ಬೆನ್ಝ್​ ಕಾರಲ್ಲೇ ವಿಶ್ವಪರ್ಯಟನೆ ಹೊರಟ ದಂಪತಿ ಈಗ ನಮ್ ಮಂಗಳೂರಲ್ಲಿ!

Date:

ಮಾನವೀಯತೆಯಿಂದ ಮಾತ್ರವೇ ವಿಶ್ವಶಾಂತಿ ಸಾಧ್ಯ ಎಂಬುದನ್ನು ವಿಶ್ವದ ಉದ್ದಗಲಕ್ಕೂ ಸಾರುತ್ತಾ ಹೊರಟಿರುವ ಜರ್ಮನ್ ದಂಪತಿ ನಗರಕ್ಕೆ ಆಗಮಿಸಿದ್ದಾರೆ. ಜರ್ಮನಿ ಉದ್ಯಮಿ ಪೀಟರ್ (59) ಹಾಗೂ ಮೂಳೆ ಶಾಸ್ತ್ರಜ್ಞೆ ಅಲೋನಾ (೪೮) ದಂಪತಿ ವಿಶ್ವ ಪರ್ಯಟನೆ ಆರಂಭಿಸಿದ್ದು, ಸದ್ಯ ಕಳೆದ ಮೂರು ವಾರಗಳಿಂದ ಮಂಗಳೂರಿನಲ್ಲಿ ತಂಗಿದ್ದಾರೆ.

2019ರ ಮೇ 1ರಿಂದ ಮರ್ಸಿಡಿಸ್ ಬೆನ್ಝ್ ಕಾರಿನಲ್ಲಿ ವಿಶ್ವಯಾತ್ರೆಯನ್ನು ಕೈಗೊಂಡಿದ್ದಾರೆ. ಈ ಕಾರನ್ನೂ ಸ್ವತಃ ಪೀಟರ್ ಅವರೇ ಒಂದು ಪುಟ್ಟ ಮನೆಯನ್ನಾಗಿ ಪರಿವರ್ತಿಸಿದ್ದಾರೆ. ಕೈ ತೊಳೆಯುವ ಸಿಂಕ್, ಕಾರಿನ ಮೇಲ್ಭಾಗವನ್ನು ತೆರೆದು ಇಬ್ಬರು ವಿಶ್ರಾಂತಿ ಪಡೆಯಲು ಸಾಧ್ಯವಾಗುವ ಕೋಣೆಯಂತಹ ವ್ಯವಸ್ಥೆ ಸೇರಿದಂತೆ ಸಕಲ ರೀತಿಯ ಸೌಲಭ್ಯಗಳು ಇದರಲ್ಲಿದೆ. ಅನ್ಯ ರಾಷ್ಟ್ರಗಳಿಗೆ ಭೇಟಿ ನೀಡಿದಾಗ ಅಲ್ಲಿನ ಗಣ್ಯರು ಸಹಿಹಾಕಿರುವ ಶುಭಾಶಯಗಳೂ ಇದರಲ್ಲಿದೆ.

ಜರ್ಮನಿಯಿಂದ ಪ್ರಯಾಣ ಆರಂಭಿಸಿರುವ ದಂಪತಿ ಪೋಲೆಂಡ್, ಇಟವನ್, ಲೆಟ್ಲಂಟ್, ಐಸ್‌ಲ್ಯಾಂಡ್, ರಷ್ಯಾ, ಮಂಗೋಲಿಯ, ಕಝ್ಕಿಸ್ತಾನ್, ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ತುರ್ಕ್ಮೆನಿಸ್ತಾನ್, ಇರಾನ್, ಬಲೂಚಿಸ್ತಾನ್, ಪಾಕಿಸ್ತಾನವನ್ನು ದಾಟಿ ಕಳೆದ ನವೆಂಬರಿAದ ಭಾರತದಲ್ಲಿ ಪ್ರಯಾಣ ಆರಂಭಿಸಿದ್ದಾರೆ. ಭಾರತದಲ್ಲಿ ಹೊಸದಿಲ್ಲಿ, ಆಗ್ರಾ, ತಾಜ್ ಮಹಲ್, ಎಲ್ಲೋರಾಕ್ಕೆ ಭೇಟಿ ನೀಡಿ ಮೂರು ವಾರಗಳ ಹಿಂದೆ ಮಂಗಳೂರಿಗೆ ಬಂದಿದ್ದಾರೆ.

ಕಾರಿನಲ್ಲಿ ಸಣ್ಣ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಲ್ಲಿನ ಮರ್ಸಿಡಿಸ್ ಕಾರು ಶೋರೂಂ ಸಂಪರ್ಕಿಸಿ ಬಿಡಿ ಭಾಗವನ್ನು ಖರೀದಿಸಲು ಮುಂದಾಗಿದ್ದರು. ಆದರೆ, ಇದೀಗ ಇದರ ಬಿಡಿಭಾಗ ಜರ್ಮನಿಯಿಂದಲೇ ತರಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದ್ದು, ಕಾರು ದುರಸ್ತಿಯಾದ ಬಳಿಕ ಇವರ ಪ್ರಯಾಣ ಮುಂದುವರಿಯಲಿದೆ.

ಈಗಾಗಲೇ ಹಲವು ರಾಷ್ಟçಗಳಿಗೆ ಭೇಟಿ ನೀಡಿದ್ದೇವೆ. ಸ್ನೇಹಮಯ ವಾತಾವರಣದಲ್ಲಿ ಜನರ ಮನಸ್ಸು, ಅವರ ಜೀವನ ಶೈಲಿ, ಸ್ಥಿತಿಗತಿಯನ್ನು ಅರಿತುಕೊಳ್ಳುವುದು ಮತ್ತು ಸುಮಾರು ಒಂದೂವರೆ ವರ್ಷದ ಪ್ರಯಾಣದ ಬಳಿಕ ನಮ್ಮ ಅನುಭವ, ನಾವು ಕಂಡುಕೊAಡ ವಿಶ್ವದ ರಾಷ್ಟçಗಳ ಮಾನವೀಯ ಮುಖ, ಅಲ್ಲಿನ ಜನರ ಜೀವನದ ಸ್ಥಿತಿಗತಿಗಳನ್ನು ಚಿತ್ರಗಳನ್ನೊಳಗೊಂಡ ಪುಸ್ತಕದಲ್ಲಿ ನೀಡುವುದು ಈ ಪ್ರಯಾಣದ ಉದ್ದೇಶ ಎಂದು ಪೀಟರ್ ತಿಳಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...