ದರ್ಶನ್ ವಿರುದ್ಧ ಸಿಎಂ ಸಿಡಿಮಿಡಿ… ರಾತ್ರಿ 3 ಗಂಟೆಗೆ ಯಾರ್ರೀ‌ ಕಲ್ಲು ತೂರ್ತಾರೆ ಎಂದು ಪ್ರಶ್ನೆ ಮಾಡಿದ ಕುಮಾರಸ್ವಾಮಿ..!

Must read

ಮುಖ್ಯಮಂತ್ರಿ ಹೆಚ್.ಡಿ‌ ಕುಮಾರಸ್ವಾಮಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿರುದ್ಧ ಸಿಡಿಮಿಡಿ‌ಗೊಂಡಿದ್ದಾರೆ.
ದರ್ಶನ್ ಮನೆ‌ ಮೇಲೆ ನಡೆದ ಕಲ್ಲು ತೂರಾಟದ ಘಟನೆ ಬಗ್ಗೆ ಮಂಡ್ಯದಲ್ಲಿ ಸಿಎಂ ಪ್ರತಿಕ್ರಿಯೆ ನೀಡಿದರು…!
ರಾತ್ರಿ 3 ಗಂಟೆಗೆ ಯಾರು ಮನೆ ಮೇಲೆ ಕಲ್ಲು ತೂರಾಟ ಮಾಡುತ್ತಾರೆ. ನಾನೇ ಭದ್ರತೆ ನೀಡುವಂತೆ ಹೇಳಿದೆ.‌ ಸಿಸಿಟಿವಿ ಫೂಟೇಜ್ ಚೆಕ್ ಮಾಡಿದ್ದರೆ ಎಲ್ಲಾ ಗೊತ್ತಾಗುತ್ತಿತ್ತು. ಆದರೆ ಅವರ ಮನೆ ಮುಂದಿನ ಸಿಸಿಟಿವಿ ಕ್ಯಾಮರಾ ಆಫ್ ಆಗಿತ್ತು…ಅದನ್ನೇಕೆ ಆಫ್ ಮಾಡಿದ್ದರು ಎಂದು ಸಿಎಂ ಪ್ರಶ್ನೆ ಮಾಡಿದರು. ಸಿನಿಮಾ ಡ್ರಾಮ ಹೆಚ್ಚು ದಿನ ನಡೆಯಲ್ಲ ಎಂದರು.

ನಿಖಿಲ್ ಸೋಲಿಸಲು ಅನೇಕರು ಒಂದಾಗಿದ್ದಾರೆ. ಎಷ್ಟು ಜನ ಒಂದಾದರೂ ಗೆಲುವು ನಿಖಿಲ್ ಅವರದ್ದು. ನಿಖಿಲ್ ಸ್ಪರ್ಧೆ ಮಾಡುತ್ತಿರುವುದರಿಂದ ಮಂಡ್ಯ ಬಿಜೆಪಿ‌ ಮುಕ್ತವಾಗಿದೆ ಎಂದರು.
ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ನಡುವೆ ಜಿದ್ದಾಜಿದ್ದಿನ ಹೋರಾಟ ಇದೆ. ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಸುಮತಾ ಅವರಿಗೆ ಬೆಂಬಲ ಘೋಷಿಸಿದೆ

- Advertisement -spot_img

More articles

- Advertisement -spot_img

Latest article