ಭಯೋತ್ಪಾದಕರು ಹಿಂದೂಗಳ ಮೇಲೆ ನಡೆಸಿದ ದಾಳಿ ಅಂತ ಓವೈಸಿ ಒಪ್ಪಿದ್ದಾರೆ: ತೇಜಸ್ವಿ ಸೂರ್ಯ
ಬೆಂಗಳೂರು: ಭಯೋತ್ಪಾದಕರು ಹಿಂದೂಗಳ ಮೇಲೆ ನಡೆಸಿದ ದಾಳಿ ಅಂತ ಓವೈಸಿ ಒಪ್ಪಿದ್ದಾರೆ ಎಂದು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಹಿಂದೂ ಪುರುಷರನ್ನು ಗುರುತಿಸಿ ಅವರ ಹೆಂಡತಿ ಮಕ್ಕಳ ಮುಂದೆ ಕೊಲೆ ಮಾಡಿದ್ದಾರೆ.
ಅವರು ಕೊಂದಿದ್ದು ಪ್ರವಾಸಿಗರಲ್ಲ, ತಾವು ಹಿಂದೂ ಎಂದಿದಕ್ಕೆ ಮಾತ್ರವೇ ಅವರನ್ನು ಕೊಂದಿದ್ದಾರೆ. ಇದು ಭಯೋತ್ಪಾದಕರು ಹಿಂದೂಗಳ ಮೇಲೆ ನಡೆಸಿದ ದಾಳಿ ಅಂತ ಓವೈಸಿ ಒಪ್ಪಿದ್ದಾರೆ. ಬೇಸರದ ಸಂಗತಿ ಏನೆಂದರೆ ಕಾಂಗ್ರೆಸ್ ಒಪ್ಪಲು ತಯಾರಿಲ್ಲ ಎಂದರು.
ಎಂಥ ದರಿದ್ರ ಪರಿಸ್ಥಿತಿಗೆ ಈ ಸರ್ಕಾರ ಇಳಿದಿದೆ ಎಂದರೆ ಈ ಸರ್ಕಾರ ಮೃತರ ಕುಟುಂಬಕ್ಕೆ 10 ಲಕ್ಷ ರೂ. ಹಣ ಘೋಷಣೆ ಮಾಡಿದೆ. ಕನಿಷ್ಠ ಮಾನವೀಯತೆ ಇದ್ದರೆ 1 ಕೋಟಿ ರೂ. ಕೊಡಬೇಕಿತ್ತು. ಪಕ್ಕದ ಕೇರಳದಲ್ಲಿ ಆನೆ ತುಳಿತಕ್ಕೆ ಒಳಗಾದವರಿಗೆ ಈ ಸರ್ಕಾರ 15 ಲಕ್ಷ ಹಣ ನೀಡಿದೆ. ಅದಕ್ಕೆ ಸರಿ ಸಮಾನವಾಗಿ ಆದರೂ ಹಣ ಕೊಡಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.