ಭಯೋತ್ಪಾದಕ ದಾಳಿಗೆ ಹಿಂದೂ-ಮುಸ್ಲಿಂ ಬಣ್ಣ ಕಟ್ಟುವುದು ಸರಿಯಲ್ಲ: ಸಚಿವ ಆರ್‌ ಬಿ ತಿಮ್ಮಾಪುರ

Date:

ಭಯೋತ್ಪಾದಕ ದಾಳಿಗೆ ಹಿಂದೂ-ಮುಸ್ಲಿಂ ಬಣ್ಣ ಕಟ್ಟುವುದು ಸರಿಯಲ್ಲ: ಸಚಿವ ಆರ್‌ ಬಿ ತಿಮ್ಮಾಪುರ

ಬಾಗಲಕೋಟೆ: ಭಯೋತ್ಪಾದಕ ದಾಳಿಗೆ ಹಿಂದೂ-ಮುಸ್ಲಿಂ ಬಣ್ಣ ಕಟ್ಟುವುದು ಸರಿಯಲ್ಲ ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಸಚಿವರು, ತನ್ನ ಮಗನನ್ನು ಮುಸ್ಲಿಮರೇ ರಕ್ಷಿಸಿದ್ದಾರೆಂದು ಪಲ್ಲವಿ ಅವರೇ ಹೇಳಿದ್ದಾರೆ ಎಂದಿದ್ದಾರೆ. ಗುಪ್ತಚರ ವೈಫಲ್ಯವನ್ನು ಮುಚ್ಚಿ ಹಾಕಲು, ಭಯೋತ್ಪಾದಕ ದಾಳಿಗೆ ಹಿಂದೂ-ಮುಸ್ಲಿಂ ಬಣ್ಣ ಕಟ್ಟುವುದು ಸರಿಯಲ್ಲ. ಇಂಥ ಘಟನೆಗಳನ್ನು ಚುನಾವಣೆ ದೃಷ್ಟಿಯಿಂದ ನೋಡಬಾರದು ಎಂದು ಸಚಿವರು ಹೇಳಿದ್ದಾರೆ.
ಯಾರಾದರೂ ಗುಂಡಿನ ದಾಳಿ ಮಾಡುವಾಗ ನಿಂತುಕೊಂಡು ಪ್ರಶ್ನೆ ಮಾಡುತ್ತಾರೆಯೇ? ಹಾಗೆ ಮಾಡಿರಬಹುದು ಎಂದು ಅನಿಸುತ್ತಿಲ್ಲ. ಒಂದು ವೇಳೆ ಹಾಗೆ ಮಾಡಿದ್ದರೆ ಅದು ಕ್ರೂರ ಕೃತ್ಯ ಎಂದಿದ್ದಾರೆ. ಸಚಿವರ ಹೇಳಿಕೆಗೆ ಇದೀಗ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿದೆ.
ಪಲ್ಲವಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ದಾಳಿಯ ಆಘಾತದಿಂದ ಮನಸು ವಿಚಲಿತಗೊಂಡು ಅವರು ಹಾಗೆ (ಮುಸ್ಲಿಮರಾ ಎಂದು ಕೇಳಿ ದಾಳಿ ಮಾಡಿದ್ದಾರೆ ಎಂಬ ಹೇಳಿಕೆ) ಹೇಳಿರಬಹುದು ಎಂದರು.

Share post:

Subscribe

spot_imgspot_img

Popular

More like this
Related

ಮೋಂಥಾ ಚಂಡಮಾರುತ: ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಾದ್ಯಂತ ಭಾರೀ ಮಳೆ

ಮೋಂಥಾ ಚಂಡಮಾರುತ: ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಾದ್ಯಂತ ಭಾರೀ ಮಳೆ ಬೆಂಗಳೂರು:...

ರೆಡ್ ವೈನ್ ಕುಡಿಯುವುದು ನಿಜವಾಗಿಯೂ ಹೃದಯಕ್ಕೆ ಒಳ್ಳೆಯದೇ? ಇಲ್ಲಿದೆ ಮಾಹಿತಿ

ರೆಡ್ ವೈನ್ ಕುಡಿಯುವುದು ನಿಜವಾಗಿಯೂ ಹೃದಯಕ್ಕೆ ಒಳ್ಳೆಯದೇ? ಇಲ್ಲಿದೆ ಮಾಹಿತಿ ರೆಡ್ ವೈನ್‌...

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌ ಸೇರಿ 70 ಮಂದಿಗೆ ಗೌರವ

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌...

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ ಕಲಬುರಗಿ: ಚಿತ್ತಾಪುರದಲ್ಲಿ ನವೆಂಬರ್...