ಬೆಂಗಳೂರು-ಪಾಂಡಿಚೇರಿ ನಡುವೆ ಐಷಾರಾಮಿ ಬಸ್, ದರ ಎಷ್ಟು ಗೊತ್ತಾ?

1
51

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬೆಂಗಳೂರು-ಪಾಂಡಿಚೇರಿ ನಡುವಿನ ಬಸ್ ಸಂಚಾರವನ್ನು ಪುನರಾರಂಭಿಸಿದೆ. ಐಷಾರಾಮಿ ಬಸ್‌ಗಳು ಈ ಮಾರ್ಗದಲ್ಲಿ ಸಂಚಾರ ನಡೆಸಲಿದ್ದು, ದರಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಬೆಂಗಳೂರು ಕೇಂದ್ರ ವಿಭಾಗದ ವತಿಯಿಂದ ಜನರ ಅನುಕೂಲಕ್ಕಾಗಿ ಬೆಂಗಳೂರು-ಪಾಂಡಿಚೇರಿ ವಯಾ ಹೊಸೂರು ಮಾರ್ಗದಲ್ಲಿ ಬಸ್ ಸಂಚಾರ ಆರಂಭಿಸಲಾಗಿದೆ. ಜುಲೈ 23ರಿಂದಲೇ ಬಸ್‌ಗಳು ಸಂಚಾರ ನಡೆಸಲಿವೆ.

ರಾಜಹಂಸ, ಎಸಿ ಸ್ಲೀಪರ್, ಐರಾವತ ಕ್ಲಬ್ ಕ್ಲಾಸ್ ಬಸ್‌ಗಳು ಬೆಂಗಳೂರು-ಪಾಂಡಿಚೇರಿ ನಡುವೆ ಸಂಚಾರ ನಡೆಸಲಿವೆ. ಪಾಂಡಿಚೇರಿಗೆ ಪ್ರವಾಸ ತೆರಳುವ ಜನರಿಗೆ ಈ ಬಸ್‌ಗಳ ಸೇವೆಯಿಂದ ಸಹಕಾರಿಯಾಗಲಿದೆ. ರಾಜಹಂಸ, ಎಸಿ ಸ್ಲೀಪರ್ ಬಸ್‌ಗಳು ರಾತ್ರಿ ಸಂಚಾರ ನಡೆಸಿದರೆ. ಐರಾವತ ಕ್ಲಬ್ ಕ್ಲಾಸ್ ಬಸ್‌ಗಳು ಹಗಲು ಮತ್ತು ರಾತ್ರಿ ಸಂಚಾರ ನಡೆಸಲಿವೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್‌ಗಳ ದರಪಟ್ಟಿಯನ್ನು ಬಿಡುಗಡೆ ಮಾಡಿದೆ.

 

ಬೆಂಗಳೂರಿನಿಂದ ಹೊರಡುವ ರಾಜಹಂಸ ಬಸ್‌ನಲ್ಲಿ ವಯಸ್ಕರಿಗೆ 430 ರೂ. ದರವಿದೆ. ಎಸಿ ಸ್ಲೀಪರ್‌ ಬಸ್‌ಗಳಲ್ಲಿ 740 ರೂ. ದರವನ್ನು ನಿಗದಿ ಮಾಡಲಾಗಿದೆ. ಐರಾವತ ಕ್ಲಬ್ ಕ್ಲಾಸ್ ಹಗಲು ಬಸ್‌ನಲ್ಲಿ 600 ರೂ. ಮತ್ತು ರಾತ್ರಿ ಬಸ್‌ನಲ್ಲಿ 690 ರೂ. ದರವನ್ನು ಪಾವತಿ ಮಾಡಬೇಕು.

ವೇಳಾಪಟ್ಟಿ; ರಾಜಹಂಸ ಬಸ್‌ ಬೆಂಗಳೂರು ನಗರದಿಂದ 22 ಗಂಟೆಗೆ ಹೊರಟು 4.45ಕ್ಕೆ ಪಾಂಡಿಚೇರಿ ತಲುಪುತ್ತದೆ. ಪಾಂಡಿಚೇರಿಯಿಂದ 20.15ಕ್ಕೆ ಹೊರಟು 4.10ಕ್ಕೆ ಬೆಂಗಳೂರು ನಗರಕ್ಕೆ ಆಗಮಿಸುತ್ತದೆ.

ಎಸಿ ಸ್ಲೀಪರ್ ಬಸ್ 21.38ಕ್ಕೆ ಬೆಂಗಳೂರು ನಗರದಿಂದ ಹೊರಟು 4.53ಕ್ಕೆ ಪಾಂಡಿಚೇರಿ ತಲುಪುತ್ತದೆ. 20.55ಕ್ಕೆ ಪಾಂಡಿಚೇರಿಯಿಂದ ಹೊರಟು 5 ಗಂಟೆಗೆ ಬೆಂಗಳೂರಿಗೆ ಬರಲಿದೆ. ಐರಾವತ ಕ್ಲಬ್ ಕ್ಲಾಸ್ ಹಗಲು ಬಸ್ 9.31ಕ್ಕೆ ಹೊರಟು 16.41ಕ್ಕೆ ಪಾಂಡಿಚೇರಿ ತಲುಪಲಿದೆ. 10 ಗಂಟೆಗೆ ಪಾಂಡಿಚೇರಿಯಿಂದ ಹೊರಟು 17.15ಕ್ಕೆ ಬೆಂಗಳೂರು ತಲುಪಲಿದೆ. ರಾತ್ರಿ ಬಸ್ 22.35ಕ್ಕೆ ಬೆಂಗಳೂರು ಬಿಟ್ಟು 5.50ಕ್ಕೆ ಪಾಂಡಿಚೇರಿ ತಲುಪಲಿದೆ. 20.45ಕ್ಕೆ ಹೊರಟು 4.15ಕ್ಕೆ ಬೆಂಗಳೂರಿಗೆ ತಲುಪಲಿದೆ.

 

1 COMMENT

LEAVE A REPLY

Please enter your comment!
Please enter your name here