ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ)ದಲ್ಲಿ ಲೆಕ್ಕಪತ್ರ ಪರಿಶೋಧನಾ ಸಂಯೋಜಕಿಯಾಗಿರುವ 34 ವರ್ಷದ ಅರೋರಾ ಆಕಾಂಕ್ಷಾ, ವಿಶ್ವದ ಅತ್ಯುನ್ನತ ರಾಜತಾಂತ್ರಿಕ ಹುದ್ದೆಯಾಗಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿರುವುದಾಗಿ ಘೋಷಿಸಿದ್ದಾರೆ.
ಈ ತಿಂಗಳಿನಿಂದ ಸಾಮಾಜಿಕ ಜಾಲತಾಣಗಳಲ್ಲಿ #AroraForSG ಹೆಸರಿನ ಹ್ಯಾಷ್‌ಟ್ಯಾಗ್ ಮೂಲಕ ಪ್ರಚಾರ ಆರಂಭಿಸಿದ್ದಾರೆ.
ಹಾಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯಾಗಿರುವ 71 ವರ್ಷದ ಆ್ಯಂಟೊನಿಯೊ ಗುಟೆರ್ರೆಸ್ ಅವರ ಅಧಿಕಾರಾವಧಿ ಈ ವರ್ಷದ ಡಿ. 31ಕ್ಕೆ ಕೊನೆಗೊಳ್ಳಲಿದೆ. ಎರಡನೇ ಬಾರಿ ತಾವೇ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿಯುವ ಇಂಗಿತ ಆ್ಯಂಟೊನಿಯೊ ಗುಟೆರ್ರೆಸ್ ಅವರಿಗಿದೆ.
ಅರೋರಾ ಆಕಾಂಕ್ಷಾ ಅವರು ತಮ್ಮ ಪ್ರಚಾರಾಂದೋಲನದ ಭಾಗವಾಗಿ ಎರಡೂವರೆ ನಿಮಿಷಗಳ ವಿಡಿಯೋ ತುಣುಕೊಂದನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಕೂಡ ಮಾಡಿದ್ದಾರೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಇನ್ನೂ ಮದುವೆ ಆಗಿಲ್ಲ. ಆದರೆ ಹಲವರ ಜೊತೆ ಅವರು ಪ್ರೀತಿಯಲ್ಲಿ ಮುಳುಗಿದ್ದರು. ಅನೇಕ ನಟಿಯರ ಜೊತೆ ಅವರ ಹೆಸರು ಕೇಳಿಬರುತ್ತಲೇ ಇದೆ. ಅದರಲ್ಲಿ ಪಾಕಿಸ್ತಾನ ಮೂಲದ ಸೋಮಿ ಅಲಿ ಕೂಡ ಒಬ್ಬರು. ತಮ್ಮ 16ನೇ ವಯಸ್ಸಿನಲ್ಲಿಯೇ ಸಲ್ಮಾನ್ ಖಾನ್ ಮೇಲೆ ಅವರಿಗೆ ಕ್ರಶ್ ಆಗಿತ್ತು. ಹಾಗಾಗಿ ಅವರು ಮನೆ ಬಿಟ್ಟು ಮುಂಬೈಗೆ ಬಂದಿದ್ದರು.
ಸಲ್ಮಾನ್‌ರನ್ನು ಮದುವೆ ಆಗಬೇಕು ಎಂಬ ಉದ್ದೇಶ ಹೊಂದಿದ್ದ ಸೋಮಿ, ಬಾಲಿವುಡ್ ಸಿನಿಮಾಗಳಲ್ಲಿ ನಟನೆ ಶುರುಮಾಡಿದರು. ಆದರೆ ಅವರಿಗೆ ನಟನೆಯಲ್ಲಿ ಕಿಂಚಿತ್ತೂ ಆಸಕ್ತಿ ಇರಲಿಲ್ಲ. ರಿಹರ್ಸಲ್‌ಗಳಲ್ಲಿ ಅವರು ಭಾಗವಹಿಸುತ್ತಿರಲಿಲ್ಲ. ನಿರ್ದೇಶಕರಿಗೆ ಸೋಮಿ ಅಲಿಯ ಈ ಗುಣಗಳು ಇಷ್ಟ ಆಗುತ್ತಿರಲಿಲ್ಲವಂತೆ. ಹಾಗೋ ಹೀಗೋ 1999ರವರೆಗೆ ಒಂದಷ್ಟು ಸಿನಿಮಾಗಳಲ್ಲಿ ಸೋಮಿ ನಟಿಸಿದರು. ಜೊತೆಗೆ ಸಲ್ಮಾನ್ ಖಾನ್ ಜೊತೆ ಡೇಟಿಂಗ್ ಕೂಡ ಮಾಡಿದ್ದರು ಎಂಬ ಮಾತಿಗೆ.
ಕೊನೆಗೂ ಸಲ್ಮಾನ್ ಖಾನ್ ಜೊತೆ ಮದುವೆ ಆಗಲು ಸೋಮಿಗೆ ಸಾಧ್ಯವಾಗಲೇ ಇಲ್ಲ. ‘ನಿಜವಾದ ಪ್ರೀತಿಯನ್ನು ಹುಡುಕಿಕೊಂಡು ಹೋಗಿ ನಾನು ತುಂಬ ತಪ್ಪು ಮಾಡಿದೆ. ಕೊನೆಗೂ ಅದು ನನಗೆ ಸಿಗಲೇ ಇಲ್ಲ. ಹಾಗಂತ ನನಗೆ ಪಶ್ಚಾತ್ತಾಪ ಇಲ್ಲ. ಯಾಕೆಂದರೆ ಅದನ್ನೆಲ್ಲ ನಾನು ಮನಸಾರೆ ಮಾಡಿದ್ದೆ. 16ರಿಂದ 24ನೇ ವಯಸ್ಸಿನವರೆಗೆ ನನ್ನ ಜರ್ನಿ ತುಂಬ ಏಳು-ಬೀಳುಗಳಿಂದ ಕೂಡಿತ್ತು. ನಾನು ಯಾರಿಗಾಗಿ ಮುಂಬೈಗೆ ಬಂದಿದ್ದೆನೋ ಅವರ ಜೊತೆ ನನ್ನ ಸಂಬಂಧ ಕಡಿದುಕೊಂಡು 1999ರಲ್ಲಿ ಭಾರತ ಬಿಟ್ಟು ಬಂದೆ’ ಎಂದಿದ್ದಾರೆ ಸೋಮಿ. ಈಗ ಅವರು ಅಮೆರಿಕದಲ್ಲಿ ಎನ್‌ಜಿಓ ನಡೆಸುತ್ತಿದ್ದಾರೆ.