ಬೆಳೆಹಾನಿ ಆದ್ರೆ ಪರಿಹಾರ ಕೊಡ್ತೀವಿ, ಅರಣ್ಯ ಸಚಿವ ಅರವಿಂದ ಲಿಂಬಾವಳಿ.

1
57

ವಿಧಾನಸಭೆ ಕಲಾಪದಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಬೆಳೆಹಾನಿ ವಿಚಾರ ಪ್ರಸ್ತಾಪ ಮಾಡಿದ ಬಿಜೆಪಿಯ ಹರತಾಳು ಹಾಲಪ್ಪ ಕಾಡುಪ್ರಾಣಿಗಳಿಂದ ರೈತರಿಗೆ ಸಮಸ್ಯೆಯಾಗ್ತಿದೆ ಕಾಡು ಪ್ರಾಣಿ ತಡೆಗೆ ಸರ್ಕಾರ ಕ್ರಮಕೈಗೊಳ್ತಿಲ್ಲ ರೈತರು ಬೆಳೆದ ಬೆಳೆ ಹಾನಿಯಾಗ್ತಿದೆ, ಎಂದು ಹರತಾಳು ಹಾಲಪ್ಪ ಮಳವಳ್ಳಿ ಅನ್ನದಾನಿಯವರಿಂದಲೂ ಧ್ವನಿ ಬಂತು ನಮ್ಮ ಕ್ಷೇತ್ರದಲ್ಲು ಅರಣ್ಯ ಪ್ರದೇಶವಿದೆ ರೈತರ ಬೆಳೆಯನ್ನ ಕಾಡು ಪ್ರಾಣಿಗಳು ಹಾನಿಮಾಡುತ್ವೆ ಅರಣ್ಯ ಇಲಾಖೆಯವರಿಗೆ ಹೇಳಿದ್ರೂ ಪ್ರಯೋಜನವಿಲ್ಲ ಕಾಡು ಪ್ರಾಣಿ ತಡೆಯೋಕೂ ಆಗ್ತಿಲ್ಲ ಶಿಂಶಾ ಭಾಗದಲ್ಲಿ ಕಾಡುಹಂದಿ ಸಮಸ್ಯೆ ಯಾಗ್ತಿದೆ ಎಂದು ಮಳವಳ್ಳಿ ಅನ್ನದಾನಿ ಆರೋಪ ಮಾಡಿದ್ರು
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ಈ ವಿಚಾರ ಪ್ರಸ್ತಾಪ ಮಾಡಿದ್ರು ಮಲೆನಾಡು ಭಾಗದಲ್ಲಿ ಸರ್ವೇ ಸಾಮಾನ್ಯ ಬಾಳೆ,ಕಬ್ಬು ಇತರ ಬೆಳೆ ಹಾಳಾಗ್ತಿವೆ ಕೈಗೆ ಫಸಲು ಬಂತು ಅನ್ನುವಾಗ ಸಿಗದಂತಾಗ್ತಿದೆ ಇದರ ಬಗ್ಗೆ ಅರಣ್ಯ ಸಚಿವರು ಗಮನಹರಿಸಬೇಕು ಎಂದು ಸ್ಪೀಕರ್ ಕಾಗೇರಿ ಹೇಳಿದ್ರು,ಇದಕ್ಕೆ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಉತ್ತರ ಬೆಳೆಹಾನಿಯಾದರೆ ಪರಿಹಾರ ಕೊಡಬಹುದು,

ಕೃಷಿ,ತೋಟಗಾರಿಕೆ ಇಲಾಖೆಯಲ್ಲಿ ಇದೆ ಕೆಲವು ಭಾಗಗಳಿಗೆ ಮಾತ್ರ ಇದು ಅನ್ವಯವಾಗುತ್ತೆ ಬೆಳೆಹಾನಿ ಪರಿಹಾರ ಶೇ೧೫ ರಷ್ಟು ಹೆಚ್ಚಳಕ್ಕೆ ಬೇಡಿಕೆಯಿದೆ ಇದರ ಬಗ್ಗೆಯೂ ಗಮನಹರಿಸಿದ್ದೇವೆ ಎಮ್ಮೆ,ಕೋಣಕ್ಕೆ ಹಾನಿಯಾದರೆ ೧೦ ಸಾವಿರ ಪರಿಹಾರ ಕುರಿ,ಮೇಕೆಗೆ ಹಾನಿಯಾದರೆ ೫ ಸಾವಿರ ಕೊಡ್ತೇವೆ ಕಾಡುಪ್ರಾಣಿಗಳಿಂದ ಹಾನಿಯಾದರೆ ಕೊಡ್ತೇವೆ ಎಂದು ಅರಣ್ಯ  ಸಚಿವ ಅರವಿಂದ ಲಿಂಬಾವಳಿ ಉತ್ತರ

1 COMMENT

LEAVE A REPLY

Please enter your comment!
Please enter your name here