ಬೈಕ್ ಸಮೇತ 100 ಅಡಿ ಪ್ರಪಾತಕ್ಕೆ ಬಿದ್ದಿದ್ದ ವ್ಯಕ್ತಿಯ ರಕ್ಷಣೆ!

Date:

ಬೆಳಗಾವಿ: ಫಾಲ್ಸ್ ನೋಡಲು ಹೋಗಿ ಬೈಕ್ ಸಮೇತ 100 ಅಡಿ ಪ್ರಪಾತಕ್ಕೆ ಬಿದ್ದಿದ್ದ ಸವಾರನನ್ನು ರಕ್ಷಿಸಿದ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ಚಿಕಲೆ ಗ್ರಾಮದಲ್ಲಿ ನಡೆದಿದೆ. ಬೆಳಗಾವಿ ಕ್ಯಾಂಪ್ ಪ್ರದೇಶದ ವಿನಾಯಕ ಬುತ್ತುಲ್ಕರ್ ರಕ್ಷಣೆ ಮಾಡಲಾದ ವ್ಯಕ್ತಿ. ಖಾನಾಪುರ ಗೋವಾ ಗಡಿ ಭಾಗದಲ್ಲಿರುವ ಪ್ರಸಿದ್ಧ ಚಿಕಲೆ ಫಾಲ್ಸ್ ನೋಡಲು ಸ್ನೇಹಿತರ ಜೊತೆಗೆ ಬಂದಿದ್ದಾಗ ವಿನಾಯಕ ಬೈಕ್ ಸಮೇತ ಪ್ರಪಾತಕ್ಕೆ ಬಿದ್ದಿದ್ದರು. ಬೈಕ್ ಮೇಲೆ ಹೋಗುವಾಗ ಆಯತಪ್ಪಿ ನೂರು ಅಡಿ ಪ್ರಪಾತಕ್ಕೆ ಬಿದ್ದಿದ್ದರು.
ಇದನ್ನು ಗಮನಿಸಿದ್ದ ಸ್ನೇಹಿತರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ಸ್ಥಳೀಯರು ಹುಡುಕಾಟ ನಡೆಸಿ ವಿನಾಯಕ್ನನ್ನು ರಕ್ಷಣೆ ಮಾಡಿದ್ದಾರೆ. ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವಿನಾಯಕ್ಗೆ ಮುಖ, ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Share post:

Subscribe

spot_imgspot_img

Popular

More like this
Related

ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಬೈರತಿ ಬಸವರಾಜ್ ಬಂಧನ

ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಬೈರತಿ ಬಸವರಾಜ್ ಬಂಧನದೇವನಹಳ್ಳಿ: ಬಿಕ್ಲು...

ಬಿಕ್ಲು ಶಿವ ಕೊಲೆ ಪ್ರಕರಣ: ಬೈರತಿ ಬಸವರಾಜ್ ಬಂಧನಕ್ಕೆ ಸಿಐಡಿ ತೀವ್ರ ಶೋಧ

ಬಿಕ್ಲು ಶಿವ ಕೊಲೆ ಪ್ರಕರಣ: ಬೈರತಿ ಬಸವರಾಜ್ ಬಂಧನಕ್ಕೆ ಸಿಐಡಿ ತೀವ್ರ...

ಸುದ್ದಿ ವಾಹಿನಿಗಳ ಟಿ ಆರ್ ಪಿ ಪಟ್ಟಿ ರಿಲೀಸ್ ಯಾವ ನ್ಯೂಸ್ ಚಾನೆಲ್ ನಂ1 !

ಸುದ್ದಿ ವಾಹಿನಿಗಳ ಟಿ ಆರ್ ಪಿ ಪಟ್ಟಿ ರಿಲೀಸ್ ಯಾವ ನ್ಯೂಸ್...

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1.7 ಕೆಜಿ ಹಶೀಶ್ ಸೀಜ್

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1.7 ಕೆಜಿ ಹಶೀಶ್ ಸೀಜ್ದೇವನಹಳ್ಳಿ: ಕೆಂಪೇಗೌಡ...