ಬೆಲ್ಲ ತಿನ್ನುವುದರಿಂದಾಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ..?

Date:

ಬೆಲ್ಲ ತಿನ್ನುವುದರಿಂದಾಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ..?

ನಿತ್ಯವೂ ಸ್ವಲ್ಪ ಬೆಲ್ಲ ತಿನ್ನುವುದು ಆರೋಗ್ಯಕ್ಕೂ ಒಳ್ಳೆಯದು. ಬೆಲ್ಲದಲ್ಲಿ ಸಕ್ಕರೆಗಿಂತ ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯಗಳು ಉಳಿದಿರುತ್ತದೆ. ಬೆಲ್ಲ ಖನಿಜ ಲವಣ, ಕಬ್ಬಿಣ ಮತ್ತು ನಾರನ್ನು ಹೊಂದಿರುತ್ತದೆ. ಕಾಫಿ ಹಾಗೂ ಸಿಹಿ ಪದಾರ್ಥಗಳಿಗೆ ಸಕ್ಕರೆ ಬದಲು ಬೆಲ್ಲ ಬಳಸಿದರೆ ಈ ಪ್ರಮುಖ ಆರೋಗ್ಯಕರ ಗುಣಗಳನ್ನು ಪಡೆಯಬಹುದು
ತೂಕ ಇಳಿಕೆಗೆ ಸಹಕಾರಿ: ಅತಿಯಾದ ಬೊಜ್ಜಿನಿಂದ ನಿಮ್ಮ ತೂಕ ಏರಿಕೆಯಾಗಿದ್ದರೆ ನೀವು ಬೆಲ್ಲವನ್ನ ತಿನ್ನಲು ಶುರು ಮಾಡಿ. ಏನು ಮಾಡಿದರೂ ತೂಕ ಇಳಿಕೆಯಾಗುತ್ತಿಲ್ಲ ಎಂದರೆ ಪ್ರತಿದಿನ ಊಟವಾದ ಮೇಲೆ ಸ್ವಲ್ಪ ಬೆಲ್ಲವನ್ನ ಸೇವಿಸಿ. ಇದರಿಂದ ನಿಮ್ಮ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. ತೆಂಗಿನ ಕಾಯಿ-ಬೆಲ್ಲವನ್ನ ಸೇರಿಸಿಕೊಂಡು ತಿಂದರೆ ಇನ್ನೂ ಉತ್ತಮ. ಇದರಲ್ಲಿರುವ ಪೋಟ್ಯಾಷಿಯಂ ಅಂಶ ದೇಹದಲ್ಲಿ ದ್ರವದ ಅಂಶ ಶೇಖರಣೆ ಆಗುವುದನ್ನು ತಡೆಯುತ್ತದೆ ಮತ್ತು ಚಯಾಪಚಯವನ್ನ ವೃದ್ಧಿಸುತ್ತದೆ. ಈ ಮೂಲಕ ತೂಕದ ಇಳಿಕೆಗೆ ಸಹಾಯಕವಾಗುತ್ತದೆ.
ದೇಹದಲ್ಲಿ ಶಕ್ತಿ ಹೆಚ್ಚಿಸುತ್ತದೆ: ಬೆಲ್ಲದಲ್ಲಿ ಕಾರ್ಬೋಹೈಡ್ರೇಟ್ಗಳು ಸಂಕೀರ್ಣವಾಗಿರುತ್ತವೆ. ಇವು ದೇಹದಲ್ಲಿನ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತವೆ. ತುಂಬ ಆಯಾಸವಾದಾಗ ಸ್ವಲ್ಪ ಬೆಲ್ಲ ತಿಂದು ನೀರು ಕುಡಿದರೆ ತಕ್ಷಣವೇ ನಿಮಗೆ ಶಕ್ತಿ ಬಂದ ಅನುಭವ ಆಗುತ್ತದೆ. ಬೆಲ್ಲದಲ್ಲಿ ರಸಾಯನ (ಪುನರುಜ್ಜೀವನಗೊಳಿಸುವ) ಮತ್ತು ಬಲ್ಯ (ಶಕ್ತಿ ಕೊಡುವ ಸ್ವಭಾವ)ದ ಅಂಶಗಳಿದ್ದು, ಇವು ನಿಮ್ಮ ಒಟ್ಟಾರೆ ಆರೋಗ್ಯವನ್ನು ಸದೃಢಗೊಳಿಸುತ್ತವೆ ಎಂದು ಆಯುರ್ವೇದ ಹೇಳುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಬೆಲ್ಲದ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಲ್ಲಿರುವ ವಿಟಮಿನ್ ಸಿ, ಝಿಂಕ್ ಮತ್ತು ಸೆಲೆನಿಯಮ್ ಅಂಶಗಳು ಇಮ್ಯೂನಿಟಿಯನ್ನ ಉತ್ತೇಜಿಸುತ್ತವೆ. ರೋಗನಿರೋಧಕ ಶಕ್ತಿ ಹೆಚ್ಚಾದಾಗ ಸಹಜವಾಗಿಯೇ ನಮ್ಮ ದೇಹ ಬ್ಯಾಕ್ಟೀರಿಯಾ ಮತ್ತು ವೈರಸ್ಗಳ ವಿರುದ್ಧ ಹೋರಾಡುತ್ತದೆ. ಬೆಲ್ಲದಲ್ಲಿರುವ ವಿಟಮಿನ್ ಸಿ ಮತ್ತು ಝಿಂಕ್ಗಳು ಉತ್ಕರ್ಷಣಶೀಲ ಹಾನಿಯನ್ನ ತಡೆಯುತ್ತವೆ. ಸೆಲೆನಿಯಮ್ ಅಂಶವು ದೇಹದಲ್ಲಿರುವ ಸೂಕ್ಷ್ಮಜೀವಿಗಳ ವಿರುದ್ಧ ದೇಹದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಹೆಚ್ಚಿಸುತ್ತದೆ.
ಸಕ್ಕರೆಯಷ್ಟು ಕ್ಯಾಲೋರಿ ಬೆಲ್ಲದಲ್ಲಿ ಇರುವುದಿಲ್ಲ. ಸಕ್ಕರೆಯನ್ನು ‘ಖಾಲಿ ಕ್ಯಾಲೊರಿ’ ಎಂದೂ ಕರೆಯಲಾಗುತ್ತದೆ, ಎಂದರೆ, ಇದು ಶೂನ್ಯ ಪೌಷ್ಟಿಕಾಂಶ ಮೌಲ್ಯವಿರುವ ಕ್ಯಾಲೊರಿ ಹೊಂದಿದೆ. ಬೆಲ್ಲ ಪೌಷ್ಟಿಕಾಂಶದ ಮೌಲ್ಯಗಳಿಂದ ಸಮೃದ್ಧವಾಗಿರುವುದರಿಂದ ಇದನ್ನು ಅನೇಕ ಪ್ರಯೋಜನಗಳ ಆಗರವೆಂದು ಕರೆಯಲಾಗುತ್ತದೆ.

Share post:

Subscribe

spot_imgspot_img

Popular

More like this
Related

ಬಾಲಿವುಡ್‌ ನ ಎವರ್‌ ಗ್ರೀನ್ ಸ್ಟಾರ್ ನಟ ಧರ್ಮೇಂದ್ರ ವಿಧಿವಶ

ಬಾಲಿವುಡ್‌ ನ ಎವರ್‌ ಗ್ರೀನ್ ಸ್ಟಾರ್ ನಟ ಧರ್ಮೇಂದ್ರ ವಿಧಿವಶ ಬಾಲಿವುಡ್‌ನ ಹಿರಿಯ...

ಕುಮಾರಣ್ಣನ ಅಪ್ಪಟ ಅಭಿಮಾನಿ ಆತ್ಮಹತ್ಯೆ: ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಿಖಿಲ್ ಕುಮಾರಸ್ವಾಮಿ

ಕುಮಾರಣ್ಣನ ಅಪ್ಪಟ ಅಭಿಮಾನಿ ಆತ್ಮಹತ್ಯೆ: ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಿಖಿಲ್ ಕುಮಾರಸ್ವಾಮಿ ಮದ್ದೂರು:...

ನಮ್ಮದು ಸರ್ವ ಧರ್ಮ, ಸರ್ವ ಜಾತಿಯವರನ್ನೂ ಒಳಗೊಳ್ಳುವ ಸರ್ಕಾರ: ಸಿಎಂ ಸಿದ್ದರಾಮಯ್ಯ

ನಮ್ಮದು ಸರ್ವ ಧರ್ಮ, ಸರ್ವ ಜಾತಿಯವರನ್ನೂ ಒಳಗೊಳ್ಳುವ ಸರ್ಕಾರ: ಸಿಎಂ ಸಿದ್ದರಾಮಯ್ಯ ಚಿಕ್ಕಬಳ್ಳಾಪುರ:...

ಎಕ್ಸ್‌ಪ್ರೆಸ್ ಹೈವೇನಲ್ಲಿ ಭೀಕರ ಅಪಘಾತ: ನಾಲ್ವರು ಯುವಕರು ಸಾವು!

ಎಕ್ಸ್‌ಪ್ರೆಸ್ ಹೈವೇನಲ್ಲಿ ಭೀಕರ ಅಪಘಾತ: ನಾಲ್ವರು ಯುವಕರು ಸಾವು! ಕೋಲಾರ: ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್...