ಭಕ್ತಿ, ಧಾರ್ಮಿಕ ಭಾವನೆಗಳನ್ನೇ ಅಸ್ತ್ರವಾಗಿಸಿಕೊಂಡು ವಂಚನೆ ಮಾಡುವುದನ್ನೇ ಕೆಲವರು ಕಾಯಕವನ್ನಾಗಿ ಮಾಡಿಕೊಂಡಿರ್ತಾರೆ.
ಶಿವಮೊಗ್ಗದಲ್ಲಿ ಹಜ್ ಯಾತ್ರೆ ಹೆಸರಿನಲ್ಲಿ ಟ್ರಾವೆಲ್ಸ್ ಮಾಲೀಕನೊಬ್ಬ ನೂರಾರು ಭಕ್ತರಿಗೆ ಲಕ್ಷಾಂತರ ರೂ ಪಂಗನಾಮ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ತೂಬ ಇಂಟರ್ ನ್ಯಾಷನಲ್ ಟ್ರಾವೆಲ್ಸ್ ಮಾಲೀಕ ಮುಜಾಕೀರ ಆರೋಪಿ. ಕಡಿಮೆ ಹಣದಲ್ಲಿ ಹಜ್ ಯಾತ್ರೆಗೆ ಕರೆದುಕೊಂಡು ಹೋಗುವುದಾಗಿ ಬಡ ಭಕ್ತರನ್ನೀತ ನಂಬಿಸಿದ್ದ. ಈ ಭೂಪನ ಮಾತನ್ನು ನಂಬಿ, ಹಗಲು – ರಾತ್ರಿ ಎನ್ನದೆ, ಹೊಟ್ಟೆ -ಬಟ್ಟೆ ಕಟ್ಟಿ ಕೂಡಿಟ್ಟಿದ್ದ ಹಣವನ್ನು ಮಲೆನಾಡಿಗರು ಹಜ್ ಯಾತ್ರೆಗೆಂದು ನೀಡಿದ್ದರು. ಹಣ ಪಡೆದ ಆಸಾಮಿ ನಾಪತ್ತೆಯಾಗಿದ್ದು, ಯಾತ್ರೆ ಬಗ್ಗೆ ವಿಚಾರಿಸಲು ತೆರಳಿದ್ದಾಗ ವಂಚನೆಗೊಳಗಾಗಿರುವುದು ತಿಳಿದಿದೆ. ಹೀಗೆ ಧಾರ್ಮಿಕ ಭಾವನೆಗಳ ಜೊತೆ ಚೆಲ್ಲಾಟವಾಡಿರುವ ಈ ಖದೀಮನ ವಿರುದ್ಧ ನಗರದ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಕ್ತರಿಗೆ ಹಜ್ ಯಾತ್ರೆ ಹೆಸರಲ್ಲಿ ಪಂಗನಾಮ ಹಾಕಿದ ಭೂಪ!
Date:






