ಭಾರತದ ಯಾವ ವಿಕೆಟ್ ಕೀಪರ್ ಮಾಡದ ಸಾಧನೆ ಮಾಡಿದ ಪಂತ್

0
24

ಆಸ್ಟ್ರೇಲಿಯಾ ನೆಲದಲ್ಲಿ ಆಸ್ಟ್ರೇಲಿಯಾದವರನ್ನೇ ಸದೆಬಡಿದು ಟೆಸ್ಟ್ ಸರಣಿ ವಶಪಡಿಸಲು ನೆರವಾದವರಲ್ಲಿ ಪಂತ್ ಕೂಡಾ ಒಬ್ಬರು. ಆ ನಂತರ ಎಲ್ಲೆಡೆ ರಿಷಬ್ ಪಂತ್ ಅವರ ಹೆಸರು ರಾರಾಜಿಸುತ್ತಿದೆ. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸಿರೀಸ್ ಗೆಲ್ಲುವುದರಲ್ಲಿ ರಿಷಬ್ ಪಂತ್ ಅವರ ಪಾಲು ಅಷ್ಟು ದೊಡ್ಡದಾಗಿತ್ತು.

ನಂತರದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ರಿಷಬ್ ಪಂತ್ ಅವರು ಸಿಡಿಸಿದ 101 ರನ್ ಗಳಿಂದ ಇದೀಗ ರಿಷಬ್ ಪಂತ್ ಅವರು ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ 15 ನೇ ಸ್ಥಾನದಲ್ಲಿದ್ದ ಪಂತ್ ಈಗ 7 ಸ್ಥಾನಗಳ ಜಿಗಿತವನ್ನು ಕಂಡಿದ್ದಾರೆ. ಹೌದು ಐಸಿಸಿ ಟೆಸ್ಟ್ ಕ್ರಿಕೆಟ್ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ರಿಷಬ್ ಪಂತ್ ಅವರು ಏಳನೇ ಸ್ಥಾನಕ್ಕೆ ಜಿಗಿದಿದ್ದಾರೆ. 747 ಅಂಕಗಳನ್ನು ಗಳಿಸಿರುವ ರಿಷಬ್ ಪಂತ್ ಅವರು ರೋಹಿತ್ ಶರ್ಮಾ ಮತ್ತು ನ್ಯೂಜಿಲೆಂಡ್ ನ ಹೆನ್ರಿ ನಿಕೊಲ್ಸ್ ಅವರುಗಳ ಜೊತೆ ಏಳನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಭಾರತದ ಯಾವೊಬ್ಬ ವಿಕೆಟ್ ಕೀಪರ್ ಕೂಡ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಟಾಪ್ 10 ಗೆ ಇದುವರೆಗೂ ಬಂದಿರಲೇ ಇಲ್ಲ. ಇದೀಗ ರಿಷಬ್ ಪಂತ್ ಅವರು ಟಾಪ್ ಟೆನ್‌ಗೆ ಲಗ್ಗೆ ಇಟ್ಟಿದ್ದು ಏಳನೇ ಸ್ಥಾನವನ್ನು ಆಕ್ರಮಿಸಿಕೊಂಡು ನೂತನ ದಾಖಲೆ ಬರೆದಿದ್ದಾರೆ.

 

LEAVE A REPLY

Please enter your comment!
Please enter your name here