ಲೋಕಸಭಾ ಚುನಾವಣೆ ಕಾವು ತಣಿದಿದೆ. ಇಂದು ಕೊನೆಯ ಹಾಗೂ 7ನೇ ಹಂತದ ಮತ ಹಬ್ಬ ನಡೆಯುತ್ತಿದೆ. ಕರ್ನಾಟಕದಲ್ಲಿ ಏಪ್ರಿಲ್ 18 ಮತ್ತು ಏಪ್ರಿಲ್ 23ಕ್ಕೆ ಮತದಾನದ ಸಡಗರ ಇತ್ತು.
ಕರ್ನಾಟಕದ 28ಲೋಕಸಭಾ ಕ್ಷೇತ್ರಗಳಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಕಡೆಗೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಮೈತ್ರಿ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಧರ್ಮಪತ್ನಿ ಸುಮಲತಾ ಅಂಬರೀಶ್ ಅವರು ಕಣದಲ್ಲಿ ಇರುವುದರಿಂದ ಆ ಕಣ ಭಾರಿ ಕುತೂಹಲವನ್ನು ಹುಟ್ಟು ಹಾಕಿದೆ.
ಮಂಡ್ಯ ಲೋಕಸಭಾ ಚುನಾವಣೆ ಎಂದೊಡನೆ ಸುಮಲತಾ ಅಂಬರೀಶ್ ಅವರ ಪರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಚುನಾವಣೆಯಲ್ಲಿ ಓಡಾಡಿದ್ದು ಖರ್ಚಿನ ಜವಬ್ದಾರಿ ಹೊತ್ತಿದ್ದು ತಿಳಿದಿದೆ. ಆದರೆ ಅವರೀಗ ಮಂಡ್ಯದ ಜನರಿಗೆ ಮೋಸ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ರಾಕ್ ಲೈನ್ ಪ್ರಚಾರಕ್ಕೆ ತಂದಿದ್ದ ವಾಹನಗಳಿಗೆ ಬಾಡಿಗೆ ಕೊಟ್ಟಿಲ್ಲ. ಫೋನ್ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ವಾಟ್ಸ್ ಆ್ಯಪ್ ನಲ್ಲಿ ಭಾರೀ ಚರ್ಚೆಗಳಾಗುತ್ತಿವೆ. ಆದರೆ, ರಾಕ್ ಲೈನ್ ಗೆ ಈ ಎಲೆಕ್ಷನ್ ಎಲ್ಲಾ ಹೊಸದು ಎಲ್ಲಾ ಸರಿ ಆಗುತ್ತದೆ ಎಂದು ಸುಮಲತಾ ಅವರ ಬೆಂಬಲಿಗರು ಟೀಕಾಕಾರರ ಮನವೊಲಿಸುತ್ತಿದ್ದಾರೆ.
ಈ ಬಗ್ಗೆ ರಾಕ್ ಲೈನ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ನಿಜಕ್ಕೂ ರಾಕ್ ಲೈನ್ ವೆಂಕಟೇಶ್ ಅವರು ಬಾಡಿಗೆ ಕೊಡದೇ ವಂಚಿಸಿದ್ದಾರಾ? ಕರೆ ಸ್ವೀಕರಿಸದೆ ಸತಾಯಿಸುತ್ತಿದ್ದಾರಾ ಎನ್ನುವುದರ ಬಗ್ಗೆ ಪರ ವಿರೋಧ ಚರ್ಚೆ ಸೋಶಿಯಲ್ ಮೀಡಿಯಾದಲ್ಲಾಗುತ್ತಿದೆ.
ಮಂಡ್ಯ ಜನರಿಗೆ ರಾಕ್ ಲೈನ್ ವೆಂಕಟೇಶ್ ಇಂಥಾ ಮೋಸ ಮಾಡಿದ್ದಾರಂತೆ ಹೌದ?
Date: