ಬೆಂಗಳೂರು ಹೊರವಲಯದಲ್ಲಿ ಮತ್ತೆ ಚಡ್ಡಿ ಗ್ಯಾಂಗ್ ಆ್ಯಕ್ಟೀವ್: ಸಿಟಿ ಮಂದಿ ಆತಂಕ!

tnit editors
0 Min Read

ಬೆಂಗಳೂರು ಹೊರವಲಯದಲ್ಲಿ ಮತ್ತೆ ಚಡ್ಡಿ ಗ್ಯಾಂಗ್ ಆ್ಯಕ್ಟೀವ್: ಸಿಟಿ ಮಂದಿ ಆತಂಕ!

ಬೆಂಗಳೂರು:- ರಾಜಧಾನಿ ಬೆಂಗಳೂರು ಹೊರ ವಲಯದ ಆನೇಕಲ್ ಭಾಗದಲ್ಲಿ ಚಡ್ಡಿ ಧರಿಸಿ ಕಳ್ಳತನಕಗ್ಕಿಳಿಯುವ ಕಳ್ಳರ ಗ್ಯಾಂಗ್ ಪುನಃ ಸಕ್ರಿಯಗೊಂಡಿದೆ.

ಸರ್ಜಾಪುರದ ಬಿಲ್ಲಾಪುರದಲ್ಲಿರುವ ಅಪಾರ್ಟ್​​ಮೆಂಟ್ ಒಂದರಲ್ಲಿ ಆಯುಧಗಳನ್ನು ಹೊಂದಿದ್ದ 5-ಸದಸ್ಯರ ಕಳ್ಳರ ಗ್ಯಾಂಗ್ ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿಟಿವಿ ಕೆಮೆರಾಗಳಲ್ಲಿ ಸೆರೆಯಾಗಿದೆ.

ರಾಜಧಾನಿ ಬೆಂಗಳೂರು ಹೊರವಲಯದಲ್ಲಿರುವ ಅಪಾರ್ಟ್​​ಮೆಂಟ್ ಮತ್ತು ವಿಲ್ಲಾಗಳಲ್ಲಿ ವಾಸ ಮಾಡುವ ಜನರು ಹೆಚ್ಚು ಜಾಗರೂಕರಾಗಿರಬೇಕಾದ ಅಗತ್ಯ ಎದುರಾಗಿದೆ. ಹಿಂದೆ ಹಲವು ಬಾರಿ ನಗರವಾಸಿಗಳನ್ನು ಆತಂಕಕ್ಕೀಡು ಮಾಡಿದ್ದ ಚಡ್ಡಿ ಧರಿಸಿ ಕಳ್ಳತನಕಗ್ಕಿಳಿಯುವ ಕಳ್ಳರ ಗ್ಯಾಂಗ್ ಪುನಃ ಸಕ್ರಿಯಗೊಂಡಿದೆ.

Share This Article