ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಸುಮಾರು ಒಂದೂವರೆ ಕೆಜಿ ತೂಕದ ಟೈಮ್ ಬಾಂಬ್ ಪತ್ತೆಯಾಗಿದ್ದು, ಪೊಲೀಸರು ತಕ್ಷಣವೇ ಅದನ್ನು ನಿಷ್ಕ್ರಿಯಗೊಳಿಸುವ ಮೂಲಕ ಭಾರೀ ಅನಾಹುತ ತಪ್ಪಿಸಿದ್ದಾರೆ. ಗಣರಾಜ್ಯೋತ್ಸವದ ಸಮೀಪದಲ್ಲೇ ಸಜೀವ ಬಾಂಬ್ ಪತ್ತೆಯಾಗಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ ಬ್ಯಾಗ್‍ನಲ್ಲಿ ಸಜೀವ ಬಾಂಬ್ ಇರಬಹುದೆಂಬ ಶಂಕೆ ವ್ಯಕ್ತವಾಯಿತು.ಕೂಡಲೇ ಪೊಲೀಸರು ಮುನ್ನೆಚ್ಚರಿಕೆ ಕ್ರಮಕೈಗೊಂಡು ಅಲ್ಲಿಂದ ಜನರನ್ನು ದೂರ ಕಳುಹಿಸಿದರು.
ಬ್ಯಾಗನ್ನು ಕಂಟ್ರೋಲ್ ಎಕ್ಸ್‍ಪೊಸಿವ್ ಡಿಫ್ಯೂಸ್ ಮಿಷನ್ ಒಳಗೆ ಹಾಕಲಾಯಿತು. ಮಿಷನ್ ಇದ್ದ ವಾಹನವನ್ನು ವಿವಿಐಪಿ ಕಾರು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಅದರ ಬಳಿ ಜನ ಹೋಗದಂತೆ ಎಚ್ಚರಿಕೆ ವಹಿಸಲಾಯಿತು. ನಂತರ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳಗಳು, ಮೆಟಲ್ ಡಿಟೆಕ್ಟರ್‍ಗಳೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದವು.