ಭ್ರಷ್ಟಾಚಾರ ಮರೆಮಾಚಲು ಜಾತಿಗಣತಿಯನ್ನು ಮುನ್ನಲೆಗೆ ತಂದಿದ್ದಾರೆ: ಬಿವೈ ವಿಜಯೇಂದ್ರ
ಬೆಂಗಳೂರು: ಭ್ರಷ್ಟಾಚಾರ ಮರೆಮಾಚಲು ಜಾತಿಗಣತಿಯನ್ನು ಮುನ್ನಲೆಗೆ ತಂದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಮರೆಮಾಚಲು ಜಾತಿಗಣತಿಯನ್ನು ಮುನ್ನಲೆಗೆ ತಂದಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ನವಾಲ್ಮೀಕಿ ನಿಗಮದಲ್ಲಿ, ಮುಡಾದಲ್ಲಿ ಹಗರಣ ಆಗಿದೆ. ಕಿಯೋನಿಕ್ಸ್ ನಲ್ಲಿ ಗುತ್ತಿಗೆದಾರರು ದಯಾಮರಣ ಕೋರಿದ್ದಾರೆ. ಇನ್ನೊಂದು ಕಡೆ ಆತ್ಮಹತ್ಯೆಗಳು ಆಗುತ್ತಿವೆ. ಜಾತಿ ಗಣತಿ ಹಿಂದೆ ಒಳ್ಳೇ ಉದ್ದೇಶ ಇದೆಯೋ, ದುರುದ್ದೇಶ ಇದೆಯೋ ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.