ಭಾರತದ ವಿರುದ್ಧದ ಸರಣಿಗೆ ಶ್ರೀಲಂಕಾ ತಂಡ ಪ್ರಕಟ

Date:

ಭಾರತ ಹಾಗೂ ಶ್ರೀಲಂಕಾ ನಡುವಿನ ಸೀಮಿತ ಓವರ್‌ಗಳ ಸರಣಿಗೆ ಭಾನುವಾರ ಚಾಲನೆ ದೊರೆಯಲಿದೆ. ಆರು ಪಂದ್ಯಗಳ ಸೀಮಿತ ಓವರ್‌ಗಳ ಸರಣಿಯಲ್ಲಿ ಮೊದಲಿಗೆ ಏಕದಿನ ಪಂದ್ಯಗಳು ನಡೆಯಲಿದೆ. ಈ ಸರಣಿಗೆ ಶ್ರೀಲಂಕಾ ತಂಡವನ್ನು ಇಂದು ಆಯ್ಕೆ ಮಾಡಲಾಗಿದೆ. ದಸುನ್ ಶನಕಾ ನೇತೃತ್ವದ ತಂಡ ಇದಾಗಿದ್ದು 23 ಸದಸ್ಯರ ತಂಡವನ್ನು ಹೆಸರಿಸಲಾಗಿದೆ.

 

ಈ ಮೂಲಕ ದಸುನ್ ಶನಕಾ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕನಾಗಿದ್ದು ಕಳೆದ ನಾಲ್ಕು ವರ್ಷಗಳಲ್ಲಿ ಲಂಕಾ ತಂಡವನ್ನು ಮುನ್ನಡೆಸುತ್ತಿರುವ 10ನೇ ನಾಯಕನಾಗಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಈ ತಂಡಕ್ಕೆ ಶ್ರೀಲಂಕಾ ಕ್ರೀಡಾ ಸಚಿವ ನಮಲ್ ರಾಜಪಕ್ಸ ಔಪಚಾರಿಕ ಅನುಮೋದನೆಯನ್ನು ನೀಡಿದ್ದಾರೆ.
ನಾಯಕನ ಸ್ಥಾನದಿಂದ ಕೆಳಗಿಳಿದ ಕುಸಲ್ ಪೆರೆರಾ ಮೊಣಕಾಲು ನೋವಿನ ಕಾರಣದಿಂದಾಗಿ ಈ ಸರಣಿಯಿಂದ ಹೊರಗುಳಿದಿದ್ದಾರೆ. ಇವರ ಜೊತೆಗೆ ಎಡಗೈ ವೇಗಿ ಬಿನುರಾ ಫೆರ್ನಾಂಡೋ ಪಾದದ ಗಾಯಕ್ಕೊಳಗಾಗಿದ್ದು ಸರಣಿಯಲ್ಲಿ ಆಡುತ್ತಿಲ್ಲ. ಲಂಕಾ ತಂಡಕ್ಕಿರುವ ಸಕಾರಾತ್ಮಕ ಸುದ್ದಿಯೆಂದರೆ ಇಂಗ್ಲೆಂಡ್ ಸರಣಿಯಿಂದ ವಾಪಾಸ್ ಬಂದ ಬಳಿಕ ಕೋಚ್ ಗ್ರಾಂಡ್ ಫ್ಲವರ್ ಮತ್ತು ದತ್ತಾಂಶ ವಿಶ್ಲೇಷಕ ಜಿಟಿ ನಿರೋಶನ್ ಹೊರತುಪಡಿಸಿ ತಂಡದ ಕ್ರಿಕೆಟಿಗರು ಯಾರು ಕೂಡ ಕೊರೊನಾವೈರಸ್‌ಗೆ ತುತ್ತಾಗಿಲ್ಲ.
ಈ ತಮಡದಲ್ಲಿ ಅನುಭವಿ ಆಟಗಾರ ಉಪನಾಯಕ ಧನಂಜಯ ಡಿಸಿಲ್ವ, ಅಕಿಲ ಧನಂಜಯ, ಇಸುರು ಉದಾನ, ಕಸುನ್ ರಜಿತಾ, ದುಷ್ಮಂತ ಚಮೀರಾ ಅವರಂತಾ ಅನುಭವಿ ಆಟಗಾರರ ಜೊತೆಗೆ ಯುವ ಬ್ಯಾಟಿಂಗ್ ಪ್ರತಿಭೆಗಳಾದ ಪತುಮ್ ಸಿಸ್ಸಾಂಕ, ಆವಿಷ್ಕಾ ಫೆರ್ನಾಂಡೋ ಮತ್ತು ಚರಿತ್ ಅಸಲಂಕಾ ಕೂಡ ಅವಕಾಶವನ್ನು ಪಡೆದುಕೊಂಡಿದ್ದಾರೆ.

 

ಶ್ರೀಲಂಕಾ ಸ್ಲ್ವಾಡ್ ಹೀಗಿದೆ: ದಸುನ್ ಶನಕಾ (ನಾಯಕ), ಧನಂಜಯ ಡಿ ಸಿಲ್ವಾ (ಉಪನಾಯಕ), ಅವಿಷ್ಕಾ ಫರ್ನಾಂಡೊ, ಭಾನುಕಾ ರಾಜಪಕ್ಸೆ, ಪಾತುಮ್ ನಿಸ್ಸಂಕ, ಚರಿತ್ ಅಸಲಂಕಾ, ವನಿಂದು ಹಸರಂಗ, ಆಶೆನ್ ಬಂಡರಾ, ಮಿನೋಡ್ ಭನುಕಾ, ಲಹಿರು ಉದಾರ, ರಮೇಶ್ ಮೆಂಡಿಸ್, ಚಮಿಕಾ ಕರುಣರತ್ನೆ, ದುಷ್ಮಂತಾ ಚಮೀರಾ, ಲಕ್ಷನ್ ಸಂದಕನ್, ಅಕಿಲಾ ಧನಂಜಯ, ಶಿರನ್ ಫರ್ನಾಂಡೊ, ಧನಂಜಯ ಲಕ್ಷನ್, ಇಶಾನ್ ಜಯರತ್ನ, ಪ್ರವೀಣ್ ಜಯವಿಕ್ರೆಮಾ, ಆಸಿತಾ ಫರ್ನಾಂಡೊ, ಕಸುನ್ ರಾಜಿತಾ, ಲಹಿರು ಕುಮಾರ, ಇಸುರು ಉದಾನ

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...