ಬೆಸ್ಕಾಂ ಸಿಬ್ಬಂದಿಗೆ ಬ್ಲಾಕ್ ಮೇಲ್: ಲೈನ್ ಮ್ಯಾನ್ ಸೇರಿ 3 ಜನರ ವಿರುದ್ಧ FIR!

Date:

 

ಬೆಂಗಳೂರು:- ನಗರದ ಹೊರವಲಯ ನೆಲಮಂಗಲ ಬೆಸ್ಕಾಂ ಉಪವಿಭಾಗ ವ್ಯಾಪ್ತಿಯ ಸೊಂಡೆಕೊಪ್ಪ ಶಾಖೆಯ ಲೈನ್ ಮೆನ್ ಒಬ್ಬ ಖಾಸಗಿ ಯೂಟ್ಯೂಬರ್ ಜೊತೆ ಸೇರಿ ತನ್ನ ಹಿರಿಯ ಅಧಿಕಾರಿ ಸಹಾಯಕ ಇಂಜಿನಿಯರ್ ಬಳಿ 50 ಲಕ್ಷ ಹಣಕ್ಕೆ ಬ್ಲಾಕ್ ಮೇಲ್ ಮಾಡಿರುವ ಆರೋಪ ಕೇಳಿಬಂದಿದೆ.

ಹೀಗಾಗಿ ಬ್ಲಾಕ್ ಮೇಲ್ ಗೆ ನೊಂದ ಬೆಸ್ಕಾಂ ಸಹಾಯಕ ಇಂಜಿನಿಯರ್ ನೆಲಮಂಗಲ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸೊಂಡೆಕೊಪ್ಪ ಬೆಸ್ಕಾಂ ಶಾಖೆಯ ಸಹಾಯಕ ಇಂಜಿನಿಯರ್ ನಾಗರಾಜ್ ಬ್ಲಾಕ್ ಮೇಲ್ ಗೆ ನೊಂದ ಅಧಿಕಾರಿಯಾಗಿದ್ದು. ಬೆಸ್ಕಾಂ ನಲ್ಲಿ ಸಹಾಯಕ ಇಂಜಿನಿಯರ್ ನಾಗರಾಜ್ ಅವ್ಯವಹಾರ ಮಾಡುತಿದ್ದಾರೆ ಎಂದು ಸುಖಾ ಸುಮ್ಮನೆ ಅರ್ಜಿಗಳನ್ನು ಹಾಕಿ ಹೆದರಿಸಲು ಪ್ರಯತ್ನಿಸಿ ಅಲ್ಲಿನ ಲೈನ್ ಮೆನ್ ಹರೀಶ್ ಸೇರಿದಂತೆ ಇಬ್ಬರು ಸ್ಥಳೀಯ ಯೂಟ್ಯೂಬರ್ ಗಳು 50 ಲಕ್ಷ ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡಿ ಹಣ ಕೊಡದೆ ಇದ್ದಾಗ ಮಾರ್ಪಿಂಗ್ ಫೋಟೋ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವಿಡಿಯೋ ಹರಿಬಿಟ್ಟು ತೇಜೋವದೆಗೆ ಪ್ರಯತ್ನಮಾಡಿ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ.

ಬೆಸ್ಕಾಂ ಲೈನ್ ಮೆನ್ ಹರೀಶ್, ಯೂಟ್ಯೂಬರ್ ಗಳಾದ ಬಾಲಕೃಷ್ಣ,ಮತ್ತೊಬ್ಬ ಯೂಟ್ಯೂಬರ್ ನಾಗರಾಜ್ ಎಂಬುವವರ ವಿರುದ್ಧ ನೆಲಮಂಗಲ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ತನಿಖೆ ನೆಡೆಸುತ್ತಿರುವ ನೆಲಮಂಗಲ ನಗರ ಪೊಲೀಸ್ ಠಾಣೆ ಅಧಿಕಾರಿಗಳು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Share post:

Subscribe

spot_imgspot_img

Popular

More like this
Related

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಜಾಮೀನು ಅರ್ಜಿ ಹೈಕೋರ್ಟ್ ವಜಾ

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಜಾಮೀನು ಅರ್ಜಿ ಹೈಕೋರ್ಟ್...

ಸಂಬಂಧಿಯಿಂದಲೇ ನಟಿ ಕಾವ್ಯಾಗೆ ಬಂತು ರೇಪ್ ಬೆದರಿಕೆ

ಸಂಬಂಧಿಯಿಂದಲೇ ನಟಿ ಕಾವ್ಯಾಗೆ ಬಂತು ರೇಪ್ ಬೆದರಿಕೆ; ಪತಿಯ ಮೇಲೆ ಹಲ್ಲೆ‘ಗಾಂಧಾರಿ’...

ನರೇಗಾ ಪುನರ್ ಸ್ಥಾಪನೆ ಆಗುವವರೆಗೆ ಹೋರಾಟ: ಸಿಎಂ ಸಿದ್ದರಾಮಯ್ಯ

ನರೇಗಾ ಪುನರ್ ಸ್ಥಾಪನೆ ಆಗುವವರೆಗೆ ಹೋರಾಟ: ಸಿಎಂ ಸಿದ್ದರಾಮಯ್ಯ ಬೆಂಗಳೂರು: ಕೇಂದ್ರ ಸರ್ಕಾರದ...

ಎಟಿಎಂಗೆ ಹಾಕಬೇಕಿದ್ದ ₹1 ಕೋಟಿಗೂ ಅಧಿಕ ನಗದು ದೋಚಿ ಸಿಬ್ಬಂದಿ ಪರಾರಿ

ಎಟಿಎಂಗೆ ಹಾಕಬೇಕಿದ್ದ ₹1 ಕೋಟಿಗೂ ಅಧಿಕ ನಗದು ದೋಚಿ ಸಿಬ್ಬಂದಿ ಪರಾರಿ ಬೆಂಗಳೂರು:...