ಅದು 2003 ..ಸೌತ್ ಆಫ್ರಿಕಾ ವಿಶ್ವಕಪ್ ಅತಿಥ್ಯವನ್ನು ವಹಿಸಿಕೊಂಡಿತ್ತು. ಬಂಗಾಳದ ಹುಲಿ ಸೌರವ್ ಗಂಗೂಲಿ ನೇತೃತ್ವದಲ್ಲಿ ಟೀಮ್ ಇಂಡಿಯಾ ಫೈನಲ್ ಗೆ ಲಗ್ಗೆ ಇಟ್ಟಿದ್ದು..ಗಂಗೂಲಿ, ಸಚಿನ್, ದ್ರಾವಿಡ್ ರಂಥಾ ಘಟಾನುಘಟಿ ಆಟಗಾರರನ್ನು ಒಳಗೊಂಡಿದ್ದ ಭಾರತವೇ ವಿಶ್ವಕಪ್ ಗೆಲ್ಲುವುದು ಎನ್ನುವ ಲೆಕ್ಕಾಚಾರವಿತ್ತು. ಆದರೆ, ಅದೃಷ್ಟ ದೇವತೆ ರಿಕಿಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ಪರ ಇದ್ದಿದ್ದರಿಂದ ಗಂಗೂಲಿ ನೇತೃತವ ಭಾರತ ಫೈನಲ್ ನಲ್ಲಿ ಆಸೀಸ್ ವಿರುದ್ಧ ಮುಗ್ಗರಿಸಿತು.
ಕಾಲ ಬದಲಾಗುತ್ತಿದ್ದಂತೆ ನಾಲ್ಕೇ ನಾಲ್ಕು ವರ್ಷದಲ್ಲಿ ಮತ್ತೊಂದು ವಿಶ್ವ ಸಮರ ಆರಂಭವಾಗುವ ಹೊತ್ತಿಗೆ ಗಂಗೂಲಿ ನಾಯಕತ್ವದ ತಂಡದಲ್ಲಿ ಉಪನಾಯಕರಾಗಿದ್ದ ಕನ್ನಡಿಗ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ನಾಯಕತ್ವಹಿಸಿಕೊಂಡಿದ್ರು..! ದ್ರಾವಿಡ್ ನಾಯಕತ್ವದಲ್ಲಿ ಭಾರತ ಯಶಸ್ವಿ ಪ್ರದರ್ಶನವನ್ನೇ ನೀಡಿತ್ತು. 2007ರಲ್ಲಿ ವೆಸ್ಟ್ ಇಂಡೀಸ್ ನಲ್ಲಿ ನಡೆದ ವಿಶ್ವಕಪ್ ಗೆ ನಮ್ಮ ದ್ರಾವಿಡ್ ಮುಂದಾಳತ್ವದಲ್ಲಿ ಭಾರತ ಹೋಗಿತ್ತು. ವರ್ಲ್ಡ್ ಕಪ್ ಗೆಲ್ಲುವ ನೆಚ್ಚಿನ ತಂಡ ದ್ರಾವಿಡ್ ಪಡೆಯಾಗಿತ್ತು. ಆದರೆ, ಲೀಗ್ ನಲ್ಲೇ ಭಾರತ ಸೋಲುಂಡು ಟೂರ್ನಿಯಿಂದ ಹೊರ ನಡೆಯಿತು… ಅದಾದ ಬಳಿಕ ದ್ರಾವಿಡ್ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ರು..ಆಗ ತಂಡದ ನಾಯಕತ್ವ ವಹಿಸಿಕೊಂಡಿದ್ದು ಯುವ ರಾಕ್ ಸ್ಟಾರ್ ಮಹೇಂದ್ರ ಸಿಂಗ್ ಧೋನಿ..! ಧೋನಿಯ ನಾಯಕತ್ವದಲ್ಲಿ ಭಾರತ ಚೊಚ್ಚಲ ವಿಶ್ವಕಪ್ ಆಡಲು ಸೌತ್ ಆಫ್ರಿಕಾಕ್ಕೆ ತೆರಳಿತ್ತು. ಅದೇ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ನ ಸೋಲು ಭಾರತದ ಟಿ20 ಆಟದ ಬಗ್ಗೆ ಅಷ್ಟೊಂದು ನಿರೀಕ್ಷೆಯನ್ನು ಹುಟ್ಟು ಹಾಕಿರ್ಲಿಲ್ಲ. ಆದರೆ,ಎಲ್ಲಾ ಲೆಕ್ಕಾಚಾರ ತಲೆಕೆಳಗಾಗಿ ಧೋನಿ ನಾಯಕತ್ವದ ಭಾರತ ವರ್ಲ್ಡ್ ಕಪ್ ಅನ್ನು ಗೆದ್ದು ಬಂತು..ಧೋನಿ ಹೆಸರು ವಿಶ್ವಮಟ್ಟದಲ್ಲಿ ಸದ್ದು ಮಾಡ್ತು…! ನೋಡು ನೋಡುತ್ತಿದ್ದಂತೆ ,2011ರ ವಿಶ್ವಕಪ್ ಬಂತು..ಭಾರತದಲ್ಲಿ ನಡೆದ ಆ ಏಕದಿನ ವಿಶ್ವಕಪ್ ನಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ವಿಶ್ವ ಚಾಂಪಿಯನ್ ಆಯ್ತು…
2015 ರಲ್ಲಿ ಆಸ್ಟ್ರೇಲಿಯಾ ಮ, ನ್ಯೂಜಿಲೆಂಡ್ ನಲ್ಲಿ ನಡೆದ ವಿಶ್ವಕಪ್ ನಲ್ಲಿ ಇದೇ ಧೋನಿ ನೇತೃತ್ವದಲ್ಲಿ ಭಾರತ ಆಡಿತ್ತು. ಈ ಹಿಂದಿನ ವಿಶ್ವ ಕಪ್ ನಲ್ಲಿ ಚಾಂಪಿಯನ್ ಆಗಿದ್ದ ಭಾರತ ಸೆಮಿಫೈನಲ್ ನಲ್ಲಿ ಮುಗ್ಗರಿಸಿತ್ತು.
ಮತ್ತೊಂದು ವಿಶ್ವಕಪ್ ಅಂದರೆ 2019 ರ, ಇತ್ತೀಚೆಗೆ ಇಂಗ್ಲೆಂಡ್ ನಲ್ಲಿ ನಡೆದ ವರ್ಲ್ ಕಪ್ ಹೊತ್ತಿಗೆ ಧೋನಿ ನಾಯಕತ್ವ ತ್ಯಜಿಸಿದ್ದರು. ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತ ಇಂಗ್ಲೆಂಡ್ ಪ್ರವಾಸ ಬೆಳೆಸಿತ್ತು. ಸೆಮಿಫೈನಲ್ ನಲ್ಲಿ ವಿರಾಟ್ ಪಡೆ ಮುಗ್ಗರಿಸಿತು. ಆದರೂ ಟೂರ್ನಿಯಲ್ಲಿ ಉತ್ತಮ ಆಟ ಆಡಿದೆ. ಭಾರತ ವಿಶ್ವಕಪ್ ಸೋತರೂ ವಿರಾಟ್ ಒಬ್ಬ ಉತ್ತಮ ನಾಯಕರೇ…ವಿರಾಟ್ ಹಿಂದಿನ ಶಕ್ತಿ ಧೋನಿ ಅನ್ನೋದು ಕೂಡ ಅಷ್ಟೇ ಸತ್ಯ…
ವಿಶ್ವಕಪ್ ಮುಗಿದ ಬಳಿಕ ಧೋನಿ ನಿವೃತ್ತಿ ಬಗ್ಗೆ ಮಾತುಗಳು ಕೇಳಿ ಬರ್ತಾ ಇವೆ. ಧೋನಿ ವೆಸ್ಟ್ ಇಂಡೀಸ್ ಟೂರ್ ಗೂ ಹೋಗಿಲ್ಲ ಅನ್ನೋದು ಗೊತ್ತೇ ಇದೆ.
ಬ್ಯಾಟ್, ಕೀಪಿಂಗ್ ಗ್ಲೌಸ್ ಬಿಟ್ಟು ಕೆಲ ದಿನ ದೇಶ ಸೇವೆಗೆ ಹೊರಟಿದ್ದಾರೆ ಮಾಹಿ..!
ಸೇನೆಯ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿರು ಧೋನಿ ಕೆಲವು ದಿನಗಳ ಕಾಲ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಧೋನಿ ಈ ನಿಟ್ಟಿನಲ್ಲಿ ತರಬೇತಿ ಪಡೆದಿರುವುದು ಗೊತ್ತೇ ಇದೆ. ಇಂದಿನಿಂದ ಧೋನಿ ಗಡಿ ಕಾಯುತ್ತಿದ್ದಾರೆ. ಟೆರಿಟೋರಿಯಲ್ ಆರ್ಮಿ 106 ಬೆಟಾಲಿಯನ್ ನಲ್ಲಿ ಧೋನಿ ಸೇವೆಗೆ ಜಾಯಿನ್ ಆಗಿದ್ದಾರೆ. ಧೋನಿ ವಿವಿಧ ಕೆಲಸಗಳನ್ನು ನಿರ್ವಹಿಸಲಿದ್ದಾರೆ. ಸೇನೆಯ ಜೊತೆಗೆ ಜನರ ನಡುವೆ ಉತ್ತಮ ಸಂಬಂಧ ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಪ್ಯಾರಾಟ್ರೂಪರ್ ಆಗಿ ತರಬೇತಿ ಪಡೆದಿದ್ದಾರೆ. ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿಯೂ ಧೋನಿ ಪಾಲ್ಗೊಳಲಿದ್ದಾರೆ.
ಒಟ್ಟಿಲ್ಲಿ ಬ್ಯಾಟ್ ಹಿಡಿದು ಅದೆಷ್ಟೋ ಮಂದಿಗೆ ಸ್ಫೂರ್ತಿಯಾಗಿರುವ ಮಾಹಿ…ಸೇನೆಯಲ್ಲಿ ಕಾರ್ಯನಿವರ್ಹಿಸುವ ಮೂಲಕ ಆದರ್ಶರಾಗಿದ್ದಾರೆ.