ಬೆಳ್ಳಿತೆರೆಗೆ ಗಂಗೂಲಿ‌ ಜೀವನಗಾಥೆ..ಇವರೇ ದಾದಾ ಪಾತ್ರಧಾರಿ!

Date:

ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರ ಜೀವನಾಧಾರಿತ ಬಾಲಿವುಡ್‌ ಸಿನಿಮಾ ಸೆಟ್ಟೇರಲಿದ್ದು, ಸೂಪರ್‌ಸ್ಟಾರ್‌ ನಟ ರಣಬೀರ್‌ ಕಪೂರ್‌ ದಾದಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಗಳಾಗಿದೆ.
ತಮ್ಮ ಜೀವನಾಧಾರಿತ ಚಲನ ಚಿತ್ರಕ್ಕೆ ಸೌರವ್‌ ಕೂಡ ಹಸಿರು ನಿಶಾನೆ ತೋರಿದ್ದಾರೆ ಎಂಬ ಸುದ್ದಿಯಾಗಿದೆ. “ಹೌದು ನನ್ನ ಜೀವನಾಧಾರಿತ ಬಾಲಿವುಡ್‌ ಸಿನಿಮಾಗೆ ಸಮ್ಮತಿ ಸೂಚಿಸಿದ್ದೇನೆ. ಇದು ಹಿಂದಿ ಭಾಷೆಯ ಸಿನಿಮಾ. ಇದರ ನಿರ್ದೇಶಕ ಯಾರೆಂದು ಈಗಲೇ ಹೇಳಲಾಗದು. ಎಲ್ಲವನ್ನೂ ಒಂದು ಹಂತಕ್ಕೆ ತರಲು ಇನ್ನು ಕೆಲ ಸಮಯಗಳು ಬೇಕಾಗುತ್ತದೆ,” ಎಂದು ಗಂಗೂಲಿ ಹೇಳಿರುವುದಾಗಿ ನ್ಯೂಸ್‌ 18 ವಾಹಿನಿ ವರದಿ ಮಾಡಿದೆ.


ವರದಿಗಳ ಪ್ರಕಾರ ಗಂಗೂಲಿ ಬಯೋಪಿಕ್‌ನ ಚಿತ್ರಕಥೆ ರಚನೆ ಈಗಾಗಲೇ ಆರಂಭವಾಗಿದೆ. ಈ ಬಗ್ಗೆ ಬಿಸಿಸಿಐ ಬಾಸ್‌ ಜೊತೆಗೆ ಹಲವು ಚರ್ಚೆಗಳು ಕೂಡ ನಡೆದಿವೆ. ಈ ಸಂದರ್ಭದಲ್ಲಿ ಮುಖ್ಯ ಪಾತ್ರ ಸಲುವಾಗಿ ಬಾಲಿವುಡ್‌ನ ಚಾಕ್ಲೇಟ್‌ ಹೀರೋ ರಣಬೀರ್‌ ಕಪೂರ್‌ ಹೆಸರು ಮುಂಚೂಣಿಯಲ್ಲಿದ್ದು, ಈವರೆಗೆ ಯಾವುದೊಂದೂ ಅಧಿಕೃತವಾಗಿಲ್ಲ.
ಗಂಗೂಲಿ ಪಾತ್ರ ನಿಭಾಯಿಸುವ ನಟ ಯಾರು? ಇದನ್ನು ಖಾತ್ರಿ ಪಡಿಸಲಾಗಿದೆ. ದಾದಾ ಪಾತ್ರಕ್ಕೆ ರಣಬೀರ್‌ ಕಪೂರ್‌ ಪ್ರಮುಖ ಆಯ್ಕೆಯಾಗಿದ್ದಾರೆ. ಎಲ್ಲವೂ ಅಂತಿಮ ಹಂತಕ್ಕೆ ಬಂದ ಬಳಿಕ ಸ್ಪಷ್ಟ ಮಾಹಿತಿ ನೀಡಲಾಗುವುದು ಎಂದು ಬೆಳವಣಿಗೆಗೆ ಹತ್ತಿರದ ಮೂಲಗಳು ಮಾಹಿತಿ ನೀಡಿವೆ. ಸಿನಿಮಾದಲ್ಲಿ ಸೌರವ್‌ ಭಾರತ ತಂಡಕ್ಕೆ ಕಾಲಿಟ್ಟ ದಿನದಿಂದ ಹಿಡಿದು, ನಿವೃತ್ತಿ ನಂತರ ಕ್ರಿಕೆಟ್‌ ಆಡಳಿತಾಧಿಕಾರಿಯಾಗಿ ಬಿಸಿಸಿಐ ಅಧ್ಯಕ್ಷ ಸ್ಥಾನ ಪಡೆದವರೆಗಿನ ಕಥೆ ಈ ಸಿನಿಮಾದಲ್ಲಿ ಇರಲಿದೆ ಎನ್ನಲಾಗಿದೆ.
ಈ ಹಿಂದೆ ಟೀಮ್‌ ಇಂಡಿಯಾ ಸ್ಟಾರ್‌ಗಳಾದ ಸಚಿನ್‌ ತೆಂಡೂಲ್ಕರ್‌, ಎಂಎಸ್‌ ಧೋನಿ, ಮೊಹಮ್ಮದ್‌ ಅಝರುದ್ದೀನ್‌ ಅವರ ಜೀವನಾಧಾರಿತ ಬಾಲಿವುಡ್‌ ಸಿನಿಮಾಗಳು ಬೆಳ್ಳಿ ತೆರೆಮೇಲೆ ಬಂದು ಭಾರಿ ಸದ್ಧು ಮಾಡಿವೆ. ಈ ನಡುವೆ ಮಹಿಳಾ ಕ್ರಿಕೆಟರ್ಸ್‌ ಮಿಥಾಲಿ ರಾಜ್ ಮತ್ತು ಜೂಲನ್‌ ಗೋಸ್ವಾಮಿ ಅವರ ಬಯೋಪಿಕ್‌ ಚಿತ್ರೀಕರಣದ ಹಂತದಲ್ಲಿದ್ದು, ಕೆಲ ವರ್ಷಗಳಲ್ಲಿ ತೆರೆ ಕಾಣಲಿವೆ.


ಧೋನಿ ಜೀವನಾಧಾರಿತ ಸಿನಿಮಾ “ಎಂಎಸ್‌ ಧೋನಿ ದಿ ಅನ್‌ ಟೋಲ್ಡ್‌ ಸ್ಟೋರಿ’ ಬಾಲಿವುಡ್‌ನ ಬಾಕ್ಸ್‌ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಈಗ ಸೌರವ್‌ ಜೀವನಾಧಾರಿತ ಸಿನಿಮಾ ಕೂಡ ಅಷ್ಟೇ ಸದ್ದು ಮಾಡುವ ನಿರೀಕ್ಷೆ ಇದೆ. ಬಾಲಿವುಡ್‌ ನಟ ರಣವೀರ್‌ ಸಿಂಗ್‌ ನಟನೆಯ 1983 ವಿಶ್ವಕಪ್‌ ಆಧಾರಿತ ಸಿನಿಮಾ ಕೂಡ ಶೀಘ್ರದಲ್ಲೇ ತೆರೆಮೇಲೆ ಬರುವ ಸಾಧ್ಯತೆ ಇದೆ. ಕೊರೊನಾ ವೈರಸ್‌ ಹಾಆವಳಿಯಿಂದಾಗಿ ಚಿತ್ರಮಂದಿರಗಳು ಮುಚ್ಚಿರುವ ಕಾರಣ 83 ಸಿನಿಮಾ ಬಿಡುಗಡೆ ವಿಳಂಬವಾಗಿದೆ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...