ಬೆಂಗಳೂರು ದಕ್ಷಿಣದಿಂದ 28ರ ತರುಣನಿಗೆ ಮಣೆಹಾಕಲು ಬಿಜೆಪಿ ನಿರ್ಧರಿಸಿ , ಟಿಕೆಟ್ ನೀಡಿದೆ.
ತನ್ನದೇಯಾದ ಮಾತಿನ ಶೈಲಿ ಮೂಲಕ ಗುರುತಿಸಿಕೊಂಡಿರುವ ಬೆಂಕಿ ಚೆಂಡು ತೇಜಸ್ವಿ ಸೂರ್ಯಗೆ ಕಮಲಪಡೆ ಟಿಕೆಟ್ ಘೋಷಣೆ ಮಾಡಿದೆ.
ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ ಹರಿಪ್ರಸಾದ್ ಅವರ ಎದುರು ತೇಜಸ್ವಿ ತೊಡೆತಟ್ಟಿದ್ದಾರೆ.
ದಿವಗಂತ ಅನಂತ್ ಕುಮಾರ್ ಅವರು ಪ್ರತಿನಿಧಿಸುತ್ತಿದ್ದ ಬೆಂಗಳೂರು ದಕ್ಷಿಣವು ಬಿಜೆಪಿಯ ಭದ್ರಕೋಟೆ. ಈ ಕೋಟೆಯಲ್ಲಿ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರೇ ಅಖಾಡಕ್ಕೆ ಇಳಿದು ಕ್ಷೇತ್ರವನ್ನು ಉಳಿಸಿಕೊಳ್ಳುವುದಲ್ಲದೇ ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಬಲದಪಡಿಸಲು ರಣತಂತ್ರ ರೂಪಿಸಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಇದಕ್ಕೂ ಮೊದಲು ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರ ಹೆಸರನ್ನು ರಾಜ್ಯ ಬಿಜೆಪಿ ಸೂಚಿಸಿತ್ತು. ಆದರೆ ತೇಜಸ್ವಿ ಅವರನ್ನು ಕಣಕ್ಕಿಳಿಸಲಾಗುತ್ತಿದೆ.
ಇದಲ್ಲದೆ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೂ ಬಿಜೆಪಿ ತನ್ನ ಅಭ್ಯರ್ಥಿಯನ್ನು ಫೈನಲ್ ಮಾಡಿದೆ. ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವಥ್ ನಾರಾಯಣ್ ಅವರನ್ನು ಡಿ.ಕೆ ಸುರೇಶ್ ಅವರ ವಿರುದ್ಧ ಅಖಾಡಕ್ಕಿಳಿಸಿದೆ. ಅಲ್ಲಿ ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಗೆ ಟಿಕೆಟ್ ನೀಡುತ್ತಾರೆ ಎಂದು ತಿಳಿದುಬಂದಿತ್ತು. ಅದಕ್ಕೆ ವಿರೋಧವೂ ವ್ಯಕ್ತವಾಗಿತ್ತು.
ಬೆಂಗಳೂರು ದಕ್ಷಿಣದಲ್ಲಿ 28ರ ಯುವನಾಯಕನಿಗೆ ಟಿಕೆಟ್ ಕೊಟ್ಟ ಬಿಜೆಪಿ..!
Date: