ಭಾರತದಲ್ಲಿ ಭಾರತೀಯರಿಗೆ “ನೋ ಎಂಟ್ರಿ” ಭಾರತೀಯರಿಗೇ ಪ್ರವೇಶ ನೀಡದ ಭಾರತದ ಸ್ಥಳಗಳು..!
ನಮ್ ದೇಶಕ್ಕೆ ಸ್ವಾತಂತ್ರ್ಯ ಬಂದಿದೆಯಾ..? ಹೌದು, 1947ರಲ್ಲೇ ಬಂತಲ್ಲಾ..! ಹೌದಾ..? ಹಾಗಾದ್ರೆ ನಾವು ನಮ್ ದೇಶದಲ್ಲಿ ಎಲ್ಲಿ ಬೇಕಾದ್ರೂ ಸುತ್ತ ಬಹುದಾ..? ಎಲ್ಲಿ ಬೇಕಾದ್ರೂ ವಾಸ ಮಾಡ್ಬಹುದಾ..? ಬೇರೆ ಅವರಿಗೆ ತೊಂದ್ರೆ ಕೊಡ್ದೆ ಎಲ್ಲಿಗೆ ಬೇಕಾದ್ರೂ.., ಯಾವಾಗ ಬೇಕಾದ್ರೂ ಹೋಗ್ಬಹುದಾ..? ಎಲ್ಲಾ ಕಡೆ ಪ್ರವೇಶ ಇದೆಯಾ..? ಹ್ಞೂಂ, ಎಲ್ಲಿಗೆ ಬೇಕಾದ್ರು, ಯಾವಾಗ ಬೇಕಾದ್ರೂ ಹೋಗ್ಬಹುದು..! ಇದೇನ್ ಸಾರ್ ನೀವು ಹೀಗೆ ಚಿಕ್ ಮಕ್ಕಳು ಕೇಳಿದಂಗೆ ಕೇಳ್ತಾ ಇದ್ದೀರಲ್ಲಾ..? ಯಾಕ್ ಸಾರ್, ನಿಮಗೆ ಈ ಡೌಟು ಶುರುವಾಗಿದೆ..? ಅಯ್ಯೋ.. ಇವರಿಗೆ ಏನ್ ಆಯ್ತಾಪ್ಪಾ.. ದೇಶಕ್ಕೆ ಸ್ವಾತಂತ್ರ್ಯ ಬಂದಿದೆ ಅನ್ನೋದನ್ನೇ ಅನುಮಾನದಿಂದ ಪ್ರಶ್ನೆ ಮಾಡ್ತಾ ಇದ್ದಾರಲ್ಲಾ..? ಅಂತ ತಲೆ ಕೆಡಿಸಿಕೊಂಡ್ರಾ..? ಈಗ ನಾವ್ ಹೇಳೋ ಸುದ್ದಿ ಕೇಳಿದ್ರೆ.. “ಹೌದಾ..? ನಮ್ ದೇಶಕ್ಕೆ ಸ್ವಾತಂತ್ರ್ಯ ಯಾವಾಗ ಬಂತು..? ಬಂದಿದೆಯಾ..?” ಅಂತ ನೀವೇ ಕೇಳ್ತೀರ..!
ಸಾರ್ ಸ್ವಾತಂತ್ರ್ಯ ಬಂದಿದೆ ಅಂತಾದ್ರೆ ನಮ್ ದೇಶದ ಎಲ್ಲಾ ಪ್ರದೇಶಗಳಿಗೂ ನಾವು ಹೋಗ್ಬಹುದಲ್ಲವೇ..? ಆದ್ರೆ ನಮ್ ಇಂಡಿಯಾದಲ್ಲಿ ನಮಗೇ.. ಅಂದ್ರೆ ಇಂಡಿಯನ್ಸಿಗೇ ಕೆಲವೊಂದು ಕಡೆ ಪ್ರವೇಶವೇ ಇಲ್ಲ..! ಆ ಐದು ಸ್ಥಳಗಳ ಕುರಿತು ಮಾಹಿತಿ ಇಲ್ಲಿದೆ..!
1. ಫ್ರೀ ಕಾಸೋಲ್ ಕೆಫೆ :
ಹಿಮಾಚಲ ಪ್ರದೇಶದ ಕಾಸೋಲ್ ಎಂಬಲ್ಲಿ ಇರುವ ಕೆಫೆ ಇದು..! ಇಲ್ಲಿ ಭಾರತೀಯರಿಗೇ ಪ್ರವೇಶವಿಲ್ಲ..! ಈ ಹೋಟೆಲ್ ಗೆ ಎಂಟ್ರಿ ಕೊಡ್ಬೇಕು ಅಂದ್ರೆ ಪಾಸ್ ಪೋರ್ಟ್ ಚೆಕ್ ಮಾಡ್ತಾರಂತೆ ಸ್ವಾಮಿ..! ಭಾರತೀಯ ಬಣ್ಣ ನೋಡಿದ್ರೆ ಗೊತ್ತಾಗುತ್ತಲ್ಲಾ ಇವರು ಭಾರತೀಯರು ಅಂತ, ಆಗ ನಿಮಗೆ ಇಲ್ಲಿ ಎಂಟ್ರಿ ಇಲ್ಲ ಅಂತ ನೇರವಾಗಿಯೇ ಹೇಳ್ತಾರಂತೆ..! ಭಾರತೀಯರು ಬಂದ್ರೆ ಫುಡ್ ಸರ್ವ್ ಮಾಡಲ್ವಂತೆ..! ಇಂತಹದ್ದೊಂದು ಕೆಫೆ ಭಾರತದಲ್ಲಿ ಇರ್ಬೇಕಾ..? ರೀ, ಫ್ರೀ ಕಾಸೋಲ್ ಮಾಲೀಕರೇ ನೀವು ತಿನ್ತಾ ಇರೋದ್ ನಮ್ ಅನ್ನವನ್ನ..! ಇರೋದು ಕೂಡ ನಮ್ ಇಂಡಿಯಾದಲ್ಲಿಯೇ..! ನಮಗೇ ಎಂಟ್ರಿ ಇಲ್ಲ ಅಂದ್ರೆ ನೀವ್ ಎಷ್ಟ್ ದಿನ ಇಲ್ಲಿರ್ತೀರ್ರೀ..? ನಮ್ ಜನರಿಗೆ ಪ್ರವೇಶ ಕೊಡಿ.. ಇಲ್ಲವೇ ದೇಶ ಬಿಟ್ಟು ತೊಲಗಿ..!
2. ಯುನೋ-ಇನ್ ಹೋಟೆಲ್ :
ಈ ಹೋಟೆಲ್ ಇದ್ದಿದ್ದು ನಮ್ ಬೆಂಗಳೂರಲ್ಲೇ..! 2012ರಲ್ಲಿ ಪ್ರಾರಂಭವಾಗಿದ್ದ ಈ ಹೋಟೆಲ್ “ನಿಪೋನ್ ಇನ್ಫ್ರಸ್ಟ್ರೆಕ್ಚರ್” ಎಂಬ ಕಂಪನಿಯ ಒಡೆತನದಲ್ಲಿತ್ತಂತೆ..! ಇಲ್ಲಿಗೆ ಕೇವಲ ಜಪಾನಿ ಗ್ರಾಹಕರೇ ಹೆಚ್ಚಾಗಿ ಬರ್ತಾ ಇದ್ರು..! ಭಾರತೀಯರಿಗೆ ಪ್ರವೇಶವೇ ಇರ್ಲಿಲ್ವಂತೆ..! ಇದು ನಮ್ ಮೀಡಿಯಾಗಳಲ್ಲಿ ಬಿಸಿಬಿಸಿ ಸುದ್ದಿಯಾದ್ಮೇಲೆ “ಗ್ರೇಟರ್ ಬೆಂಗಳೂರ್ ಸಿಟಿ ಕಾರ್ಪೋರೇಷನ್” 2014ರಲ್ಲಿ ಈ “ಪರದೇಶಿ” ಹೋಟೆಲ್ ಗೆ ಬೀಗಾ ಜಡಿದಿದೆ..!
3. “ಪಾಂಡೀಚೆರಿಯ” ಈ ಬೀಚ್ ಗೆ “ಪರದೇಶಿಗಳಿಗೆ” ಮಾತ್ರ ಪ್ರವೇಶ :
ಪಾಂಡಿಚೆರಿ ವಿದೇಶಿಯರಿಗೆ ಫೇವರ್ ಆಗಿರುವ ಇನ್ನೊಂದು ಪ್ರದೇಶವಾಗಿದೆ..! ಪಾಂಡಿಚೆರಿಯಲ್ಲೊಂದು ಬೀಚಿದೆ..! ಈ ಬೀಚಿಗೆ ವಿದೇಶಿಯರು ಮಾತ್ರ ಬರಬಹುದು..! ಭಾರತಿಯರಿಗೆ ಇಲ್ಫ್ಲಿ ನೋ ಎಂಟ್ರಿ..!
4. ವಿದೇಶಿಯರಿಗೆ ಮಾತ್ರವಿರುವ “ಗೋವಾ ಬೀಚ್:
ಗೋವಾ ಅಂದ್ರೆ ಬೀಚ್..! ಅನ್ನುವಷ್ಟರ ಮಟ್ಟಿಗೆ ಗೋವಾ ಬೀಚ್ ಗಾಗಿ ಫೇಮಸ್ ಆಗಿದೆ..! ಬಟ್ ಇಂಡಿಯಾದ ಈ ರಾಜ್ಯದ ಕೆಲವೊಂದು ಬೀಚ್ ಗಳಲ್ಲಿ ಭಾರತೀಯರಿಗೇ ಪ್ರವೇಶವಿಲ್ಲ..! ಇಟ್ಸ್ ಒನ್ಲೀ ಫಾರ್ ಫಾರಿನ್ನರ್ಸ್..!
5. ಚೈನೈ ಲಾಡ್ಜ್ :
ಚೆನೈನ ಲಾಡ್ಜ್ ಒಂದರಲ್ಲಿ ಇಂಡಿಯನ್ಸ್ ಗೆ ಪ್ರವೇಶವಿಲ್ಲ..! ಐಷಾರಾಮಿ ಲಾಡ್ಜ್ ಗೆ ವಿದೇಶಿ ಪಾಸ್ಪೋರ್ಟ್ ಇರೋರಿಗೆ ಮಾತ್ರ ಪ್ರವೇಶ..! ಈ ಬಗ್ಗೆ ದೇಶದ ಹೆಸರಂತ ಪತ್ರಿಕೆಯಲ್ಲೂ ವರದಿಯಾಗಿದೆ..!
ಇದೆಂಥಾ ನ್ಯಾಯಾರೀ .. ಭಾರತದಲ್ಲಿಯೇ ಭಾರತೀಯರಿಗೆ ಪ್ರವೇಶವಿಲ್ಲ ಅಂತಾದ್ರೆ ಆ ಹೋಟೆಲ್ಸ್, ಬೀಚ್ ಗಳು ಯಾಕಿರಬೇಕು ಹೇಳಿ..! ನಮ್ ಭೂಮಿ, ನಮ್ ನೀರು, ನಮ್ಮದೇ ಪ್ರದೇಶಕ್ಕೆ ನಮಗೇ ಎಂಟ್ರೀ ಕೊಡಲ್ಲ ಅಂದ್ರೆ ಅವುಗಳನ್ನು ಮುಚ್ಚಬೇಕೋ ಬೇಡವೋ..? ಸ್ವಾತಂತ್ರ್ಯ ಭಾರತದಲ್ಲಿ ಭಾರತೀಯರೇ ಪರದೇಶಿಗಳಂದ್ರೆ..?!