ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ನಟ ಅಭಿಷೇಕ್ ಅಂಬರೀಶ್ ತಂದೆಯ ರೀತಿ ಜನರ ಜೊತೆ ಬೆರೆಯುವ ವ್ಯಕ್ತಿ ಎನ್ನುವುದು ಗೊತ್ತಿರುವ ವಿಚಾರವೇ. ಅಭಿಮಾನಿಗಳಿಗೆ ಅಂಬರೀಶ್ ಎಷ್ಟು ಗೌರವ ಪ್ರೀತಿ ತೋರಿಸುತ್ತಿದ್ದರೋ ಅದೇ ರೀತಿ ಅಭಿಷೇಕ್ ಕೂಡ ಅಭಿಮಾನಿಗಳನ್ನು ಗೌರವಿಸುತ್ತಾರೆ.
ಅದಕ್ಕೆ ತ ಉದಾಹರಣೆಯಂತೆ ಮಂಡ್ಯದಲ್ಲಿ ಹುಡುಗರ ಜೊತೆ ಕ್ರಿಕೆಟ್ ಆಡಿದ್ದು ಇತ್ತೀಚೆಗೆ ಮಂಡ್ಯದಲ್ಲಿ ಅಂಬಿ ಹೆಸರಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು.ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಇಲ್ಲಿಗೆ ಆಗಮಿಸಿದ ಅಭಿ, ಅವರ ಜೊತೆ ಬ್ಯಾಟ್ ಹಿಡಿದು ಬೌಂಡರಿ ಬಾರಿಸಿದ್ದು ಅಭಿಮಾನಿಗಳಿಗೆ ಕುಶಿ ತಂದಿದೆ.