ಶಿವಮೊಗ್ಗ: ಭದ್ರಾವತಿಯಲ್ಲಿ ಕಬ್ಬಡಿ ಪಂದ್ಯದಲ್ಲಿ ನಡೆದಿದ್ದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಬಿ.ಕೆ.ಸಂಗಮೇಶ್ ಪುತ್ರ ಬಸವೇಶ್ ಬಂಧನವಾಗಿದೆ. ಬಸವೇಶ್ ಸೇರಿದಂತೆ ಇದುವರೆಗೂ 15 ಜನರನ್ನ ಪೊಲೀಸರು ಬಂಧಿಸಿದ್ದಾರೆ.
ಫೆಬ್ರವರಿ 28ರಂದು ಕಬ್ಬಡಿ ಪಂದ್ಯದ ವೇಳೆ ಬಿಜೆಪಿ ಕಾರ್ಯಕರ್ತರು ಜೈಶ್ರೀರಾಮ ಘೋಷಣೆ ಕೂಗಿದ್ದರು. ಈ ಹಿನ್ನೆಲೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಘಟನೆಯಲ್ಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಧರ್ಮಪ್ರಸಾದ್ ಸೇರಿದಂತೆ ನಾಲ್ವರು ಗಾಯಗೊಂಡಿದ್ದರು. ಹಲ್ಲೆ ಸಂಬಂಧ ಭದ್ರಾವತಿಯ ಹಳೆನಗರ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯಿಂದ ದೂರುಗಳು ದಾಖಲಾಗಿದ್ದವು.
ದೂರು ದಾಖಲಾದ ನಂತರ ಶಾಸಕ ಸಂಗಮೇಶ್ ಪುತ್ರ ತಲೆ ಮರೆಸಿಕೊಂಡು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಇಂದು ಬೆಳಗಿನ ಜಾವ ಚಳ್ಳಕೆರೆ ಬಳಿ ಶಾಸಕ ಪುತ್ರ ಬಸವೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಎಲ್ಲಿ ನೋಡಿದ್ರೂ ‘ಯುವರತ್ನ’ನದ್ದೇ ಮಾತು – ಇದು ರೀ ಪವರ್ ಸ್ಟಾರ್ ಖದರ್!
ಕೊರೋನಾ ನಂತರ ಇದೀಗ ಎಲ್ಲಾ ಕ್ಷೇತ್ರಗಳು ಚೇತರಿಸಿಕೊಳ್ಳುತ್ತಿವೆ. ಸಿನಿ ಹಬ್ಬಕೂಡ ಶುರುವಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾದ ಕಡೆ ಎಲ್ಲರ ಚಿತ್ತ ನೆಟ್ಟಿದೆ. ಕ್ಲಾಸ್ & ಮಾಸ್ ಎಂಟರ್ ಟೈನರ್ ಅಪ್ಪು ಯುವರತ್ನನಾಗಿ ಮಿಂಚುತ್ತಿದ್ದಾರೆ. ಸಿನಿಮಾ ಸೆಟ್ಟೇರಿದಲ್ಲಿಂದಲೂ ಸದ್ದು ಮಾಡುತ್ತಿರುವ ಯುವರತ್ನನ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಅಭಿಮಾನಿಗಳು ಚಿತ್ರ ರಿಲೀಸ್ ಗೆ ವ್ಹೈಟ್ ಮಾಡ್ತಿದ್ದಾರೆ. ಯುವರತ್ನನ ಹಾಡು ಮಿಲಿಯನ್ ಗಟ್ಟಲೆ ವೀವ್ಸ್ ಪಡೆದಿದೆ.
ಯುವರತ್ನ (Yuvarathnaa) ಏಪ್ರಿಲ್ 1ರಂದು ಬಿಡುಗಡೆಯಾಗಲಿದೆ. ಕನ್ನಡ ಮತ್ತು ತೆಲುಗಿನಲ್ಲಿ ಊರಿಗೊಬ್ಬ ರಾಜ, ಆ ರಾಜಂಗೊಬ್ಬಳು ರಾಣಿ, ಇಬ್ರೂ ಮದುವೆ ಆದ್ರೆ ಹಾಲು-ಜೇನು ಹಾಡು ರಿಲೀಸ್ ಆಗಿದೆ. ಜಾನಿಯವರ ಕೊರಿಯಾಗ್ರಫಿ ಸಖತ್ ಹಿಡಿಸುತ್ತದೆ.
‘ಊರಿಗೊಬ್ಬ ರಾಜಾ, ಆ ರಾಜಂಗೊಬ್ಬಳು ರಾಣಿ’ ಹಾಡು ಹೊಂಬಾಳೆ ಫಿಲ್ಮ್ಸ್ನ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ.
3.40 ಸೆಕೆಂಡ್ಗಳ ಹಾಡು ಬಿಡುಗಡೆಯಾಗಿದ್ದು, ಪವರ್ ಸ್ಟಾರ್ ಪುನೀತ್ ಅವರು ಅಷ್ಟೇ ಪವರ್ಫುಲ್ ಆಗಿ ಸ್ಟೆಪ್ ಹಾಕಿದ್ದಾರೆ. ಊರಿಗೊಬ್ಬ ರಾಜ ಹಾಡಿನ ಸಾಹಿತ್ಯವನ್ನು ಚಿತ್ರ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರೇ ರಚಿಸಿದ್ದು, ತಮನ್.ಎಸ್ ಸಂಗೀತ ನೀಡಿದ್ದಾರೆ. ರಮ್ಯಾ ಬೆಹರಾ ಜೊತೆಗೆ ಪುನೀತ್ ರಾಜ್ಕುಮಾರ್ ಅವರೇ ಧ್ವನಿಯಾಗಿದ್ದು ವಿಶೇಷ.
ಬಾಲಿವುಡ್ ಮತ್ತು ಟಾಲಿವುಡ್‌ನ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡ ನಟಿ ಗೆಹನಾ ವಸಿಷ್ಠ ಅವರು ನೀಲಿ ಚಿತ್ರಗಳ ದಂಧೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಸದ್ಯ ಮುಂಬೈ ಪೊಲೀಸರ ಅತಿಥಿ ಆಗಿರುವ ಈ ನಟಿಯ ಮೇಲೆ ಹಲವು ಆರೋಪಗಳು ಕೇಳಿಬಂದಿವೆ. ಯುವತಿಯರಿಗೆ ಹಣದ ಆಮಿಷವೊಡ್ಡಿ ಅಶ್ಲೀಲ ದೃಶ್ಯಗಳಲ್ಲಿ ನಟಿಸುವಂತೆ ಆಕೆ ಒತ್ತಾಯಿಸುತ್ತಿದ್ದರು ಎಂಬ ವಿಷಯ ಬಹಿರಂಗ ಆಗಿದೆ.
ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆ ಇಟ್ಟುಕೊಂಡು ಬರುವ ಹದಿಹರೆಯದ ಯುವತಿಯರಿಗೆ ಗೆಹನಾ ಹಣದ ಆಮಿಷ ಒಡ್ಡುತ್ತಿದ್ದರು. ಮಾಡೆಲ್‌ಗಳಿಗೆ 15ರಿಂದ 20 ಸಾವಿರ ರೂ.ಗಳವರೆಗೆ ಹಣ ನೀಡುತ್ತಿದ್ದರು. ನಂತರ ಅವರನ್ನು ‘ಅಂತಹ’ ದೃಶ್ಯಗಳಲ್ಲಿ ನಟಿಸುವಂತೆ ಮಾಡುತ್ತಿದ್ದರು. ಹೀಗೆ ಶೂಟಿಂಗ್ ಮಾಡಿಕೊಂಡ ನೀಲಿ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿ ಅವುಗಳಿಂದ ಗೆಹನಾ ಹಣ ಗಳಿಸುತ್ತಿದ್ದರು ಎನ್ನಲಾಗಿದೆ.
ಅಶ್ಲೀಲ ದೃಶ್ಯಗಳನ್ನು ಚಿತ್ರಿಸಿ ಅವುಗಳನ್ನು ತಮ್ಮ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಗೆಹನಾರನ್ನು ಬಂಧಿಸಲಾಗಿದೆ. 87ಕ್ಕೂ ಹೆಚ್ಚು ವಿಡಿಯೋಗಳನ್ನು ಅವರು ಅಪ್‌ಲೋಡ್ ಮಾಡಿದ್ದಾರೆ. ಈ ವೆಬ್‌ಸೈಟ್‌ಗೆ ಚಂದಾದಾರರಾಗಲು ಬಯಸುವವರು 2 ಸಾವಿರ ರೂ. ನೀಡಬೇಕಿತ್ತು. 36 ಲಕ್ಷ ರೂ. ಹೊಂದಿರುವ ಗೆಹನಾ ಅವರ ಮೂರು ಬ್ಯಾಂಕ್ ಖಾತೆಗಳ ಮೇಲೆ ಪೊಲೀಸರು ಈಗ ಕಣ್ಣಿಟ್ಟಿದ್ದಾರೆ. ಈ ವೆಬ್‌ಸೈಟ್‌ನಿಂದಲೇ ಗೆಹನಾ ಇಷ್ಟು ಹಣ ಸಂಪಾದಿಸಿದ್ದರು ಎನ್ನಲಾಗಿದೆ.
ಆದರೆ ಈ ಯಾವ ಆರೋಪಗಳನ್ನೂ ಗೆಹನಾ ವಸಿಷ್ಠ ಒಪ್ಪಿಕೊಳ್ಳುತ್ತಿಲ್ಲ. ಈ ಬಗ್ಗೆ ಅವರ ಲೀಗಲ್ ಟೀಮ್ ಒಂದು ಹೇಳಿಕೆ ಬಿಡುಗಡೆ ಮಾಡಿದೆ. ‘ಗೆಹನಾ ವಸಿಷ್ಠ ನಿರಪರಾಧಿ. ಯಾವುದೇ ಅಶ್ಲೀಲ ಸಿನಿಮಾ ಹಗರಣದಲ್ಲಿ ಅವರು ತೊಡಗಿಕೊಂಡಿಲ್ಲ. ಅವರನ್ನು ದುರುದ್ದೇಶದಿಂದ ಸಿಕ್ಕಿಸಲಾಗಿದೆ. ಅವರ ಹೆಸರಿಗೆ ಕಳಂಕ ತರಬೇಕು ಎಂಬ ಉದ್ದೇಶದಿಂದ ವಿರೋಧಿಗಳು ಈ ರೀತಿ ಮಾಡಿದ್ದಾರೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.