ಮಂಗಳೂರು: ಪೊಲೀಸ್ ಪೇದೆಯಿಂದಲೇ ಬಾಲಕಿ ಮೇಲೆ ಅತ್ಯಾಚಾರ

Date:

ಸಮನ್ಸ್ ನೀಡಲು ಒಂದು ಮನೆಗೆ ತೆರಳುತ್ತಿದ್ದ ಪೊಲೀಸ್ ಕಾನ್ಸ್‌ಟೆಬಲ್, ಆ ಮನೆಯ ಅಪ್ರಾಪ್ತ ಬಾಲಕಿಯನ್ನೇ ಅತ್ಯಾಚಾರ ಮಾಡಿದ ಹೀನ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಂತೂರು ಗ್ರಾಮದ ಬೀರಂತಡ್ಕ ಎಂಬಲ್ಲಿ ನಡೆದಿದೆ. ಕಡಬ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್‌ಟೆಬಲ್ ಶಿವರಾಜ್ ನಾಯಕ್, ಬಾಲಕಿಯನ್ನು ಅತ್ಯಾಚಾರ ಮಾಡಿದ ಪಾಪಿ ಪೊಲೀಸ್ ಆಗಿದ್ದಾನೆ.

ಕುಂತೂರು ಗ್ರಾಮದ ಬೀರಂತಡ್ಕ ನಿವಾಸಿಯೊಬ್ಬರ 18 ವರ್ಷದ ಹಿರಿಯ ಮಗಳು ಅಪ್ರಾಪ್ತ ಬಾಲಕಿ, ಈ ಹಿಂದಿನ ಪ್ರಕರಣದ ಸಂತ್ರಸ್ತೆಯಾಗಿದ್ದು, ಈ ಪ್ರಕರಣದ ದಾಖಲೆ ಮತ್ತು ಸಮನ್ಸ್ ನೀಡುವ ಸಲುವಾಗಿ ಕಡಬ ಠಾಣೆಯ ಪೊಲೀಸ್ ಕಾನ್ಸ್‌ಟೆಬಲ್ ಶಿವರಾಜ್ ನಾಯಕ್ ಆ ಮನೆಗೆ ಹೋಗುತ್ತಿದ್ದ.

 

ಕಳೆದ ಆರು ತಿಂಗಳುಗಳಿಂದ ಶಿವರಾಜ್ ಆ ಮನೆಗೆ ಹೋಗುತ್ತಿದ್ದು, ಈ ವೇಳೆ ಹಿರಿಮಗಳ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಪ್ರಕರಣ ಮುಗಿದರೂ ಶಿವರಾಜ್ ಬೇರೆ ಬೇರೆ ಕಾರಣದ ನೆಪವೊಡ್ಡಿ ಮನೆಗೆ ‌ಬರುತ್ತಿದ್ದು, ಮನೆಯವರು ಯಾರೂ ಇಲ್ಲದ ಸಂದರ್ಭದಲ್ಲಿ ಬಾಲಕಿಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ.

 

ಬಾಲಕಿ ಗರ್ಭವತಿ ಆದ ಸಂದರ್ಭದಲ್ಲಿ ಶಿವರಾಜ್ ನಾಯಕ್‌ಗೆ ಬಾಲಕಿ ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಈ ವೇಳೆ ಶಿವರಾಜ್, ನಾನು ಮದುವೆಯಾಗೋದಿಲ್ಲ, ಗರ್ಭಿಣಿ ಆಗಿದ್ದರೆ ಅದನ್ನು ಅಬಾರ್ಷನ್ ಮಾಡಲು ತಗುಲುವ ವೆಚ್ಚ ಕೊಡುತ್ತೇನೆ ಎಂದು ಕೈ ತೊಳೆದುಕೊಳ್ಳಲು ಯತ್ನಿಸಿದ್ದಾನೆ.

ಈ ವಿಷಯ ಮನೆಯವರಿಗೆ ಗೊತ್ತಾಗಿ, ಮಗಳನ್ನು ಮದುವೆಯಾಗದಿದ್ದರೆ ಖರ್ಚು ಕೊಡುವುದು ಬೇಡ, ಅಬಾರ್ಷನ್ ಮಾಡಿಸುವುದೂ ಬೇಡ ಆಂತಾ ಅಘಾತಕ್ಕೊಳಗಾಗಿದ್ದಾರೆ. ಇದಾದ ಬಳಿಕ ಸೆಪ್ಟಂಬರ್ 18ರಂದು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿದ ತಾಯಿ- ಮಗಳು ಮತ್ತೆ ಮನೆಗೆ ಬಂದಿಲ್ಲ. ಬಾಲಕಿಯ ತಾಯಿ ತನ್ನ ಗಂಡನಿಗೆ ಕಾಲ್ ಮಾಡಿ, ಶಿವರಾಜ್ 35,000 ರೂಪಾಯಿಯನ್ನು ನಮಗೆ ಆನ್‌ಲೈನ್ ಮೂಲಕ ಕಳುಹಿಸಿದ್ದು, ನಾವೊಂದು ಕಡೆ ಇದ್ದೇವೆ ಅಂತಾ ಹೇಳಿದ್ದಾರೆ.

 

ಪಾಪಿ ಪೊಲೀಸ್ ಕಾನ್ಸ್‌ಟೆಬಲ್‌ನ ನೀಚ ಕೃತ್ಯಕ್ಕೆ ತನ್ನ ಕುಟುಂಬ ಬೀದಿಗೆ ಬಂದಿರುವುದರಿಂದ ಬಡ ತಂದೆ ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಶಿವರಾಜ್ ತನ್ನ ಪ್ರಭಾವವನ್ನು ಬಳಸಿ ತಾಯಿ- ಮಗಳನ್ನು ಅಜ್ಞಾತ ಸ್ಥಳದಲ್ಲಿ ಇರಿಸಿರುವ ಬಗ್ಗೆ ಕಡಬ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬಾಲಕಿ ತಂದೆ ಕೊಟ್ಟ ದೂರಿನ ಅನ್ವರ ಕಡಬ ಠಾಣೆಯಲ್ಲಿ ಪೊಲೀಸರು ಆರೋಪಿ ಶಿವರಾಜ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. 2021ರ ಮಾರ್ಚ್‌ನಿಂದ ಸಪ್ಟೆಂಬರ್ 18ರವರೆಗೆ ಬಾಲಕಿಗೆ ಅತ್ಯಾಚಾರ ಎಸಗಿರುವ ಬಗ್ಗೆ ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಪಾಪಿ ಪೊಲೀಸ್ ಕಾನ್ಸ್‌ಟೆಬಲ್ ವಿರುದ್ಧ ಫೋಸ್ಕೋ ಖಾಯಿದೆಯಡಿ ಪ್ರಕರಣ ದಾಖಲಾಗಿದೆ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...