ಏಪ್ರಿಲ್ 11 ರಿಂದ ಮೇ 19ರವರೆಗೆ ದೇಶದ 542 ಕ್ಷೇತ್ರಗಳಿಗೆ ಒಟ್ಟು 7 ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಿತು. 543 ಕ್ಷೇತ್ರಗಳ ಪೈಕಿ ತಮಿಳುನಾಡಿನ ವೆಲ್ಲೂರಿನಲ್ಲಿ ಮಾತ್ರ ಎಲೆಕ್ಷನ್ ನಡೆದಿಲ್ಲ. ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 18 ಮತ್ತು ಏಪ್ರಿಲ್ 23ರಂದು ಒಟ್ಟು 2 ಹಂತಗಳಲ್ಲಿ ಎಲೆಕ್ಷನ್ ನಡೆದಿತ್ತು.
ಈ 28 ಕ್ಷೇತ್ರಗಳಲ್ಲಿ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆದಿದ್ದ ಕ್ಷೇತ್ರ ಮಂಡ್ಯ. ಅಲ್ಲಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರ ಸ್ವಾಮಿ ಮೈತ್ರಿ ಅಭ್ಯರ್ಥಿಯಾಗಿ ಅಖಾಡದಲ್ಲಿ ಸೆಣೆಸಿದ್ದರು. ಅವರ ಪ್ರತಿಸ್ಪರ್ಧಿಯಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಅವರು ಕಣದಲ್ಲಿದ್ದರು. ನಿನ್ನೆಯಷ್ಟೇ ಫಲಿತಾಂಶ ಬಂದಿದೆ. ಸುಮಲತಾ ಅಂಬರೀಶ್ 1 ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ್ದಾರೆ. ಇಡೀ ಸರ್ಕಾರವನ್ನು ಎದುರು ಹಾಕಿಕೊಂಡು ಮಂಡ್ಯ ಜನರಲ್ಲಿ ಸ್ವಾಭಿಮಾನದ ಭಿಕ್ಷೆ ಕೇಳಿದ ಸುಮಲತಾ ಅವರನ್ನು ಅಲ್ಲಿನ ಜನ ಹರಸಿದ್ದಾರೆ.
ಇವೆಲ್ಲಾ ಈಗ ಮುಗಿದ ಕಥೆ. ಆದರೆ, ಸುಮಲತಾ ಅವರ ಗೆಲುವು, ನಿಖಿಲ್ ಅವರ ಸೋಲಿನಿಂದ ಕುರುಕ್ಷೇತ್ರ ಸಿನಿಮಾದ ಮೇಲೂ ಪರಿಣಾಮ ಬೀರಲಿದೆ. ನಿಖಿಲ್ ಸೋಲಿಗೂ ಕುರುಕ್ಷೇತ್ರ ಸಿನಿಮಾಕ್ಕೆ ತೊಂದರೆ ಆಗುವುದಕ್ಕೂ ಕಾರಣ ಆ ಸಿನಿಮಾದ ನಿರ್ಮಾಪಕ ಮುನಿರತ್ನ..!
ಹೌದು ಮುನಿರತ್ನ ಅವರು ಮಂಡ್ಯದಲ್ಲಿ ನಿಖಿಲ್ ಅವರ ಪರ ಪ್ರಚಾರ ಮಾಡುವಾಗ. ನಿಖಿಲ್ ಸೋತರೆ ನಾನು ಕುರುಕ್ಷೇತ್ರ ರಿಲೀಸ್ ಮಾಡಲ್ಲ ಎಂದು ಹೇಳಿದ್ದರು. ಆ ಸಿನಿಮಾದಲ್ಲಿ ನಿಖಿಲ್ ಅಭಿಮನ್ಯವಾಗಿ ನಟಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನಾಗಿದ್ದಾರೆ. ದರ್ಶನ್ ಅವರು ಸುಮಲತಾ ಪರ ಪ್ರಚಾರ ಮಾಡಿದ್ದರು ಎಂಬುದು ಕೂಡ ಒಂದೇ ಸಿನಿಮಾದಲ್ಲಿ ದರ್ಶನ್, ನಿಖಿಲ್ ಅಭಿನಯಿಸಿದ್ದಾರೆ ಎನ್ನುವಾಗ ನೆನಪಾಗುತ್ತದೆ.
ಮುನಿರತ್ನ ಕುರುಕ್ಷೇತ್ರದ ಬಗ್ಗೆ ಈಗೇನಂತಾರೆ?
ಮಂಡ್ಯದಲ್ಲಿ ನಿಖಿಲ್ ಸೋಲು ‘ಕರುಕ್ಷೇತ್ರ’ ರಿಲೀಸ್ ಆಗಲ್ವಾ?
Date: