಿ ನಡೆದ ಚುನಾವಣೆಯನ್ನು ನೆನಪಿಸಿರುವ ಭಟ್ಟರು ಮತದಾನದಲ್ಲಿ ಜನ ಮಗ್ನರಾಗಿದ್ದರು ಅಂದುಕೊಳ್ಳೋಣ ಅಂದರೆ ಸಿಲಿಕಾನ್ ಸಿಟಿಯಲ್ಲಿ ಮತದಾನವಾಗಿದ್ದೇ ಶೇ.45% ಎಂದು ಬೇಸರ ವ್ಯಕ್ತಪಡಿಸುವುದರ ಜೊತೆಗೆ ತಡವಾದರೂ ಪರವಾಗಿಲ್ಲ ಮುಗ್ಧ ಹೆಣ್ಣುಮಗಳ ಅತ್ಯಾಚಾರ ಮತ್ತು ಕೊಲೆಯಂತ ಪ್ರಕರಣಕ್ಕೆ ಪ್ರತಿಕ್ರಿಯಿಸಿ ಎಂದು ಕರೆ ಕೊಟ್ಟಿದ್ದಾರೆ.
ಯೋಗರಾಜ್ ಭಟ್ಟರು ಮಾಡಿದ ಟ್ವೀಟ್ ಈ ರೀತಿ ಇದೆ..
ಹೂವುಗಳನ್ನ ಸುಡಲು ಬರುವ ಬೆಂಕಿಯನ್ನು ಒಂದೇ ಒಂದು ಕಿಡಿ ಕೂಡ ಉಳಿಯದಂತೆ ನಂದಿಸಲು ಮುಂದಾಗಿ. ಮಧು, ಕಂದಮ್ಮ ನೀ ಇಲ್ಲದಿದ್ದರೂ ನಿನಗೆ ನ್ಯಾಯ ಸಿಗಲಿ. ಹೋಗಿ ಬಾ ತಾಯಿ ಅಂತ ಯೋಗರಾಜ್ ಭಟ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದು ಟ್ವೀಟ್ ಮಾಡಿ ವಿಷಾದ ವ್ಯಕ್ತಪಡಿಸಿದ್ದಾರೆ.