ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಸೆಮಿಫೈನಲ್ ನಲ್ಲಿ ಎಲ್ಲಾ ಬಲಿಷ್ಠ ತಂಡಗಳಿದ್ದು, ಭಾರತ ತಂಡ ಅತ್ಯುತ್ತಮ ನಿರ್ವಹಣೆ ತೋರಲಿದೆ. ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಆಟಗಾರ. ಕೊಹ್ಲಿ ನನಗೆ ಮಾತ್ರ ಅಲ್ಲ ಎಲ್ಲರಿಗೂ ನೆಚ್ಚಿನ ಆಟಗಾರ. ಈ ಬಾರಿ ಭಾರತ ವಿಶ್ವಕಪ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಅಗ್ರಸ್ಥಾನ ಪಡೆಯಲು ಪೈಪೋಟಿ ನಡೆಸುತ್ತಿವೆ. ಇಂದು ಈ ಎರಡೂ ತಂಡಗಳ ಫಲಿತಾಂಶ ಸೆಮಿಫೈನಲ್ ನಲ್ಲಿ ಈ ತಂಡಗಳು ಎದುರಿಸುವ ತಂಡವನ್ನು ನಿರ್ಧರಿಸಲಿದೆ.