ಮಾದಕ ವಸ್ತು ನಿಯಂತ್ರಣ ಮಂಡಳಿ(ಎನ್‍ಸಿಬಿ) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಇಬ್ಬರು ಡ್ರಗ್ಸ್ ಸ್ಮಗ್ಲರ್‍ಗಳನ್ನು ಬಂಧಿಸಿ 6ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
ಕೇರಳದ ಮಲ್ಲಪುರಂನ ನೌಷದ್(24) ಹಾಗೂ ಕೊಡಗಿನ ಮಹ್ಮದ್ ನೌಷೇರ್(29) ಬಂಧಿತ ಆರೋಪಿಗಳು. ಕಳ್ಳಸಾಗಣೆದಾರರಿಂದ 6ಕೋಟಿ ಮೌಲ್ಯದ ಕೊಕೇನ್, ಆಶಿಶ್, ಚರಸ್, ಗಾಂಜಾ ಮುಂತಾದ ಮಾದಕದ್ರವ್ಯಗಳನ್ನು ಜಪ್ತಿ ಮಾಡಲಾಗಿದೆ.
ಇವರು ಬೆಂಳೂರಿನಿಂದ ಖತಾರ್ ರಾಜಧಾನಿ ದೋಹಾಗೆ ಈ ಮಾದಕ ವಸ್ತುಗಳನ್ನು ಅಕ್ರಮವಾಗಿ ಸಾಗಣೆ ಮಾಡಲು ಯತ್ನಸಿದ್ದರು. ದೋಹಾದಲ್ಲಿ ಈ ಭಾರೀ ಮೌಲ್ಯದ ಡ್ರಗ್ಸ್‍ಗಳನ್ನು ಕಳ್ಳ ಸಾಗಾಣೆ ಮಾಡಲು ಖತಾರ್ ಏರ್‍ಲೈನ್ಸ್ ವಿಮಾನದಲ್ಲಿ ಪ್ರಯಾಣಕ್ಕೆ ಆಸನ ಕಾಯ್ದಿ ಇರಿಸಿದ್ದರು.
ಈ ಬಗ್ಗೆ ಖಚಿತ ಸುಳಿವಿನ ಮೇರೆಗೆ ಎನ್‍ಸಿಬಿ ಅಧಿಕಾರಿಗಳು ವಿಮಾನ ನಿಲ್ದಾಣದ ಉನ್ನತ ಅಧಿಕಾರಿಗಳ ನೇರವಿನೊಂದಿಗೆ ಆರೋಪಿಗಳನ್ನು ಏರ್ ಪೋರ್ಟ್‍ನಲ್ಲಿ ಬಂಧಿಸಿ ಪರಿಶೀಲನೆ ನಡೆಸಿದಾಗ ಟಿಫಿನ್ ಬಾಕ್ಸ್ ಮತ್ತು ಹಾಟ್‍ಕೇಸ್‍ಗಳಲ್ಲಿ ಗೌಪ್ಯವಾಗಿ ಡ್ರಗ್ಸ್‍ಗಳನ್ನು ಬಚ್ಚಿಟ್ಟದ ಸಂಗತಿ ಬಯಲಾಗಿ ನೌಷದ್ ಮತ್ತು ನೌಷೇರ್‍ನನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.