ಭಾರತದ ಸೋಲಿಗೆ ಕಾರಣ ನ್ಯೂ ಜೆರ್ಸಿಯಂತೆ..!

Date:

ಭಾರತ ವಿಶ್ವಕಪ್ 2019 ಗೆಲ್ಲುವ ನೆಚ್ಚಿನ ತಂಡವೆನಿಸಿದೆ. ಸೋಲಿಲ್ಲದೆ ಅಜೇಯ ಓಟ ಕಂಡಿದ್ದ ಭಾರತ ಅತಿಥೇಯ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿದೆ. ಭಾರತದ ಮೊದಲ ಸೋಲು ಕೂಡ ಇದು. ಈ ಸೋಲಿಗೆ ಇಂಗ್ಲೆಂಡ್ ಉತ್ತಮ ಆಟವೇ ಕಾರಣ, ಭಾರತ ಸ್ವಲ್ಪ ಪ್ರಯತ್ನಪಟ್ಟಿದ್ದರೆ ಭಾರತ ಗೆಲ್ಲುತ್ತಿತ್ತು. ಇದೀಗ ಭಾರತದ ಸೋಲಿಗೆ ಕಾರಣ ಜೆರ್ಸಿ ಎಂದು ಕೆಲವರು ಹೇಳುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಇಂಗ್ಲೆಂಡ್ ವಿರುದ್ಧ ಭಾರತದ ಸೋಲಿಗೆ ಜರ್ಸಿ ಕಾರಣ ಎಂದು ಟ್ವೀಟ್ ಮಾಡಿದ್ದಾರೆ..! ಇದನ್ನು ಮೂಢನಂಬಿಕೆ ಅಂತ ಬೇಕಾದ್ರು ಕರೆಯಿರಿ. ಈ ವಿಶ್ವಕಪ್ ನಲ್ಲಿ ಭಾರತದ ಗೆಲುವಿನ ಹಾದಿಗೆ ಅಡ್ಡಿಯಾಗಿದ್ದು, ಕೇಸರಿ ಜರ್ಸಿ ಎಂದೇ ನಾನು ಹೇಳ್ತೀನಿ ಎಂದು ಮೆಹಬೂಬಾ ಮುಫ್ತಿ ಟ್ವೀಟ್​ ಮಾಡಿ, ಜೆರ್ಸಿಯನ್ನು ಸೋಲಿಗೆ ಹೊಣೆಯಾಗಿಸಿದ್ದಾರೆ.


ಇಂಗ್ಲೆಂಡ್ ವಿರುದ್ಧ ಭಾರತ ತನ್ನ ಮಾಮೂಲಿ ಬ್ಲೂ ಕಲರ್ ಜೆರ್ಸಿ ಬಿಟ್ಟು ಕೇಸರಿ ಡ್ರೆಸ್​ನಲ್ಲಿ ಕಣಕ್ಕೆ ಇಳಿದಿತ್ತು. ಒನ್ ಡೇ ಫಾರ್ ಚಿಲ್ಡ್ರನ್ ಎಂಬ ಐಸಿಸಿ ಅಭಿಯಾನಕ್ಕೆ ಕೈ ಜೋಡಿಸಿ ಭಾರತ ನಿನ್ನೆ ಬೇರೆ ಕಲರ್ ಜೆರ್ಸಿಯಲ್ಲಿ ಆಡಿತ್ತು. ಅದಲ್ಲದೆ ಒಂದೇ ಬಣ್ಣದ ಜೆರ್ಸಿಯಲ್ಲಿ ಎರಡು ತಂಡಗಳು ಆಡವಂತಿಲ್ಲ ಎಂಬ ನಿಯಮ ಅಳವಡಿಸಲಾಗಿದೆ. ಫುಟ್ಬಾಲ್​ ಮಾದರಿಯಲ್ಲಿ ಇದನ್ನು ಕ್ರಿಕೆಟಿಗೂ ಅಳವಡಿಸಲಾಗಿದೆ. ಇಂಗ್ಲೆಂಡ್ ತವರು ಆಗಿದ್ದರಿಂದ ಅದು ತನ್ನದೇ ಜೆರ್ಸಿಯಲ್ಲಿ ಆಡಿತು. ಭಾರತ ಪ್ರವಾಸಿ ತಂಡವಾಗಿದ್ದರಿಂದ ಬೇರೆ ಬಣ್ಣದ ಜೆರ್ಸಿಯಲ್ಲಿ ಆಡಬೇಕಿತ್ತು. ಹಾಗಾಗಿ ಭಾರತ ಕೇಸರಿ ಜೆರ್ಸಿ ಆಯ್ಕೆ ಮಾಡಿಕೊಂಡಿತ್ತು. ಈಗ ಸೋಲಿಗೆ ಜೆರ್ಸಿ ಕಾರಣ ಎನ್ನುವ ಅಪವಾದ ಬಂದಿದೆ.|!

Share post:

Subscribe

spot_imgspot_img

Popular

More like this
Related

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ...

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಕಳ್ಳತನ...

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ. ಶಿವಕುಮಾರ್

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ....

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ: ಸಾಧಿಸಿ ತೋರಿಸಿ: ಸಿ.ಎಂ ಸಿದ್ದರಾಮಯ್ಯ ಕರೆ

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ:...