ರೋರಿಂಗ್ ಸ್ಟಾರ್ ಶ್ರೀ ಮುರುಳಿ ಅಭಿನಯದ ಭರಾಟೆ ರಾಜ್ಯದ 350 ಕ್ಕಿಂತಲೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. ಹೀಗೆ ತೆರೆ ಕಂಡ ಎಲ್ಲಾ ಥಿಯೇಟರ್ ಗಳಲ್ಲೂ ಭರ್ಜರಿ ಓಪನಿಂಗ್ ಪಡೆದುಕೊಂಡು ಹೌಸ್ ಪುಲ್ ಪ್ರದರ್ಶನ ಕಾಣುತ್ತಿದೆ.
ಚಿತ್ರದಲ್ಲಿ ಶ್ರೀಮುರುಳಿ ಎರಡು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದು, ಪ್ರೇಕ್ಷಕರನ್ನು ಮೋಡಿ ಮಾಡುತ್ತಿದೆ. ಶ್ರೀ ಲೀಲಾ ನಟನೆಗೆ ಅಭಿಮಾನಿಗಳು ಫಿಧಾ ಆಗಿದ್ದಾರೆ ಹಾಗು ಕೌಟುಂಬಿಕ ಕಥಾಹಂದರ ಎಲ್ಲರನ್ನೂ ಸೆಳೆಯುತ್ತಿದೆ.