ಜೆಡಿಎಸ್ ಶಾಸಕ ಜಮೀರ್ ಅಹ್ಮದ್ ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಮಗ ಜನಬ್ ಜೈದ್ ಜೊತೆ ಪುನೀತ್ ಅವರ ನಿವಾಸಕ್ಕೆ ಭೇಟಿ ನೀಡಿದ ಜಮೀರ್ ಅಹಮದ್ ಖಾನ್ ಅವರು ತಮ್ಮ ಮಗಳ ಮದುವೆಗೆ ಪುನೀತ್ ಅವರನ್ನು ಆಮಂತ್ರಿಸಿದರು. ಈ ವಿಷಯವನ್ನು ಜಮೀರ್ ಅಹ್ಮದ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಪುನೀತ್ ಮಾತ್ರವಲ್ಲದೆ ರಾಘಣ್ಣ, ಯಶ್ ಮತ್ತು ಸುದೀಪ್ ಅವರ ಮನೆಗೂ ಸಹ ಜಮೀರ್ ಅಹ್ಮದ್ ಅವರು ಭೇಟಿ ನೀಡಿ ತಮ್ಮ ಮಗಳ ಮದುವೆಗೆ ಅವರೆಲ್ಲರನ್ನೂ ಆಮಂತ್ರಿಸಿದ್ದಾರೆ. ಜಮೀರ್ ಅಹಮದ್ ಅವರ ಮಗ ಕೂಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದು ಈಗಾಗಲೇ ಸಿನಿಮಾವೊಂದನ್ನು ಅನೌನ್ಸ್ ಕೂಡ ಮಾಡಿದ್ದಾರೆ.