ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸೀರೀಸ್ ನಾಲ್ಕನೇ ಪಂದ್ಯದಲ್ಲಿ ನಡೆಯುತ್ತಿದೆ. ಎರಡು ತಂಡಗಳು ಸರಣಿಯಲ್ಲಿ ಸಮಬಲ ಸಾಧಿಸಿರುವ ಹಿನ್ನೆಲೆಯಲ್ಲಿ ನಾಲ್ಕನೇ ಪದ್ಯ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳಿಗೆ ಅತಿ ಮುಖ್ಯವಾಗಿದೆ.
ಇನ್ನು ನಾಲ್ಕನೇ ಪಂದ್ಯ ನಾಳೆಗೆ ಮುಕ್ತಾಯವಾಗಲಿದೆ. ನಾಲ್ಕನೇ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ಗೆಲುವು ಸಾಧಿಸಲು 328 ರನ್ ಗಳ ಗುರಿಯನ್ನು ಆಸೆ ಇದೆಯಾ ನೀಡಿದೆ. ಇಂದು ಮಳೆಯ ಅಡಚಣೆಯಿಂದಾಗಿ ಪಂದ್ಯ ಮೊಟಕುಗೊಂಡಿದ್ದು 1.5 ಓವರ್ ನಲ್ಲಿ ಟೀಮ್ ಇಂಡಿಯಾ 4 ರನ್ನುಗಳನ್ನು ಕಲೆ ಹಾಕಿದೆ. ಇನ್ನೂ ಪಂದ್ಯವನ್ನು ಗೆಲ್ಲಲು 324 ರನ್ ಬೇಕಾಗಿದ್ದು, 10 ವಿಕೆಟ್ ಗಳು ಕೈನಲ್ಲಿವೆ.
ಟೀಮ್ ಇಂಡಿಯಾಗೆ ಈ ಗುರಿಯನ್ನು ಬೆನ್ನತ್ತಲು ಇನ್ನೊಂದು ದಿನ ಅವಕಾಶವಿದೆ. ಇದೇ ವೇಳೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ನಾಲ್ಕನೇ ಪಂದ್ಯದ ಕುರಿತು ಮಾತನಾಡಿದ್ದು ಒಂದು ವೇಳೆ ಆಸ್ಟ್ರೇಲಿಯಾ ತಂಡ ಟೀಮ್ ಇಂಡಿಯಾ ವಿರುದ್ಧ ಈ ಪಂದ್ಯವನ್ನು ಏನಾದರೂ ಸೋತರೆ ಅದಕ್ಕಿಂತ ಕೆಟ್ಟ ಅವಮಾನ ಇನ್ನೊಂದು ಇಲ್ಲ ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾ ತಂಡದಲ್ಲಿ ವಾರ್ನರ್ & ಸ್ಟೀವ್ ಸ್ಮಿತ್ ಇದ್ದಾರೆ, ಟೀಮ್ ಇಂಡಿಯಾದಲ್ಲಿ ಆಟಗಾರರು ಗಾಯಾಳುಗಳಾಗಿದ್ದಾರೆ, ಎಲ್ಲವೂ ಸಹ ಆಸ್ಟ್ರೇಲಿಯಾ ತಂಡದ ಪರವೇ ಇದೆ.. ಹೀಗಾಗಿ ಇಷ್ಟೆಲ್ಲಾ ಅನುಕೂಲಗಳು ಇದ್ದರೂ ಸಹ ಪಂದ್ಯವನ್ನು ಗೆಲ್ಲುವ ಬದಲು ಡ್ರಾ ಮಾಡಿಕೊಂಡರೆ ಅದು ಆಸ್ಟ್ರೇಲಿಯಾ ತಂಡಕ್ಕೆ ಅವಮಾನ ಎಂದು ಹೇಳಿದ್ದಾರೆ ರಿಕಿ ಪಾಂಟಿಂಗ್