ಇಡೀ ದೇಶದಲ್ಲಿ ತೀವ್ರ ಕುತೂಹಲ ಮೂಡಿಸಿರುವುದು ಮಂಡ್ಯ ಲೋಕಸಭಾ ಕ್ಷೇತ್ರ. ಒಂದು ಕಡೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಲ್ಲಿ ಸ್ಫರ್ಧೆ ಮಾಡಿದ್ದಾರೆ. ಇನ್ನೊಂದೆಡೆ ಅವರಿಗೆ ಪ್ರತಿಸ್ಪರ್ಧಿಯಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಕಣದಲ್ಲಿ ಸೆಣೆಸಿದ್ದಾರೆ.
ಲೋಕಸಭಾ ಎಲೆಕ್ಷನ್ ಅಂತೂ ಮುಗಿದಿದೆ. ಮತದಾರರು ಅಭ್ಯರ್ಥಿಗಳ ಭವಿಷ್ಯವನ್ನು ಮತಪೆಟ್ಟಿಗೆಗೆ ಹಾಕಿದ್ದಾರೆ, ಮತಪೆಟ್ಟಿಗೆಯಲ್ಲಿ ರಣಕಲಿಗಳ ಭವಿಷ್ಯ ಇದೆ, ಮೇ.23ರಂದು ಫಲಿತಾಂಶದ ಮೂಲಕ ಅವರ ಭವಿಷ್ಯ ನಿರ್ಧಾರವಾಗಲಿದೆ.
ಈಗ ಬಗ್ಗೆ ಮತಗಟ್ಟೆ ಸಮೀಕ್ಷೆಗಳು ಬಂದಿವೆ. ಕರ್ನಾಟಕದ ಚುನಾವಣೆಗೆ ಸಂಬಂಧಿಸಿದಂತೆ ಒಟ್ಟು 13 ಸಮೀಕ್ಷೆಗಳು ನಡೆದಿವೆ. 13 ಸಮೀಕ್ಷೆಗಳಲ್ಲಿ 8 ಸಮೀಕ್ಷೆಗಳು ಮಂಡ್ಯದಲ್ಲಿ ನಿಖಿಲ್ ಕುಮಾರ ಸ್ವಾಮಿ ಗೆಲ್ಲುವುದು ಖಚಿತ ಎಂದು ಹೇಳುತ್ತಿವೆ. ಉಳಿದ 5 ಸಮೀಕ್ಷೆಗಳ ಪ್ರಕಾರ ನಿಖಿಲ್ ಅವರನ್ನು ಹಿಂದಿಕ್ಕಿ ಸುಮಲತಾ ಅಂಬರೀಶ್ ಜಯಭೇರಿ ಬಾರಿಸುತ್ತಾರೆ.
ಒಟ್ಟಿನಲ್ಲಿ ಎಲ್ಲಾ ಸಮೀಕ್ಷೆಗಳ ಪ್ರಕಾರ ರಾಷ್ಟ್ರದಲ್ಲಿ ಎನ್ಡಿಎ ಅತೀ ಹೆಚ್ಚು ಸ್ಥಾನಗಳಲ್ಲಿ ಜಯ ಸಾಧಿಸಿ ಈ ಬಾರಿಯೂ ಅಧಿಕಾರ ಗದ್ದುಗೆಯನ್ನು ಏರಲಿದೆ. ಕರ್ನಾಟಕದಲ್ಲಿಯೂ ಬಿಜೆಪಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗಿಂತ ಹೆಚ್ಚು ಸ್ಥಾನ ಪಡೆಯಲಿದೆ.