ಅಲ್ಲು ಅರ್ಜುನ್. ದಕ್ಷಿಣ ಭಾರತದ ಸಿನೆಮಾದಲ್ಲಿ ಅಲ್ಲು ಅರ್ಜುನ್ ಅತ್ಯುತ್ತಮ ನಟರಾಗಿ ಗುರುತಿಸಿಕೊಂಡಿದ್ದಾರೆ. ಇವರು ‘ದಕ್ಷಿಣದ ಸಲ್ಮಾನ್ ಖಾನ್ ‘ ಎಂದೇ ಪರಿಗಣಿಸಲ್ಪಟ್ಟಿದ್ದಾರೆ. ಬಹುತೇಕ ಇವರ ಎಲ್ಲಾ ಚಲನಚಿತ್ರಗಳು ಸೂಪರ್ ಹಿಟ್ ಆಗಿವೆ.
ವರದಿಗಳ ಪ್ರಕಾರ ನಟ ಅಲ್ಲು ಅರ್ಜುನ್ ಸುಮಾರು 62 ಮಿಲಿಯನ್ ಡಾಲರ್ ಅಂದರೆ 434 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದ್ದಾರೆ.
ಮಾಧ್ಯಮಗಳ ವರದಿಗಳ ಪ್ರಕಾರ ಅಲ್ಲು ಅರ್ಜುನ್ ಚಿತ್ರವೊಂದರಲ್ಲಿ ನಟಿಸಲು 16 ರಿಂದ 18 ಕೋಟಿ ರೂಪಾಯಿ ಶುಲ್ಕವನ್ನು ತೆಗೆದುಕೊಳ್ಳುತ್ತಾರೆ. ಅಲ್ಲು ಅರ್ಜುನ್ ರ ಮನೆ ಮೌಲ್ಯವೇ 100 ಕೋಟಿ.
ಇವರ ಮನೆ ಹೈದರಾಬಾದ್ ನಲ್ಲಿದೆ. ಇದಲ್ಲದೇ ಅಲ್ಲು ಅರ್ಜುನ್ ಹತ್ತಿರ ರೇಂಜ್ ರೋವರ್, ಆಡಿ, BMW ಮತ್ತು ಜಾಗ್ವಾರ್ XJL ನಂತಹ ಐಷಾರಾಮಿ ಕಾರುಗಳು ಕೂಡಾ ಇವೆ. ಸದ್ಯ ನಟ ಅಲ್ಲು ಅರ್ಜುನ್ ತೆಲುಗು ಚಿತ್ರರಂಗದ ಟಾಪ್ ನಟರಾಗಿದ್ದಾರೆ.