ಲೂಟಿ ಮಾಡಿದವರ ಪರ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿರೋದು ದುರಂತ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಹಾಗು ಅವರು, ಮಾಜಿ ಸಚಿವ ಡಿ.ಕೆ.ಶಿವಕುಮಾರ ಹೆಸರಲ್ಲಿ 800 ಕೋಟಿ ರೂಪಾಯಿ ಆಸ್ತಿ ಇದೆ. ಅವರ ಮಗಳ ಹೆಸರಲ್ಲಿ 108 ಕೋಟಿ ಆಸ್ತಿ ಇದೆ.
ಈ ಬಗ್ಗೆ ತನಿಖೆ ನಡೆಯುತ್ತಿದ್ದು ಅದನ್ನೆಲ್ಲಾ ಅವರೇ ದುಡಿದು ಸಂಪಾದಿಸಿದ್ದರೇ ಎಂದು ಉತ್ತರ ಕೊಡಬೇಕು. ಇನ್ನೂ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ಲೂಟಿ ಮಾಡಿದವರ ಪರ ಪ್ರತಿಭಟನೆ ಮಾಡುತ್ತಿದ್ದು ಇದು ಖಂಡನೀಯ ಎಂದರು. ಅಲ್ಲದೇ ಜಾತಿ ಹೆಸರಲ್ಲಿ ಪ್ರತಿಭಟನೆ ಮಾಡಿದರೇ ಜನರು ಸೊಪ್ಪು ಹಾಕಲ್ಲ.