ಬೈಕ್ ಗೆ ಡಿಕ್ಕಿ ಹೊಡೆದ ಕಾರು: ಫ್ಲೈಓವರ್ ಮೇಲಿನಿಂದ ಕೆಳಗೆ ಬಿದ್ದ ಕಾರು, ಕುಡಿದು ವಾಹನ ಚಲಾಯಿಸಿರೋ ಶಂಕೆ!

Date:

 

ಬೆಂಗಳೂರು:- ನಗರದ ಯಶವಂತಪುರ ಸರ್ಕಲ್‌ನಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದು ಕಾರು ಫ್ಲೈಓವರ್ ಮೇಲಿನಿಂದ ಕೆಳಗೆ ಬಿದ್ದಿರುವ ಭೀಕರ ಅಪಘಾತ ಸಂಭವಿಸಿದೆ.

ಬೈಕ್‌ನಲ್ಲಿದ್ದ ಇಬ್ಬರು, ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯವಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಬೆಳಗ್ಗೆ 3:45ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಸ್ಯಾಂಕಿ ರಸ್ತೆಯಿಂದ ತುಮಕೂರು ರಸ್ತೆ ಮಾರ್ಗವಾಗಿ ಬರುತ್ತಿದ್ದ ಕಾರು ವೇಗದ ಪರಿಣಾಮದಿಂದಾಗಿ ಫ್ಲೈಓವರ್ ಮೇಲಿನ ಡಿವೈಡರ್ ಹಾರಿ ಎದುರಿಗೆ ಬರುತ್ತಿದ್ದ ಬೈಕ್‌ಗೆ ಗುದ್ದಿದೆ. ಇದರಿಂದ ಫ್ಲೈಓವರ್ ಮೇಲಿನಿಂದ ಕಾರು ಕೆಳಗೆ ಬಿದ್ದಿದೆ.

ಚಾಲಕ ಕುಡಿದು ಕಾರು ಓಡಿಸಿರುವ ಶಂಕೆಯಿದ್ದು, ಕಾರು ಚಾಲಕನ ಅಜಾಗರೂಕತೆಯಿಂದಾಗಿ ಈ ಅವಘಡ ಸಂಭವಿಸಿದೆ. ಕಾರಿನಲ್ಲಿ ಖಾಲಿ ಮದ್ಯ ಬಾಟಲಿಗಳು ಪತ್ತೆಯಾಗಿದೆ. ಯಶವಂತಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share post:

Subscribe

spot_imgspot_img

Popular

More like this
Related

ಚಿಕ್ಕಪೇಟೆ ಕುಂಬಾರಪೇಟೆ ಹಾರ್ಡ್‌ವೇರ್ ಗೋಡೌನ್‌ನಲ್ಲಿ ಅಗ್ನಿ ಅವಘಡ

ಚಿಕ್ಕಪೇಟೆ ಕುಂಬಾರಪೇಟೆ ಹಾರ್ಡ್‌ವೇರ್ ಗೋಡೌನ್‌ನಲ್ಲಿ ಅಗ್ನಿ ಅವಘಡ ಬೆಂಗಳೂರು: ನಗರದ ಚಿಕ್ಕಪೇಟೆಯ ಕುಂಬಾರಪೇಟೆ...

35ರ ನಂತರ ಮಹಿಳೆಯರ ಆರೋಗ್ಯ: ಯಾವ ಆಹಾರ ಅಗತ್ಯ? ಏನು ತಪ್ಪಿಸಬೇಕು?

35ರ ನಂತರ ಮಹಿಳೆಯರ ಆರೋಗ್ಯ: ಯಾವ ಆಹಾರ ಅಗತ್ಯ? ಏನು ತಪ್ಪಿಸಬೇಕು? ಸಾಮಾನ್ಯವಾಗಿ...

ಗುರು ರಾಘವೇಂದ್ರ ಸ್ವಾಮಿಗಳ ಆಲ್ಬಮ್ ಸಾಂಗ್ ” ರಾಯರ ದರ್ಶನ ” ದ ಟೀಸರ್ ಬಿಡುಗಡೆ

ಲಕ್ಷ್ಮೀ ಗಣೇಶ ಪ್ರೋಡಕ್ಷನ್ ಮತ್ತು ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆ...

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್ ಬೆಂಗಳೂರು:...