ಬೇವಿನ ನೀರಿನಿಂದ ಸ್ನಾನ ಮಾಡಿದರೆ ಆರೋಗ್ಯಕ್ಕೆ ಎಷ್ಟೆಲ್ಲಾ ಉಪಯೋಗವಿದೆ ಗೊತ್ತಾ..?

Date:

ಬೇವಿನ ನೀರಿನಿಂದ ಸ್ನಾನ ಮಾಡಿದರೆ ಆರೋಗ್ಯಕ್ಕೆ ಎಷ್ಟೆಲ್ಲಾ ಉಪಯೋಗವಿದೆ ಗೊತ್ತಾ..?

ಆಯುರ್ವೇದದಲ್ಲಿ ಬೇವಿಗೆ ಬಹಳ ದೊಡ್ಡ ಸ್ಥಾನವಿದೆ. ಪ್ರಾಚೀನ ಕಾಲದಿಂದ ಇಲ್ಲಿಯವರೆಗೆ, ಬೇವಿನ ಎಲೆಗಳನ್ನು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಬಳಸಲಾಗುತ್ತದೆ. ಚರ್ಮದ ಆರೈಕೆಯ ವಿಷಯಕ್ಕೆ ಬಂದಾಗ ಬೇವನ್ನು ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಬೇವಿನ ಎಲೆಯ ನೀರಿನಲ್ಲಿ ಸ್ನಾನ ಮಾಡುವುದರಿಂದ ತ್ವಚೆಯ ಹಲವಾರು ಸಮಸ್ಯೆಗಳು ಗುಣವಾಗುತ್ತವೆ. ಇದು ನಿಮ್ಮ ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಬೇವಿನ ಎಲೆಗಳನ್ನು ತ್ವಚೆಯ ಆರೋಗ್ಯಕ್ಕೆ ಹೇಗೆ ಬಳಸಬಹುದು ಮತ್ತು ಇದರ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯಿರಿ.
ಚರ್ಮ ಸಂಬಂಧಿತ ಸಮಸ್ಯೆಗಳು ದೂರವಾಗುತ್ತವೆ
ಮುಖ್ಯವಾಗಿ ನಮ್ಮ ಮುಖದ ಮೇಲೆ ಉಂಟಾಗುವ ಮೊಡವೆಗಳು, ಗುಳ್ಳೆಗಳು ಸಣ್ಣ ಪುಟ್ಟ ಗಾಯಗಳ ಕಲೆಗಳು ಮತ್ತು ಬ್ಲಾಕ್ಹೆಡ್ ಗಳ ನಿವಾರಣೆ ಬೇವಿನಿಂದ ಆಗುತ್ತದೆ ಹೆಚ್ಚಾಗಿ ಬೇಸಿಗೆ ಕಾಲದಲ್ಲಿ ಕಂಡು ಬರುವ ಚರ್ಮದ ಇಂತಹ ಸಮಸ್ಯೆಗಳು ಮತ್ತು ಚರ್ಮದ ಅಲರ್ಜಿ ಪರಿಹಾರಕ್ಕೆ ಬೇವಿನ ನೀರಿನ ಸ್ನಾನ ಸಹಾಯ ಮಾಡುತ್ತದೆ.

ಬೇವಿನಲ್ಲಿ ಆಂಟಿ – ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳು, ಆಂಟಿ – ಮೈಕ್ರೋಬಿಯಲ್ ಮತ್ತು ಆಂಟಿ – ಫಂಗಲ್ ಗುಣ ಲಕ್ಷಣಗಳು ಹೆಚ್ಚಾಗಿರುವುದರಿಂದ ಚರ್ಮದ ಸಮಸ್ಯೆಗಳಾದ ಸೋರಿಯಾಸಿಸ್, ಸಿಡುಬು ಮತ್ತು ಇಸುಬು ರೀತಿಯ ಸಮಸ್ಯೆಗಳು ಕ್ರಮೇಣವಾಗಿ ಇಲ್ಲವಾಗುತ್ತವೆ.

ಸಿಡುಬು ಸಮಸ್ಯೆ ಇರುವವರಿಗೆ
ಸಿಡುಬು ಸಮಸ್ಯೆಯಿಂದ ಬಳಲುತ್ತಿರುವ ಜನರು ತಾವು ತೆಗೆದುಕೊಳ್ಳುತ್ತಿರುವ ಔಷಧಿಯ ಜೊತೆಗೆ ಪ್ರತಿ ದಿನ ಬೇವಿನ ಎಲೆಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ ಸ್ನಾನ ಮಾಡುವುದರಿಂದ ಸಿಡುಬಿನ ಸಮಸ್ಯೆ ಬಹಳ ಬೇಗನೆ ನಿವಾರಣೆಯಾಗುತ್ತದೆ.

ಬಹಳ ಜನರಿಗೆ ದೇಹದಲ್ಲಿ ಬೆವರಿನಿಂದ ದುರ್ವಾಸನೆ ಹೆಚ್ಚಾಗಿರುತ್ತದೆ. ಪಕ್ಕದಲ್ಲಿ ಕೂತುಕೊಳ್ಳಲು, ನಿಂತುಕೊಳ್ಳಲು ಅಥವಾ ಅವರ ಬಳಿ ಮಾತನಾಡಲು ಸಾಧ್ಯವೇ ಆಗುವುದಿಲ್ಲ. ಅಂತಹವರು ಬೇವಿನ ನೀರಿನ ಸ್ನಾನ ಮಾಡುವ ಅಭ್ಯಾಸ ಮಾಡಿ ಕೊಳ್ಳಬಹುದು. ಕೇವಲ ಬೆವರಿನ ದುರ್ವಾಸನೆ ದೂರವಾಗುವುದು ಮಾತ್ರವಲ್ಲದೆ ಎಣ್ಣೆಯ ಚರ್ಮ ಹೊಂದಿದ ಹಲವರಿಗೆ ಇದರಿಂದ ಪ್ರಯೋಜನಗಳು ಉಂಟಾಗುತ್ತದೆ.
ತಲೆಹೊಟ್ಟು

• ಇನ್ನು ತಲೆಯಲ್ಲಿ ಹೆಚ್ಚಾಗಿ ತಲೆ ಹೊಟ್ಟು ಮತ್ತು ನೆತ್ತಿಯ ಕೆರೆತ ಹೊಂದಿರುವವರು ಬೇವಿನ ಎಲೆಗಳ ಪೇಸ್ಟ್ ತಯಾರಿಸಿ ತಲೆಗೆ ಹಚ್ಚಿ ಒಂದು ಗಂಟೆಯ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ಅದಕ್ಕೆ ಪರಿಹಾರವನ್ನು ಕಾಣಬಹುದು.
• ಇಷ್ಟೇ ಅಲ್ಲದೆ ಕೂದಲು ತುಂಬಾ ಹೊಳಪಿನಿಂದ ಕೊಡಿ, ಕೂದಲಿನ ಕಿರುಚೀಲಗಳು ಬಲಗೊಂಡು ತಲೆಯ ಹಾಗೂ ನೆತ್ತಿಯ ಭಾಗದಲ್ಲಿ ಯಾವುದೇ ಉರಿಯೂತ ಮತ್ತು ಸೋಂಕು ಉಂಟಾಗದಂತೆ ಕಾಪಾಡಿಕೊಳ್ಳಬಹುದು.
• ಕಣ್ಣಿನ ಭಾಗದಲ್ಲಿ ಅಲರ್ಜಿ ಸಮಸ್ಯೆಯಿಂದ ಬಳಲುತ್ತಿರುವವರು ಸಹ ಬೇವಿನ ನೀರಿನಿಂದ ತಲೆ ಸ್ನಾನ ಮಾಡಿದರೆ, ಕಣ್ಣುಗಳ ನರಗಳ ಆರೋಗ್ಯ ವೃದ್ಧಿಗೊಂಡು ಪರಿಹಾರ ಕಾಣಬಹುದು.
• ಮನೆಯ ಹೊರಗಡೆ ಕಷ್ಟ ಪಟ್ಟು ಜಮೀನುಗಳಲ್ಲಿ ಕೆಲಸ ಮಾಡುವವರು ಅಥವಾ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಹೆಚ್ಚು ಆಯಾಸದಿಂದ ಬಳಲಿ ಬಂದು ಸಂಜೆಯ ಸಮಯದಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಬೇವಿನ ಎಲೆಗಳ ಪೇಸ್ಟ್ ಹಾಕಿ ಸ್ನಾನ ಮಾಡುವ ಅಭ್ಯಾಸ ಮಾಡಿಕೊಂಡರೆ ತಮ್ಮ ದೇಹದ ಆಯಾಸ ದೂರವಾಗಿ ಕಣ್ಣುಗಳಿಗೆ ಒಳ್ಳೆ ನಿದ್ರೆ ಆವರಿಸುತ್ತದೆ.

Share post:

Subscribe

spot_imgspot_img

Popular

More like this
Related

ಭೈರಪ್ಪ ಅವರದ್ದು ಹಿಮಾಲಯದಷ್ಟೇ ಎತ್ತರದ ವ್ಯಕ್ತಿತ್ವ: ನಟ ಅನಂತನಾಗ್‌ ಭಾವುಕ

ಭೈರಪ್ಪ ಅವರದ್ದು ಹಿಮಾಲಯದಷ್ಟೇ ಎತ್ತರದ ವ್ಯಕ್ತಿತ್ವ ಎಂದು ನಟ ಅನಂತನಾಗ್‌ ಭಾವುಕರಾದರು. ನವರಾತ್ರಿಯ...

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ!

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ! ಬೆಂಗಳೂರು: ಪ್ರಸಿದ್ಧ ಕನ್ನಡ...

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ!

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ! ಬೆಂಗಳೂರು:- ಬೆಂಗಳೂರಿಗರಿಗಾಗಿ ನಿರ್ಮಿಸಿದ...

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಬೆಂಗಳೂರು:...