ಡಿಸೆಂಬರ್ 19ರಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಲ್ಲಿ ನಡೆದ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡು, ಸಾವು – ನೋವಿಗೆ ಕಾರಣವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸ್ಫೋಟಕ ಸುದ್ದಿಯೊಂದು ಹೊರಬಿದ್ದಿದೆ. ಈ ಹಿಂದೆ ಬಿಹಾರ, ಒಡಿಶಾದಲ್ಲಿ ಗಲಭೆಗೆ ಕುಮ್ಮಕ್ಕು ನೀಡಿದ್ದ ಸಂಘಟನೆಯ ಸದಸ್ಯನ ಕೈವಾಡ ಮಂಗಳೂರು ಹಿಂಸಾಚಾರದಲ್ಲೂ ಇದೆ ಎಂಬ ಆತಂಕಕಾರಿ ವಿಷಯ ತನಿಖಾಧಿಕಾರಿಗಳಿಗೆ ಸಿಕ್ಕಿದೆ.
ಬಿಹಾರ, ಒಡಿಶಾದಲ್ಲಿ ಹಿಂಸಾಚಾರಕ್ಕೆ ರೂಪುರೇಷೆ ರಚಿಸಿದ್ದ ಸಂಘಟನೆಯೇ ಮಂಗಳೂರು ಗಲಭೆಗೂ ಸ್ಕೆಚ್ ರೂಪಿಸಿತ್ತು ಎಂಬುದಕ್ಕೆ ಸಾಕ್ಷ್ಯಾಧಾರಗಳು ಸಿಕ್ಕಿದ್ದು, ಸಿಬಿಐ ತನಿಖಾ ತಂಡ ತನಿಖೆ ಚುರುಕುಗೊಳಿಸಿದೆ.
ಹಿಂಸಾತ್ಮಕ ಪ್ರತಿಭಟನೆಗೆ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿತ್ತು ಎಂದು ಪೊಲೀಸರು ಖಚಿತಪಡಿಸಿದ್ದು, ಪ್ರಕರಣಕ್ಕೆ ಸಂಬoಧಿಸಿದoತೆ ಹಲವು ವಿಡಿಯೋಗಳು ಕೂಡ ಸಿಕ್ಕಿವೆ. ಬಿಹಾರದಲ್ಲಿ ಕುಳಿತು ಸಂಘಟನೆಯ ದುಷ್ಕರ್ಮಿ ಕುಮ್ಮಕ್ಕು ನೀಡಿದ್ದಾನೆಂಬುದು ಸ್ಪಷ್ಟವಾಗಿದೆ. ಈತ ಪ್ರತಿಭಟನೆಯ ಮುನ್ನ ದಿನ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ಸಂದೇಶಗಳನ್ನು ಕಳುಹಿಸಿರುವ ಆಡಿಯೋ ಲಭ್ಯವಾಗಿದ್ದು, ಫರಂಗಿಪೇಟೆಯ ನಿವಾಸಿ, ಸಂಘಟನೆ ಮುಖಂಡನ ವಿರುದ್ಧ ಸೈಬರ್ ಕ್ರೈಂ ಹಾಗೂ ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬಂಧನದ ಭೀತಿಯಲ್ಲಿ ಆರೋಪಿ ಪರಾರಿಯಾಗಿದ್ದು, ಸಿ ಐ ಡಿ ಎಸ್ಪಿ ರಾಹುಲ್ ನೇತೃತ್ವದ ತಂಡ ತನಿಖೆ ಶುರು ಮಾಡಿದೆ. ಹಿಂಸಾಚಾರ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿ ಮಾಹಿತಿಗಳನ್ನು ಕಲೆಹಾಕಿ ಬೆಂಗಳೂರಿಗೆ ತೆರಳಿದೆ.
ಮಂಗಳೂರಿನ ಹಿಂಸಾಚಾರಕ್ಕೆ ಬಿಹಾರದಿಂದ ಸ್ಕೆಚ್ – ತನಿಖೆಯಿಂದ ಬಯಲಾದ ಅಸಲಿ ಸತ್ಯ!
Date: