ದರ್ಶನ್ ಅಭಿಮಾನಿಗಳ ಕುರಿತು ನಟ ಜಗ್ಗೇಶ್ ಅವರು ಕೆಟ್ಟದಾಗಿ ಮಾತನಾಡಿದ್ದಾರೆ ಎಂಬ ಆಡಿಯೋವೊಂದು ಕಳೆದ ವಾರ ಸಖತ್ ವೈರಲ್ ಆಗಿತ್ತು. ಇನ್ನು ಇದರ ಕುರಿತು ನಿನ್ನೆ ಮೈಸೂರಿನಲ್ಲಿ ತೋತಾಪುರಿ ಚಿತ್ರದ ಚಿತ್ರೀಕರಣ ನಡೆಯುವ ಸ್ಥಳಕ್ಕೆ ದರ್ಶನ್ ಅಭಿಮಾನಿಗಳು ತೆರಳಿ ಜಗ್ಗೇಶ್ ಅವರಿಗೆ ಮುತ್ತಿಗೆ ಹಾಕಿದ್ದರು. ದರ್ಶನ್ ಅಭಿಮಾನಿಗಳು ಈ ರೀತಿ ಮುತ್ತಿಗೆ ಹಾಕಿದ ಸುದ್ದಿ ಕಾಳ್ಗಿಚ್ಚಿನಂತೆ ರಾಜ್ಯದ ತುಂಬ ಹಬ್ಬಿತು.
ಯಾವ ನ್ಯೂಸ್ ಚಾನೆಲ್ ಹಾಕಿದರೂ ಇದೇ ಸುದ್ದಿ, ಸೋಷಿಯಲ್ ಮೀಡಿಯಾ ತೆಗೆದರೂ ಇದೇ ಸುದ್ದಿ , ವಾಟ್ಸ್ ಆ್ಯಪ್ ನಲ್ಲಿಯೂ ಇದೆ ಫಾರ್ವರ್ಡ್ ಮೆಸೇಜ್ ಇಷ್ಟರ ಮಟ್ಟಿಗೆ ವೈರಲ್ ಆಗಿದೆ ಜಗ್ಗೇಶ್ ಅವರಿಗೆ ದರ್ಶನ್ ಫ್ಯಾನ್ಸ್ ಹಾಕಿದ ಮುತ್ತಿಗೆಯ ಸುದ್ದಿ..
ಇನ್ನೂ ಇಷ್ಟು ದೊಡ್ಡ ಮಟ್ಟದಲ್ಲಿ ಈ 1ಸುದ್ದಿ ವೈರಲ್ ಆಗಿದ್ದರೂ ಸಹ ದರ್ಶನ್ ಅವರು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಯಾವುದಾದರೂ ವಿವಾದ ಆದಾಗ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ದರ್ಶನ್ ಅವರು ಜಗ್ಗೇಶ್ ಅವರ ವಿಚಾರದಲ್ಲಿ ಇಷ್ಟು ದೊಡ್ಡ ಮಟ್ಟದ ಗಲಭೆ ಎದ್ದಿದ್ದರೂ ಸಹ ಮೌನವಹಿಸಿರುವುದು ಇದೀಗ ಎಲ್ಲರಲ್ಲಿಯೂ ಅನುಮಾನವನ್ನು ಮೂಡಿಸಿದೆ.
ದರ್ಶನ್ ಅವರು ಜಗ್ಗೇಶ್ ಅವರ ವಿರುದ್ದ ಮುನಿಸಿಕೊಂಡಿದ್ದಾರಾ? ತಮ್ಮ ಅಭಿಮಾನಿಗಳು ಜಗ್ಗೇಶ್ ಅವರಿಗೆ ಏನಾದರೂ ಮಾಡಿಕೊಳ್ಳಲಿ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಜಗ್ಗೇಶ್ ಅವರಿಗೆ ಇದೆಲ್ಲಾ ಆಗಬೇಕಿದ್ದೇ ಅಂತ ನಿಶ್ಚಯಿಸಿಕೊಂಡು ಬಿಟ್ಟಿದ್ದಾರಾ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಹೌದು ಚಂದನವನದ ಒಬ್ಬ ಲೀಡಿಂಗ್ ನಟನಾಗಿ ದರ್ಶನ್ ಅವರ ನಡೆ ಇದೀಗ ಎಲ್ಲರಲ್ಲಿಯೂ ಅನುಮಾನವನ್ನು ಮೂಡಿಸಿದೆ. ದರ್ಶನ್ ಅವರು ಈ ವಿವಾದದ ಕುರಿತು ಯಾವುದೇ ಹೇಳಿಕೆಯನ್ನು ನೀಡದೆ ವಿವಾದ ದೊಡ್ಡದಾಗುವಂತೆ ಮಾಡುತ್ತಿದ್ದಾರೆ ಎನಿಸುತ್ತಿದೆ.
ಜಗ್ಗೇಶ್ ಅವರು ತಪ್ಪು ಮಾಡಿದ್ದಾರೋ ಅಥವಾ ತಪ್ಪು ಮಾಡೇ ಇಲ್ಲವೋ ಎಂಬ ಯಾವುದೇ ವಿಚಾರವನ್ನು ದರ್ಶನ್ ಅವರು ವ್ಯಕ್ತಪಡಿಸುತ್ತಿಲ್ಲ. ಜಗ್ಗೇಶ್ ಅವರು ತಪ್ಪು ಮಾಡಿದ್ದಾರೆ ಅವರು ಹಿರಿಯರು ಹೀಗಾಗಿ ಅವರನ್ನು ಕ್ಷಮಿಸಿದ್ದೇನೆ ಎಂದು ಒಂದು ವೇಳೆ ಜಗ್ಗೇಶ್ ಅವರು ತಪ್ಪು ಮಾಡಿದ್ದರೆ ದರ್ಶನ್ ಅವರು ಅಭಿಮಾನಿಗಳಿಗೆ ಹೇಳಬಹುದು. ಅಥವಾ ಜಗ್ಗೇಶ್ ಅವರು ತಪ್ಪು ಮಾಡದೆ ಇದ್ದರೆ ಜಗ್ಗೇಶ್ ಅವರ ತಪ್ಪು ಇದರಲ್ಲಿ ಏನೂ ಇಲ್ಲ ಅಭಿಮಾನಿಗಳು ಶಾಂತ ರೀತಿಯಲ್ಲಿ ಇರಬೇಕು ಎಂದು ದರ್ಶನ್ ಅವರು ಹೇಳಬೇಕು. ಈ ಎರಡನ್ನೂ ಮಾಡದೆ ದರ್ಶನ್ ಅವರು ತಮ್ಮ ಪಾಡಿಗೆ ತಾವು ಇರುವುದು ಎಷ್ಟು ಸರಿ?