ಎಲ್ಲೆಡೆ ಚರ್ಚೆ ಆಗುತ್ತಿರುವ ಕ್ಷೇತ್ರ ಮಂಡ್ಯ ಲೋಕಸಭಾ ಕ್ಷೇತ್ರ. ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಮಗ, ಜೆಡಿಎಸ್ನ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ನಡುವಿನ ಸ್ಪರ್ಧೆ ಇಲ್ಲಿದೆ.
ಸುಮಲತಾ ಅವರ ವಿರುದ್ಧವಾಗಿ ಮೂವರು ಸುಮಲತಾರನ್ನು ಕಣಕ್ಕಿಳಿಸಿ ಸುಮಲತಾ ಹೆಸರಿನ ರಾಜಕೀಯ ಆಯಿತು. ಈಗ ಮೇಕಪ್ ರಾಜಕಾರಣ ಎನ್ನುವ ಹೊಸ ಮಾದರಿಯ ರಾಜಕಾರಣ ಮಂಡ್ಯದಲ್ಲಿ ಆರಂಭವಾಗಿದೆ.
ಸುಮಲತಾ ಅಂಬರೀಶ್ ಅವರ ಸ್ಟೈಲ್ನಲ್ಲೇ ಕ್ರಮಸಂಖ್ಯೆ 19r ಸುಮಲತಾ ಅವರ ಫೋಟೋವನ್ನು ಮೇಕಪ್ ಮಾಡಿ ಹಾಕಿದ್ದಾರೆ. ಸುಮಲತಾ ಅವರ ಸ್ಟೈಲ್ನಲ್ಲಿ ಸೀರೆ ಉಟ್ಟು, ಕನ್ನಡಕ ಹಾಕಿಕೊಂಡ 19 ಕ್ರಮಸಂಖ್ಯೆಯ ಸುಮಲತಾ ಫೋಟೋ ತೆಗೆಸಿ ಆ ಫೋಟೋವನ್ನು ನೀಡಿದ್ದಾರೆ. ಅದೇ ಎಲೆಕ್ಷನ್ನಲ್ಲೂ ಬಳಸಿಕೊಳ್ಳಲಾಗಿದೆ.
ಮಂಡ್ಯದಲ್ಲೀಗ ಮೇಕಪ್ ರಾಜಕಾರಣ ಶುರು..!
Date: